ಉಡುಪಿ ಮಲ್ಪೆಯ ಬೀಚ್ನಲ್ಲಿ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮವನ್ನು ನ್ಯಾ.ಮನು ಪಟೇಲ್ ಬಿ.ವೈ. ಉದ್ಘಾಟಿಸಿದರು. ರಾಜಶೇಖರ್ ಬಿ. ಪುರಾಣಿಕ್, ಕೆ. ಕೀರ್ತಿ ಕುಮಾರ್, ಶ್ರೀನಿಕೇತನ್, ಜಯಪ್ರಕಾಶ್ ನಾಯಕ್, ಡಾ. ಅಮೃತಾ ಎ.ಎಸ್. ಹಾಗೂ ವಿದ್ಯಾರ್ಥಿಗಳು ಇದ್ದರು.
* ನ್ಯಾಯಾಧೀಶ ಮನು ಪಟೇಲ್ ಬಿ.ವೈ. ಅನಿಸಿಕೆ
* ಮಲ್ಪೆಯಲ್ಲಿ ಬೀಚ್ ಸ್ವಚ್ಛತಾ ಕಾರ್ಯಕ್ರಮ
ಉಡುಪಿ: ಮನೆ ಹಾಗೂ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪರಿಸರ ಶುಭ್ರವಾಗಿದ್ದಲ್ಲಿ ಎಲ್ಲರ ಆರೋಗ್ಯವೂ ಸುಸ್ಥಿರವಾಗಿರುತ್ತದೆ. ಸ್ವಚ್ಛತೆ ಕುರಿತು ಸಾರ್ವಜನಿಕರಿಗೆ ಅರಿವು, ಜಾಗೃತಿ ಮೂಡಿಸಲು ಬೀಚ್ ಕ್ಲೀನಿಂಗ್ ಕಾರ್ಯಕ್ರಮ ಪೂರಕ ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಮನು ಪಟೇಲ್ ಬಿ.ವೈ. ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಮಲ್ಪೆ ಬೀಚ್ನಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಉಡುಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲೆಯ ಉದ್ದಿಮೆದಾರರು ಮತ್ತು ವಿದ್ಯಾರ್ಥಿಗಳ ನೇತೃದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ 'ಪ್ರಕೃತಿಯಿಂದ ಪ್ರೇರಿತಗೊಂಡು ಉತ್ತಮ ಹವಾಮಾನಕ್ಕಾಗಿ ಹಾಗೂ ನಮ್ಮ ಭವಿಷ್ಯಕ್ಕಾಗಿ' ಎಂಬ ಘೋಷಣೆಯ ಸ್ವಚ್ಛತಾ ಕಾರ್ಯಕ್ರಮವನ್ನು ಸೋಮವಾರ (ಮೇ 1) ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ವಲಯ ಹಿರಿಯ ಪರಿಸರ ಅಧಿಕಾರಿ ರಾಜಶೇಖರ್ ಬಿ. ಪುರಾಣಿಕ್, ಪರಿಸರ ಅಧಿಕಾರಿ ಕೆ. ಕೀರ್ತಿ ಕುಮಾರ್, ಎನ್ಐಟಿಕೆ ಸುರತ್ಕಲ್ನ ನಿವೃತ್ತ ಪ್ರಾಧ್ಯಾಪಕ ಶ್ರೀನಿಕೇತನ್, ಮಂಗಳೂರು ಪ್ರಾದೇಶಿಕ ಪ್ರಯೋಗಾಲಯದ ನಿವೃತ್ತ ಹಿರಿಯ ವೈಜ್ಞಾನಿಕ ಅಧಿಕಾರಿ ಜಯಪ್ರಕಾಶ್ ನಾಯಕ್, ಉಡುಪಿ ವಲಯ ಉಪ ಪರಿಸರ ಅಧಿಕಾರಿ ಡಾ. ಅಮೃತಾ ಎ.ಎಸ್. ಇತರರು ಉಪಸ್ಥಿತರಿದ್ದರು.
ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಲ್ಪೆ ಬೀಚ್ನ ತೀರದಲ್ಲಿ ಸ್ವಚ್ಛತೆ ನಡೆಸಿದರು.