ಸ್ವಚ್ಛತಾ ಅಭಿಯಾನಕ್ಕೆ ತೆಕ್ಕಟ್ಟೆ ಪಿಡಿಒ ಸಂತೋಷ್ ಕುಮಾರ್ ಚಾಲನೆ ನೀಡಿದರು. ಪ್ರಮುಖರಾದ ಶೋಭಾ ಶೆಟ್ಟಿ, ವಿಜಯ ಭಂಢಾರಿ, ರವಿ ಶೆಟ್ಟಿ ಮೊದಲಾದವರಿದ್ದರು.
- ತೆಕ್ಕಟ್ಟೆ ಪಿಡಿಒ ಸಂತೋಷ್ ಕುಮಾರ್ ಚಾಲನೆ
ಕೋಟ: ತೆಕ್ಕಟ್ಟೆ ಗ್ರಾ.ಪಂ., ಎಸ್‌ಎಲ್‌ಆರ್‌ಎಂ ಘಟಕ, ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ, ತೆಕ್ಕಟ್ಟೆ ಫ್ರೆಂಡ್ಸ್, ಜೈ ಭಾರತ್ ತೆಕ್ಕಟ್ಟೆ ಆಶ್ರಯದಲ್ಲಿ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಅಭಿಯಾನ ಭಾನುವಾರ ನಡೆಯಿತು.
ತೆಕ್ಕಟ್ಟೆ ಪಿಡಿಒ ಸಂತೋಷ್ ಕುಮಾರ್ ಚಾಲನೆ ನೀಡಿದರು.
ಪಂಚಾಯಿತಿ ಮಾಜಿ ಅಧ್ಯಕ್ಷೆ ಶೋಭಾ ಶೆಟ್ಟಿ, ವಿಜಯ ಭಂಡಾರಿ, ನಿವೃತ್ತ ಯೋಧ ರವಿ ಶೆಟ್ಟಿ, ಪಂಚವರ್ಣ ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ತೆಕ್ಕಟ್ಟೆ ಫ್ರೆಂಡ್ಸ್ ಮುಖ್ಯಸ್ಥ ಪ್ರಕಾಶ್ ಶೆಟ್ಟಿ, ತೆಕ್ಕಟ್ಟೆ ಪಂಚಾಯಿತಿ ಎಸ್‌ಎಲ್‌ಆರ್‌ಎಂ ಘಟಕದ ಮುಖ್ಯಸ್ಥೆ ರೇವತಿ ತೆಕ್ಕಟ್ಟೆ, ಜೈ ಭಾರತ್ ಪ್ರಮುಖರಾದ ಸಂತೋಷ್ ಪೂಜಾರಿ, ಕುಂದಾಪುರ ತಾ.ಪಂ. ಉಮೇಶ್ ಪೂಜಾರಿ, ಸಂದೀಪ್ ಮತ್ತಿತರರಿದ್ದರು.