ಮೂಡ್ಲಕಟ್ಟೆ ರೈಲು ನಿಲ್ದಾಣದ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಎಸ್​.ಕೆ.ಭಟ್​, ಗಣೇಶ್​ ಪುತ್ರನ್​, ಸುನೀಲ್​ ಮೊದಲಾದವರಿದ್ದರು. 
ಉಡುಪಿ

ಮೂಡ್ಲಕಟ್ಟೆ ರೈಲು ನಿಲ್ದಾಣ ಪರಿಸರ ಸ್ವಚ್ಛತೆ

ಪ್ರಮುಖ ಮುಖ್ಯಾಂಶಗಳು

  • ನೂರಕ್ಕೂ ಮಿಕ್ಕಿ ಗೋಣಿ ಚೀಲಗಳಲ್ಲಿ ಕಸ ಸಂಗ್ರಹ
  • ಸಮರ್ಪಕ ವಿಲೇವಾರಿ
  • ವಿವಿಧ ಸಂಘಟನೆಗಳ ಸಾಥ್​
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಮೂಡ್ಲಕಟ್ಟೆ ರೈಲು ನಿಲ್ದಾಣ ಪರಿಸರದಲ್ಲಿ ಕ್ಲೀನ್​ ಕುಂದಾಪುರ ತಂಡದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್​, ಟೀಮ್​ ಆನಂದದ ಸೃಷ್ಟಿ, ಕಂದಾವರ ಗ್ರಾಮ ಪಂಚಾಯಿತಿ ಹಾಗೂ ಕಾರ್ತಿಕೇಯ ಯುವಕ ಮಂಡಲ ಸಹಯೋಗದಲ್ಲಿ ಭಾನುವಾರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ನೂರಕ್ಕೂ ಮಿಕ್ಕಿ ಗೋಣಿ ಚೀಲಗಳಲ್ಲಿ ಕಸ ಸಂಗ್ರಹ

ನೂರಕ್ಕೂ ಮಿಕ್ಕಿ ಗೋಣಿ ಚೀಲಗಳಲ್ಲಿ ಕಸ ಸಂಗ್ರಹವಾಗಿದ್ದು, ಅವುಗಳನ್ನು ವಿಲೇವಾರಿ ಮಾಡಲಾಯಿತು. ಕೊಂಕಣ್​ ರೈಲ್ವೆ ಅಧಿಕಾರಿ ಎಸ್​.ಕೆ.ಭಟ್​, ಕುಂದಾಪುರದ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್​ ಪುತ್ರನ್​, ಕಂದಾವರ ಪಿಡಿಒ ಸುನೀಲ್​, ಕಾರ್ಯದರ್ಶಿ ಸಂಜೀವ, ಕ್ಲೀನ್​ ಕುಂದಾಪುರ ಹಾಗೂ ವಿವಿಧ ಸಂಘಟನೆಗಳ ಪ್ರಮುಖರಾದ ಶಿವರಾಮ ಶೆಟ್ಟಿ, ಭರತ್​ ಬಂಗೇರ, ಭಾಸ್ಕರ ಪೂಜಾರಿ, ಸರಸ್ವತಿ ಪುತ್ರನ್​, ಕಲ್ಪನಾ ಭಾಸ್ಕರ್​, ಅರುಣ್​ ಕುಮಾರ್​, ವಿವೇಕ್​ ನಾಯಕ್​, ನಾಗರಾಜ್​ ಆಚಾರ್​, ರಾಘವೇಂದ್ರ ಶೇಟ್​, ಸಂತೋಷ್​ ಪೂಜಾರಿ ಕೋಡಿ, ವೆಂಕಟೇಶ್​, ಆಶಾ ಶೆಟ್ಟಿ, ರವಿಕಿರಣ್​ ಮತ್ತಿತರರಿದ್ದರು.
&&&&&&&ೋಟೋ&&&&&&&
10&ಜಿಎಎನ್​2&-ಎಂಎವೈ