ಕುಕ್ಕೆ ಸುಬ್ರಹ್ಮಣ್ಯದ ಸದಾನಂದ ಆಸ್ಪತ್ರೆ ಆವರಣದಲ್ಲಿ ಪರಿಸರ ಅಭಿಯಾನವನ್ನು ವಿದ್ಯಾಪ್ರಸನ್ನ ತೀರ್ಥ ಶ್ರೀಗಳು ಉದ್ಘಾಟಿಸಿದರು. ಅಶೋಕ್ ನೆಕ್ರಾಜೆ, ಡಾ.ರಾವೇಂದ್ರ ಎ.ಬಿ., ಪ್ರೊ.ರಂಗಯ್ಯ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ: ಪ್ರಕೃತಿಯಲ್ಲಿ ಇಂದು ಆಮ್ಲಜನಕದ ಕೊರತೆ ಇದ್ದು, ಭವಿಷ್ಯದಲ್ಲಿ ಹಣ ಕೊಟ್ಟು ಆಮ್ಲಜನಕ ತರುವ ದುಸ್ಥಿತಿ ಎದುರಾಗಬಹುದು. ಆದ್ದರಿಂದ ಎಲ್ಲರೂ ಗಿಡಗಳನ್ನು ನೆಟ್ಟು ಬೆಳೆಸುವತ್ತ ಗಮನ ಕೊಡಬೇಕು. ಶುದ್ಧ ಗಾಳಿ ಸಿಗಬೇಕಾದರೆ ವೈವಿಧ್ಯಮಯ ಗಿಡಗಳ ನೆಟ್ಟು ಬೆಳೆಸಬೇಕು ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ಆಸ್ಪತ್ರೆ, ಎ.ಬಿ.ಶೆಟ್ಟಿ ಸ್ಮಾರಕ ದಂತ ಮಹವಿದ್ಯಾಲಯ, ಸುಬ್ರಹ್ಮಣ್ಯದ ಸದಾನಂದ ವೈದ್ಯಕೀಯ ಕೇಂದ್ರ, ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಶುಕ್ರವಾರ ಗಿಡ ಬೆಳೆಸಿ ಪರಿಸರ ಉಳಿಸಿ ಅಭಿಯಾನ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ, ನಿಟ್ಟೆ ಯುನಿವರ್ಸಿಟಿ ವೈಸ್ ಪ್ರೆಸಿಡೆಂಟ್ ಡಾ.ಸತೀಶ್ ಭಂಡಾರಿ, ಯುನಿವರ್ಸಿಟಿ ಗ್ರಾಮೀಣ ಆರೋಗ್ಯ ಕೇಂದ್ರಗಳ ಕೋ ಆರ್ಡಿನೇಟರ್ ಡಾ.ರಾವೇಂದ್ರ, ಎ.ಬಿ.ಡೆಂಟಲ್ ಕಾಲೇಜ್ ದಂತ ವಿಭಾಗ ಮುಖ್ಯಸ್ಥೆ ಡಾ.ಹಾಡ್ರಿ ಡಿ.ಕ್ರೂಸ್, ಲಯನ್ಸ್ ನಿಕಟ ಪೂರ್ವ ಪ್ರಾಂತೀಯ ಅಧ್ಯಕ್ಷ ಪ್ರೊ.ರಂಗಯ್ಯ ಶೆಟ್ಟಿಗಾರ್, ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷೆ ವಿಮಲಾ ರಂಗಯ್ಯ, ರೋಟರಿ ಕ್ಲಬ್ ಅಧ್ಯಕ್ಷ ರೋಹಿತ್ ಬಿ.ಬಿ., ಕುವಾರಸ್ವಾಮಿ ವಿದ್ಯಾಲಯ ಸಂಚಾಲಕ ಚಂದ್ರಶೇಖರ ನಾಯರ್, ಉಪವಲಯ ಅರಣ್ಯಾಧಿಕಾರಿ ಮೋತಿಲಾಲ್, ಸುಬ್ರಹ್ಮಣ್ಯ ಪ್ರೆಸ್‌ಕ್ಲಬ್ ಸ್ಥಾಪಕಾಧ್ಯಕ್ಷ ವಿಶ್ವನಾಥ ನಡುತೋಟ, ಗೋಪಾಲ ಎಣ್ಣೆಮಜಲು, ಡಾ.ವಿಕ್ರಮ ಶೆಟ್ಟಿ, ಡಾ.ಚರಣ್ ಶೆಟ್ಟಿ, ಸಿಬ್ಬಂದಿ ತಾರಾನಾಥ, ಮೋಹನ ಪಳ್ಳಿಗದ್ದೆ, ಅಜಿತ್, ಕೊರಗಪ್ಪ, ಹರಿಣಾಕ್ಷಿ, ಭವ್ಯಾ ಮೊದಲಾದವರು ಉಪಸ್ಥಿತರಿದ್ದರು.