ಉಡುಪಿ ಮಲ್ಪೆಯ ಯುಬಿಎಂ ಎಬನೇಜರ್ ಚರ್ಚ್ನಲ್ಲಿ ಕೆಸ್ತ ಏಕತಾ ಪ್ರಾರ್ಥನಾ ಕೂಟ ನಡೆಯಿತು. ಡಾ. ಜೆರಾಲ್ಡ್ ಐಸಾಕ್ ಲೋಬೊ, ಬ್ರದರ್ ರಮೇಶ್, ಡಾ. ರೊಕ್ ಡಿಸೋಜಾ, ರ್ಡಿನಾಂಡ್ ಗೊನ್ಸಾಲ್ವಿಸ್, ವಿನ್ಸೆಂಟ್ ಕ್ರಾಸ್ತಾ, ವಿಲ್ಸನ್ ಡಿಸೋಜಾ, ಅಶ್ವಿನ್ ಆರಾನ್ಹಾ, ಸಂತೋಷ್ ಎ., ಸ್ಟೀಫನ್ ಬಂಡಿ, ರಮೇಶ್ ಮುದಲಗಿ ಇತರರಿದ್ದರು.
* ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ಆಶೀರ್ವಚನ
* ಮಲ್ಪೆಯಲ್ಲಿ ಕ್ರೈಸ್ತ ಏಕತಾ ಪ್ರಾರ್ಥನಾ ಕೂಟ
ಉಡುಪಿ: ಪ್ರಭು ಯೇಸುಕ್ರಿಸ್ತರ ಸಂಕಷ್ಟ, ಮರಣ ಧ್ಯಾನಿಸಲು ಕ್ರೈಸ್ತರಿಗೆ ಪವಿತ್ರ ವಾರವು ಧ್ಯಾನಿಸುವ ವಿಶೇಷ ಸಮಯವಾಗಿದೆ. ನಮ್ಮ ಜೀವನದ ಕಷ್ಟ, ಸಮಸ್ಯೆಗಳ ಶಿಲುಬೆ ಹೊತ್ತು ಯೇಸು ಸ್ವಾಮಿ ತೋರಿದ ಹಾದಿಯಲ್ಲಿ ಸಾಗಲು ಪವಿತ್ರ ವಾರ ಇನ್ನಷ್ಟು ಸಹಕಾರಿ. ಪ್ರಾರ್ಥನೆ, ಉಪವಾಸ, ದಾನ-ಧರ್ಮದ ಮೂಲಕ ದೇವರ ಸಾಮಿಪ್ಯ ಹೊಂದಲು ಧ್ಯಾನದ ಸಮಯವು ಕ್ರೈಸ್ತರಿಗೆ ಮಾರ್ಗದರ್ಶಿಯಾಗಿದೆ ಎಂದು ಉಡುಪಿ ಕೆಥೊಲಿಲ್ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ನುಡಿದರು.
ಮಲ್ಪೆಯ ಯುಬಿಎಂ ಎಬನೇಜರ್ ಚರ್ಚ್ನಲ್ಲಿ ಹೊಸಾನ್ನಾದಿಂದ ಶಿಲುಬೆಯವರೆಗೆ ಧ್ಯೇಯ ವಾಕ್ಯದೊಂದಿಗೆ ಭಾನುವಾರ (ಮಾ.29) ಸಂಜೆ ಆಯೋಜಿಸಿದ್ದ ಕ್ರೈಸ್ತ ಏಕತಾ ಪ್ರಾರ್ಥನಾ ಕೂಟದಲ್ಲಿ ಆಶೀರ್ವಚನ ನೀಡಿ, ಶಿಲುಬೆ ಮೂಲಕ ಲೋಕಕ್ಕೆ ರಕ್ಷಣೆ ತೋರಿದ ಯೇಸು ಸ್ವಾಮಿ ಎಲ್ಲರನ್ನೂ ಹರಸಲಿ ಎಂದರು.
ಕ್ಯಾಂಪಸ್ ಕ್ರುಸೆಡ್ ಇಂಡಿಯಾ ಮಂಗಳೂರಿನ ಬ್ರದರ್ ರಮೇಶ್, ಸಂತೆಕಟ್ಟೆ ಮೌಂಟ್ ರೋಸರಿ ಚರ್ಚ್ನ ಧರ್ಮಗುರು ವಂ.ಡಾ. ರೊಕ್ ಡಿಸೋಜಾ ದೇವರ ವಾಕ್ಯದ ಮೇಲೆ ಪ್ರಭೋದನೆ ನೀಡಿದರು.
ಯುಬಿಎಂ ಕ್ರಿಸ್ತ ಕಾರುಣ್ಯ ಚರ್ಚ್ ಕಟಪಾಡಿ, ಯುಬಿಎಂ ಜುಬಿಲಿ ಚರ್ಚ್ ಉಡುಪಿ, ಯುಬಿಎಂ ಕ್ರಿಸ್ತ ಕೃಪಾ ಮಣಿಪಾಲ, ಯುಬಿಎಂ ಕ್ರಿಸ್ತ ಶಾಂತಿ ಚರ್ಚ್ ಉದ್ಯಾವರ, ಸಿಎಸ್ಐ ಎಬನೇಜರ್ ಮಲ್ಪೆ, ಸಂತ ಅನ್ನಮ್ಮ ಚರ್ಚ್ ತೊಟ್ಟಂನ ಗಾಯನ ತಂಡಗಳಿಂದ ಸ್ತುತಿಗಾಯನ ನಡೆಯಿತು.
ಕೆಥೊಲಿಕ್ ಧರ್ಮಗುರುಗಳಾದ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ವಂ.ವಿನ್ಸೆಂಟ್ ಕ್ರಾಸ್ತಾ, ವಂ.ವಿಲ್ಸನ್ ಡಿಸೋಜಾ, ವಂ.ಅಶ್ವಿನ್ ಆರಾನ್ಹಾ, ಯುಬಿಎಂ ಚರ್ಚ್ನ ವಂ.ಸಂತೋಷ್ ಎ., ವಂ.ಸ್ಟೀಫನ್ ಬಂಡಿ, ವಂ.ರಮೇಶ್ ಮುದಲಗಿ, ವಂ.ಮನೋಜ್ ವೈ.ಎಸ್., ವಂ.ವಿನಯ್ ಸಂದೇಶ್, ಸಭಾ ಹಿರಿಯರಾದ ಡೇನಿಯಲ್ ಜೆ. ಅಮ್ಮನ್ನ, ಸ್ಟಾರ್ವಿನ್ ಅಮ್ಮನ್ನ, ಮೋಹನ್ ಪಿ. ಅಮ್ಮನ್ನ, ಆಸ್ಟಿನ್ ಸಿಲ್ವಾ, ಸದಾನಂದ್ ಜತ್ತನ್ನ, ರೆನೋಲ್ಡ್ ಸಿ. ಜತ್ತನ್ನ, ಜನರಲ್ ಫಂಡ್ ಸಮಿತಿಯ ಎಡ್ವಿನ್ ಜತ್ತನ್ನ, ಸ್ಯಾಮ್ಯುವೆಲ್ ಡಿ. ಕರ್ಕಡಾ, ಬೆಂಜಮಿನ್ ಜಯಕರ್ ಮಾಬೆನ್, ನಿಕ್ಷನ್ ಡಿ. ಪಾಂಗಳಾನ್ನ, ರೆನೋಲ್ಡ್ ಪ್ರವೀಣ್ ಕೋಟ್ಯಾನ್ ಇತರರು ಉಪಸ್ಥಿತರಿದ್ದರು.
ಕುಮಾರ್ ಸಾಲಿನ್ಸ್ ಸ್ವಾಗತಿಸಿದರು. ಜುವೆಲ್ ವಂದಿಸಿದರು. ತೊಟ್ಟಂ ಚರ್ಚ್ನ ಧರ್ಮಗುರು ವಂ.ಡೆನಿಸ್ ಡೆಸಾ ಕಾರ್ಯಕ್ರಮ ನಿರೂಪಿಸಿದರು.