ಮಾಸಿಕ ಸಭೆಯಲ್ಲಿ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಅವರನ್ನು ಅಭಿನಂದಿಸಲಾಯಿತು. ವೇದಿಕೆ ಅಧ್ಯಕ್ಷ ಹಂದಕುಂದ ಸೋಮಶೇಖರ ಶೆಟ್ಟಿ ಗಿಳಿಯಾರು ,ಗೌರವಾಧ್ಯಕ್ಷ ಕೆ.ರಾಜಾರಾಮ್ ಶೆಟ್ಟಿ ಸದಸ್ಯರಾದ ಕೃಷ್ಣಯ್ಯ ಆಚಾರ್, ಗಂಗಾಧರ ಐತಾಳ್ ಇದ್ದರು.
ಕೋಟ: ಕೋಟ ಗಿಳಿಯಾರು ಹಿರಿಯ ನಾಗರಿಕರ ವೇದಿಕೆ ಮಾಸಿಕ ಸಭೆ ಗಿಳಿಯಾರಿನ ಅಲ್ಸೆಕೆರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಜರುಗಿತು.
ವೇದಿಕೆ ಸದಸ್ಯತ್ವ ಸ್ವೀಕರಿಸಿದ ಸ್ಥಳೀಯರಾದ ಬಸವ ಕುಲಾಲ್, ಸುರೇಶ ದೇವಾಡಿಗ, ವಾಸುದೇವ ಹೇರ್ಳೆ ಅವರನ್ನು ಅಧ್ಯಕ್ಷರು ಗೌರವಿಸಿದರು.
ವೇದಿಕೆ ಅಧ್ಯಕ್ಷ ಹಂದಕುಂದ ಸೋಮಶೇಖರ ಶೆಟ್ಟಿ ಗಿಳಿಯಾರು ಅಧ್ಯಕ್ಷತೆ ವಹಿಸಿದ್ದರು. ತಿಂಗಳಲ್ಲಿ ಜನ್ಮದಿನ ಆಚರಿಸಿಕೊಂಡ ವೇದಿಕೆ ಕಾರ್ಯದರ್ಶಿ ಶಂಕರ ಆಚಾರ್, ವಿಜಯ್ ಬ್ಯಾಂಕ್ ನಿವೃತ್ತ ಉದ್ಯೋಗಿ ವಿಶ್ವನಾಥ ಜೋಗಿ ಅವರನ್ನು ಉಪಾಧ್ಯಕ್ಷ ಮಹಾಬಲ ಹೆರ್ಳೇ ಅವರು ಗೌರವಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ನಿವೃತ್ತ ಕನ್ನಡ ಪ್ರಾಧ್ಯಾಪಕ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ನಮ್ಮ ಸಂಸ್ಕಾರ, ಸಂಸ್ಕೃತಿ ಬಗ್ಗೆ ಮಾಹಿತಿ ನೀಡಿದರು. ಸೋಮಯಾಜಿ ಅವರನ್ನು ಅಭಿನಂದಿಸಲಾಯಿತು.
ಗೌರವಾಧ್ಯಕ್ಷ ಕೆ.ರಾಜಾರಾಮ್ ಶೆಟ್ಟಿ, ಸದಸ್ಯರಾದ ಕೃಷ್ಣಯ್ಯ ಆಚಾರ್, ಗಂಗಾಧರ ಐತಾಳ್ ಸಲಹೆ ಸೂಚನೆ ನೀಡಿದರು. ಅಧ್ಯಕ್ಷ ಸೋಮಶೇಖರ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಶಂಕರ ಆಚಾರ್ ವಂದಿಸಿದರು.
ಮಾಸಿಕ ಸಭೆಯಲ್ಲಿ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಅವರನ್ನು ಅಭಿನಂದಿಸಲಾಯಿತು. ವೇದಿಕೆ ಅಧ್ಯಕ್ಷ ಹಂದಕುಂದ ಸೋಮಶೇಖರ ಶೆಟ್ಟಿ ಗಿಳಿಯಾರು ,ಗೌರವಾಧ್ಯಕ್ಷ ಕೆ.ರಾಜಾರಾಮ್ ಶೆಟ್ಟಿ ಸದಸ್ಯರಾದ ಕೃಷ್ಣಯ್ಯ ಆಚಾರ್, ಗಂಗಾಧರ ಐತಾಳ್ ಇದ್ದರು.