ಉಡುಪಿಯಲ್ಲಿ ಆಯೋಜಿಸಿದ್ದ ಕ್ರೈಸ್ತ ಸಹಮಿಲನ ಕಾರ್ಯಕ್ರಮವನ್ನು ಡಾ.ಜೆರಾಲ್ಡ್​ ಲೋಬೊ ಉದ್ಘಾಟಿಸಿದರು. ರೊನಾಲ್ಡ್​ ಡಿ ಆಲ್ಮೇಡಾ, ವೆರೋನಿಕಾ ಕರ್ನೆಲಿಯೋ, ಡಾ. ಜೆರಾಲ್ಡ್​ ಪಿಂಟೊ, ಫರ್ಡಿನಾಂಡ್​ ಗೊನ್ಸಾಲ್ವಿಸ್​, ಲೂಯಿಸ್​ ಡಿಸೋಜಾ, ವಿನೋದ್​ ಕ್ರಾಸ್ಟೊ ಇದ್ದರು. 
ಉಡುಪಿ

ನಾಯಕತ್ವಕ್ಕೆ ಬೇಕು ಸ್ಪಷ್ಟ ಗುರಿ

* ಬಿಷಪ್​ ಜೆರಾಲ್ಡ್​ ಲೋಬೊ ಅಭಿಪ್ರಾಯ

* ಸಹಮಿಲನ ಕಾರ್ಯಕ್ರಮ ಉದ್ಘಾಟನೆ

ಉಡುಪಿ: ಕ್ರೈಸ್ತ ಸಮುದಾಯಕ್ಕೆ ತನ್ನದೇ ಆದ ಶಕ್ತಿಯಿದ್ದು, ಅದನ್ನು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ನಾಯಕತ್ವದ ಮೂಲಕ ತೋರ್ಪಡಿಸಬೇಕಿದೆ. ಆ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕಿದ್ದು, ನಾವು ಮಾಡುವ ಸೇವೆಗೆ ಸ್ಪಷ್ಟ ಗುರಿ ಇದ್ದಾಗ ಉತ್ತಮ ನಾಯಕನಾಗಲು ಸಾಧ್ಯವಿದೆ ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಅತಿ ವಂ. ಡಾ.ಜೆರಾಲ್ಡ್​ ಲೋಬೊ ಅಭಿಪ್ರಾಯಪಟ್ಟರು.
ಉಡುಪಿಯ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಉಡುಪಿ ಧರ್ಮಪ್ರಾಂತ್ಯದ ಸುವಿಚಾರ ರಾಜಕೀಯ ಸಮಿತಿ, ಶ್ರೀ ಸಾಮಾನ್ಯರ ಆಯೋಗ ಹಾಗೂ ಕಥೊಲಿಕ್​ ಸಭಾ ಉಡುಪಿ ಪ್ರದೇಶದ ವತಿಯಿಂದ ಭಾನುವಾರ (ಫೆ.22) ಆಯೋಜಿಸಿದ್ದ ಕ್ರೈಸ್ತ ಸಮುದಾಯದ ರಾಜಕೀಯ ಮುಖಂಡರು ಹಾಗೂ ಕಾರ್ಯಕರ್ತರ ಸಹಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೆಲಸದ ಉತ್ಸಾಹ

ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಸಾಮಾಜಿಕ ಕಾರ್ಯಕರ್ತೆ ವೆರೋನಿಕಾ ಕರ್ನೆಲಿಯೋ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ಸೇವೆ ಮಾಡುವಾಗ ಜನರು ತೋರುವ ಪ್ರೀತಿ ಇನ್ನಷ್ಟು ಉತ್ತಮ ಕೆಲಸ ಮಾಡಲು ಉತ್ಸಾಹ ಬರುತ್ತದೆ ಎಂದರು. ರಾಜಕೀಯ ಸೇವೆಯ ಕುರಿತು ಮುಖಂಡರಾದ ಸೀಮಾ ಮಾರ್ಗರೇಟ್​ ಡಿಸೋಜಾ, ಜುಡಿತ್​ ಮೆಂಡೊನ್ಸಾ ಮತ್ತು ರೋಶನಿ ಒಲಿವೇರಾ ಅನುಭವ ಹಂಚಿಕೊಂಡರು.
ಕಥೊಲಿಕ್​ ಸಭಾ ಉಡುಪಿ ಪ್ರದೇಶದ ಅಧ್ಯಕ್ಷ ರೊನಾಲ್ಡ್​ ಡಿ ಆಲ್ಮೇಡಾ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸಾಮಾನ್ಯ ಆಯೋಗದ ಸಂಚಾಲಕ ಡಾ. ಜೆರಾಲ್ಡ್​ ಪಿಂಟೊ ಮುಂದಿನ ವರ್ಷದ ಕಾರ್ಯ ಯೋಜನೆ ಮಂಡಿಸಿದರು. ಜೊಕಿಂ ಪಿಂಟೊ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.
ಕಥೊಲಿಕ್​ ಸಭಾ ಉಡುಪಿ ಪ್ರದೇಶದ ಆಧ್ಯಾತ್ಮಿಕ ನಿರ್ದೇಶಕ ವಂ.ಫರ್ಡಿನಾಂಡ್​ ಗೊನ್ಸಾಲ್ವಿಸ್​, ನಿಯೋಜಿತ ಅಧ್ಯಕ್ಷ ಲೂಯಿಸ್​ ಡಿಸೋಜಾ, ಸುವಿಚಾರ ಚಿಂತನ-ಮಂಥನ ಸಮಿತಿಯ ಉಪಾಧ್ಯೆ ಮೇರಿ ಡಿಸೋಜಾ, ಪ್ರಧಾನ ಕಾರ್ಯದರ್ಶಿ ಮೈಕಲ್​ ರೊಡ್ರಿಗಸ್​ ಹಾಗೂ ಮೇಬಲ್​ ಡಿಸೋಜಾ ಉಪಸ್ಥಿತರಿದ್ದರು.
ರಾಜಕೀಯ ಸಮಿತಿ ಸಂಚಾಲಕ ವಿನೋದ್​ ಕ್ರಾಸ್ಟೊ ಸ್ವಾಗತಿಸಿದರು. ಜೆರಾಲ್ಡ್​ ಪಿಂಟೊ ವಂದಿಸಿದರು. ಶಾಂತಿ ಪಿರೇರಾ ಕಾರ್ಯಕ್ರಮ ನಿರೂಪಿಸಿದರು.
"

ಸಂಘಟಿತರಾಗಿ ಸಮಾಜದಲ್ಲಿ ದೀನ&ದಲಿತರ ಪರವಾಗಿ ಕೆಲಸ ಮಾಡಿದಾಗ ಜನರೇ ನಮ್ಮನ್ನು ಗುರುತಿಸುವ ಕೆಲಸ ಮಾಡುತ್ತಾರೆ. ಸಮಾಜದ ಜನರ ಸಮಸ್ಯೆಗೆ ಪರಿಹಾರ ನೀಡುವ ಕೆಲಸ ಮಾಡಿದಾಗ ನೈಜ ನಾಯಕರಾಗಿ ಗುರುತಿಸಿಕೊಳ್ಳಲು ಸಾಧ್ಯ.