ಉಡುಪಿಯ ಹಿರಿಯಡ್ಕ ಕಾಲೇಜಿನಲ್ಲಿ ನಡೆದ ಡಾ. ಜಿ.ಶಂಕರ್ ಮಹಿಳಾ ಕಾಲೇಜಿನ ಎನ್ಎಸ್ಎಸ್ ಶಿಬಿರದ ಸಮಾರೋಪದಲ್ಲಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿದರು. ಡಾ. ಎನ್.ಎಸ್. ಶೆಟ್ಟಿ, ಸೋಜನ್ ಕೆ.ಜಿ., ಡಾ. ಜಯಪ್ರಕಾಶ್ ಶೆಟ್ಟಿ, ವಾಸುದೇವ್ ಭಟ್, ಡಾ. ದಿವ್ಯಾ ಎಂ.ಎಸ್., ಡಾ. ಜಯಮಂಗಳಾ ಇತರರಿದ್ದರು.
* ಹಿರಿಯಡ್ಕ ಕಾಲೇಜಿನಲ್ಲಿ ಸಮಾರೋಪ ಸಮಾರಂಭ
ಉಡುಪಿ: ಅಜ್ಜರಕಾಡುನಲ್ಲಿರುವ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆ-2026ರ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಕಾರ್ಯಕ್ರಮ ಹಿರಿಯಡ್ಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನಲ್ಲಿ ನಡೆಯಿತು.
ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲೆಯ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು, ನಿಟ್ಟೆ ವಿಶ್ವವಿದ್ಯಾನಿಲಯದ ಎಮಿರೆಟಸ್ ಪ್ರೊಫೆಸರ್ ಡಾ. ಎನ್.ಎಸ್. ಶೆಟ್ಟಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಾಲೇಜ್ನ ಪ್ರಾಂಶುಪಾಲ ಸೋಜನ್ ಕೆ.ಜಿ. ಅಧ್ಯಕ್ಷತೆ ವಹಿಸಿದ್ದರು.
ಹಿರಿಯಡ್ಕ ಕಾಲೇಜ್ನ ಪ್ರಾಂಶುಪಾಲರಾದ ಡಾ. ಜಯಪ್ರಕಾಶ್ ಶೆಟ್ಟಿ, ಎನ್.ಪಿ. ಇಂಡಸ್ಟ್ರೀಸ್ನ ಮಾಲೀಕ ವಾಸುದೇವ್ ಭಟ್, ಕೆನರಾ ಬ್ಯಾಂಕ್ನ ಐಟಿ ಮೆನೇಜರ್ ಅಪ್ಪು ನಾಯಕ್, ಉದ್ಯಮಿಗಳಾದ ಪ್ರಕಾಶ್ ಶೆಟ್ಟಿ, ರತ್ನಾಕರ್ ಶೆಟ್ಟಿ, ಉಡುಪಿ ಜಿಲ್ಲೆಯ ಎನ್ಎಸ್ಎಸ್ ನೋಡಲ್ ಅಧಿಕಾರಿ ಡಾ. ರಾಜೇಂದ್ರ ಕೆ., ಸಹಶಿಬಿರಾಧಿಕಾರಿಗಳಾದ ಡಾ. ದಿವ್ಯಾ ಎಂ.ಎಸ್., ವೆಂಕಟೇಶ್ ಮತ್ತು ಕೃಷ್ಣರಾಜ್ ಭಟ್ ಉಪಸ್ಥಿತರಿದ್ದರು.
ಶಿಬಿರಾಧಿಕಾರಿ ಡಾ. ಜಯಮಂಗಳಾ ಸ್ವಾಗತಿಸಿದರು. ಡಾ. ರವೀಶ್ ಬಿ. ವಂದಿಸಿದರು.