ನಿರಂತರ ಸುರಿದ ಮಳೆಗೆ ಹೊಸದುರ್ಗದ ಸಿಎಸ್‌ಐ ಇಗರ್ಜಿ ಆವರಣಗೋಡೆ ಕುಸಿದಿರುವುದು.  
ಉಡುಪಿ

ಮಳೆಗೆ ಇಗರ್ಜಿಯ ಗೋಡೆ ಕುಸಿತ

ಇಂದಿರಾ ಎನ್ ಕೆ
ಕಾಸರಗೋಡು: ಮುಂಗಾರು ಮಳೆ ಜಿಲ್ಲೆಯಲ್ಲಿ ಬಿರುಸು ಪಡೆದುಕೊಂಡಿದ್ದು, ನಿರಂತರ ಸುರಿಯುತ್ತಿರುವ ಮಳೆಗೆ ವಿವಿಧೆಡೆ ಹಾನಿ ಸಂಭವಿಸಿದೆ. ನಿರ್ಮಾಣ ಹಂತದಲ್ಲಿರುವ ಹೊಸದುರ್ಗದ ಸಿಎಸ್‌ಐ ಇಗರ್ಜಿ ಆವರಣ ಗೋಡೆ ಕುಸಿದಿದೆ. ಜೆಸಿಬಿ ಹಾಗೂ ಇತರ ಎರಡು ವಾಹನಗಳು ಮಣ್ಣಿನಡಿ ಸಿಲುಕಿದವು. ಮಣ್ಣುಕುಸಿದು ರಸ್ತೆಗೆ ಬಿದ್ದಿರುವುದರಿಂದ ಹಲವು ಕ್ವಾಟ್ರರ್ಸ್‌ಗಳ ಸಂಪರ್ಕ ರಸ್ತೆ ಬಂದ್ ಆಗಿದೆ.
ಭಾರಿ ಗಾಳಿ-ಮಳೆಗೆ ಮರ ಉರುಳಿ ಬಿದ್ದು ಮಧೂರು ದೇವಸ್ಥಾನ ಬಳಿ ನಿಲ್ಲಿಸಿದ್ದ ಕಾರಿಗೆ ಹಾನಿ ಸಂಭವಿಸಿದೆ. ಶನಿವಾರ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದರೂ, ನಿರೀಕ್ಷಿತ ಮಳೆಯಾಗಿಲ್ಲ.
ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಭಾರಿ ಗಾಳಿ ಸಹಿತ ಬಿರುಸಿನ ಮಳೆಯಾಗುವ ಸಾಧ್ಯತೆ ಇದ್ದು, ನದಿ ದಡಗಳಲ್ಲಿ ನೀರು ಹೆಚ್ಚಾಗಿ ನೆರೆ ಉಂಟಾಗುವ ಸಾಧ್ಯತೆ ಇದೆ. ನದಿ ತೀರದ ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಕೇಂದ್ರ ಹವಾಮಾನ ಇಲಾಖೆ ಎಚ್ಚರಿಸಿದೆ.