ಉಡುಪಿಯಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ಆಯೋಜಿಸಿದ್ದ ಮುಖವರ್ಣಿಕೆ ಶಿಬಿರ ಸಂಪನ್ನಗೊಂಡಿತು. ವಿ.ಜಿ. ಶೆಟ್ಟಿ, ಯು. ವಿಶ್ವನಾಥ ಶೆಣೈ, ತಾರಾದೇವಿ, ನಿರಂಜನ ಭಟ್, ಯು. ಅನಂತರಾಜ ಉಪಾಧ್ಯ, ಎಚ್.ಎನ್. ವೆಂಕಟೇಶ್, ಎನ್. ರಾಮ ಭಟ್, ಡಾ. ಪ್ರತಿಮಾ ಜೆ. ಆಚಾರ್ಯ, ರವಿರಾಜ್ ಎಚ್.ಪಿ., ನಾರಾಯಣ ಎಂ. ಹೆಗಡೆ, ಮುರಲಿ ಕಡೆಕಾರ್ ಇತರರಿದ್ದರು.
* ಸುಬ್ರಾಯ ಭಾಗವತರಿಗೆ ಶ್ರದ್ಧಾಂಜಲಿ
ಉಡುಪಿ: ಯಕ್ಷಶಿಕ್ಷಣ ಟ್ರಸ್ಟ್ (ರಿ.) ಉಡುಪಿ ವತಿಯಿಂದ ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ಮುಖವರ್ಣಿಕೆ ಶಿಬಿರವು ಗುರುವಾರ (ಮೇ 14) ಸಮಾಪನಗೊಂಡಿತು.
ಸಂಸ್ಥೆಯ ಉಪಾಧ್ಯಕ್ಷ ವಿ.ಜಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಯು. ವಿಶ್ವನಾಥ ಶೆಣೈ, ತಾರಾದೇವಿ, ಸಂಸ್ಥೆಯ ಸದಸ್ಯರಾದ ನಿರಂಜನ ಭಟ್, ಯು. ಅನಂತರಾಜ ಉಪಾಧ್ಯ, ಎಚ್.ಎನ್. ವೆಂಕಟೇಶ್, ಎನ್. ರಾಮ ಭಟ್, ಡಾ. ಪ್ರತಿಮಾ ಜೆ. ಆಚಾರ್ಯ, ರವಿರಾಜ್ ಎಚ್.ಪಿ., ಪ್ರಶಾಂತ್ ಕಾಮತ್ ಉಪಸ್ಥಿತರಿದ್ದರು.
ಕಪ್ಪೆಕೆರೆ ಸುಬ್ರಾಯ ಭಾಗವತರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಸಂಸ್ಥೆಯ ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರು.
ಶಿಬಿರದಲ್ಲಿ ವೇಷಭೂಷಣ ಕಲಿತ ಮಕ್ಕಳು
ಯಕ್ಷಗುರು ಸಂಜೀವ ಸುವರ್ಣ ನಿರ್ದೇಶನದಲ್ಲಿ ಪ್ರಸಾಧನ ತಜ್ಞ ಮಿಥುನ್ ನಾಯಕ್ ಅವರು ಶಿಬಿರದಲ್ಲಿ ಪಾಲ್ಗೊಂಡಿದ್ದ 28 ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಮಕ್ಕಳು ಸ್ವತಂತ್ರವಾಗಿ ವಿವಿಧ ವೇಷಗಳ ಮುಖವರ್ಣಿಕೆ, ಕಸೆ, ಗೆಜ್ಜೆ ಮತ್ತು ವೇಷಭೂಷಣ ಕಟ್ಟಿಕೊಳ್ಳುವುದನ್ನು ಕಲಿತುಕೊಂಡರು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಅಭ್ಯಾಸ ಮಾಡಲು ಪೂರಕವಾಗುವಂತೆ ಬಣ್ಣದ ಕಿಟ್ ವಿತರಿಸಲಾಯಿತು.