ಉಡುಪಿಯ ಜಿಲ್ಲಾ ಕಾರಾಗೃಹದಲ್ಲಿ ಜೈಲುವಾಸಿಗಳಿಗೆ ಆಯೋಜಿಸಿದ್ದ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪದಲ್ಲಿ ಅಬೀದ್​ ಗದ್ಯಾಳ್​ ಮಾತನಾಡಿದರು. ವಿಜಯಕುಮಾರ್​ ಡಿ. ಚವ್ಹಾಣ, ಗಂಗಾಧರ್​ ಎಚ್​.ಕೆ., ಹರೀಶ್​ ಜಿ., ಅರುಣ್​ ಬಿ., ಡಾ. ಬೊಮ್ಮಯ್ಯ ಎಂ. ಇದ್ದರು. 
ಉಡುಪಿ

ನಿಷ್ಠೆ ಇದ್ದಲ್ಲಿ ಉದ್ಯಮದಲ್ಲಿ ಯಶಸ್ಸು ಸಾಧ್ಯ

ಉಡುಪಿ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಅಭಿಪ್ರಾಯ

* ಜೈಲುವಾಸಿಗಳಿಗೆ ಉದ್ಯಮಶೀಲತಾ ತರಬೇತಿಯ ಸಮಾರೋಪ

ಉಡುಪಿ: ಯಾವುದೇ ಉದ್ಯಮದಲ್ಲಿ ತೊಡಗಿದಾಗ ಅದಕ್ಕೆ ತಕ್ಕುದಾದ ಸಮಸ್ಯೆಯನ್ನೂ ಎದುರಿಸಬೇಕಾಗುತ್ತದೆ. ಉದ್ಯಮದಲ್ಲಿ ಉನ್ನತಿ ಸಾಧಿಸಲು ಆ ಕುರಿತು ನಿಷ್ಠೆ ಬೆಳೆಸಿಕೊಳ್ಳಬೇಕು. ಅದರಿಂದ ಯಶಸ್ವಿಯಾಗಿ ಉದ್ಯಮ ನಡೆಸಲು ಸಾಧ್ಯ. ಇಂದು ಸ್ವಉದ್ಯೋಗದ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಸಹಕರಿಸುವ ರುಡ್​ಸೆಟ್​ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಅಭಿಪ್ರಾಯಪಟ್ಟರು.
ಉಡುಪಿಯ ಹಿರಿಯಡ್ಕದಲ್ಲಿರುವ ಕಾರಾಗೃಹದಲ್ಲಿ ಉಡುಪಿ ಜಿಪಂ, ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆ, ಜಿಲ್ಲಾ ಕಾರಾಗೃಹ ಹಿರಿಯಡ್ಕ ಮತ್ತು ರುಡ್​ಸೆಟ್​ ಸಂಸ್ಥೆ ಬ್ರಹ್ಮಾವರ ಆಶ್ರಯದಲ್ಲಿ ಆರು ದಿನಗಳ ಕಾಲ ಜೈಲುವಾಸಿಗಳಿಗೆ ಆಯೋಜಿಸಿದ್ದ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಉಡುಪಿ ಜಿಲ್ಲಾ ಲೀಡ್​ ಮೆನೇಜರ್​ ಹರೀಶ್​ ಜಿ., ಉಡುಪಿ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಅರುಣ್​ ಬಿ., ರುಡ್​ಸೆಟ್​ ಸಂಸ್ಥೆಯ ನಿರ್ದೇಶಕ ಡಾ. ಬೊಮ್ಮಯ್ಯ ಎಂ. ಮಾತನಾಡಿದರು. ಉಡುಪಿ ಜಿಲ್ಲಾ ಕಾರಾಗೃಹ ಅಧೀಕ್ಷಕ ವಿಜಯಕುಮಾರ್​ ಡಿ. ಚವ್ಹಾಣ ಅಧ್ಯತಕ್ಷತೆ ವಹಿಸಿದ್ದರು. 
ಜಿಲ್ಲಾ ಕಾರಾಗೃಹದ ಸಿಬ್ಬಂದಿ ರೇಷ್ಮಾ ನಾಯಕ್​ ಸ್ವಾಗತಿಸಿದರು. ಕಚೇರಿಯ ಹಿರಿಯ ಸಹಾಯಕಿ ಶ್ರುತಿ ಪಿ.ಕುಮ್ಟಾಕರ್​ ವಂದಿಸಿದರು. ಕಚೇರಿಯ ಸಹಾಯಕ ಶಾಂತಪ್ಪ ಕಾರ್ಯಕ್ರಮ ನಿರೂಪಿಸಿದರು.
"

ಅಪರಾಧಿಕ ಮನೋಭಾವನೆಯಿಂದ ಹೊರಬಂದು ಸಮಾಜದಲ್ಲಿ ಎಲ್ಲರೊಂದಿಗೆ ಒಳ್ಳೆಯ ಜೀವನ ಮಾಡಬೇಕು. ಬ್ಯಾಂಕಿನಿಂದ ಸಿಗುವ ಸಾಲ-ಸೌಲಭ್ಯ ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಿರಿ. ಬದುಕಿನಲ್ಲಿ ಛಲವಿದ್ದರೆ ಎಲ್ಲಿ ಬೇಕಾದರೂ ಜೀವನ ಕಟ್ಟಿಕೊಳ್ಳಬಹುದು. ಮುಂದಿನ ಜೀವನದಲ್ಲಿ ಯಶಸ್ವಿ ಉದ್ಯಮಿಯಾಗಿ, ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ.

— ಗಂಗಾಧರ್​ ಎಚ್​.ಕೆ. ಕೆನರಾ ಬ್ಯಾಂಕ್​ ಮಣಿಪಾಲ ವೃತ್ತ ಕಚೇರಿಯ ಮಹಾ ಪ್ರಬಂಧಕ.