ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ. 
ಉಡುಪಿ

ಅ.27ರಿಂದ ರಾಜಾಂಗಣದಲ್ಲಿ ಚಿಟ್ಟಾಣಿ ಸಪ್ತಾಹ

* ಖ್ಯಾತ ಕಲಾವಿದರ ಒಗ್ಗೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನ

ಉಡುಪಿ: ಚಿಟ್ಟಾಣಿ ಅಭಿಮಾನಿ ಬಳಗ ಉಡುಪಿ ವತಿಯಿಂದ ನಡೆಸಿಕೊಂಡು ಬರುತ್ತಿರುವ 19ನೇ ವರ್ಷದ 'ಚಿಟ್ಟಾಣಿ ಸಪ್ತಾಹ' ಅ.27ರಿಂದ ನ.2ರ ವರೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.

ಅ.27ರಂದು ಸಂಜೆ 6:30ಕ್ಕೆ ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್​ ಉಪಸ್ಥಿತರಿರಲಿದ್ದಾರೆ.

ಪ್ರತಿದಿನ ಸಂಜೆ 6:30ರಿಂದ ಉಡುಪಿ ಯಕ್ಷಗಾನ ಕಲಾರಂಗದ ಸಹಕಾರದಲ್ಲಿ ಖ್ಯಾತ ಕಲಾವಿದರ ಒಗ್ಗೂಡುವಿಕೆಯಲ್ಲಿ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಅ.27ರಂದು ಶ್ರೀರಾಮ ನಿರ್ಯಾಣ, ಅ.28ರಂದು ಪ್ರಲ್ಹಾದ ಚರಿತ್ರೆ, ಅ.29ರಂದು ದಕ್ಷ ಯಜ್ಞ, ಅ.30ರಂದು ಬ್ರಹ್ಮ ಕಪಾಲ, ಅ.31ರಂದು ಲಂಕಾ ದಹನ, ನ.1ರಂದು ಸತ್ಯವಾನ ಸಾವಿತ್ರಿ, ನ.2ರಂದು ರಾಜಾ ಬೃಹದ್ರತ ಪ್ರದರ್ಶನ ನಡೆಯಲಿದೆ.

ನ.2ರಂದು ಸಪ್ತಾಹದ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದರಾಗಿದ್ದ ಥಂಡಿಮನೆ ಶ್ರೀಪಾದ ಭಟ್​ (ಮರಣೋತ್ತರ) ಹಾಗೂ ಟಿ.ವಿ. ರಾವ್​ ಪ್ರಶಸ್ತಿಯನ್ನು ಹವ್ಯಾಸಿ ಕಲಾವಿದ ನಿರಂಜನ ಭಟ್​ ಅವರಿಗೆ ನೀಡಲಾಗುವುದು ಎಂದು ಚಿಟ್ಟಾಣಿ ಅಭಿಮಾನಿ ಬಳಹದ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿ ಎಂ. ಗೋಪಿಕೃಷ್ಣ ರಾವ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.