ಚಿತ್ರಪಾಡಿ ಶ್ರೀ ಮಾರಿಯಮ್ಮ ದೇವಸ್ಥಾನದ ಪ್ರತಿಷ್ಠಾಪನೆ ವರ್ಧಂತ್ಯುತ್ಸವ ಸಂಪನ್ನಗೊಂಡಿತು. ಪ್ರಮುಖರಾದ ಆನಂದ್ ಗಾಣಿಗ, ಕೃಷ್ಣಮೂರ್ತಿ ಭಟ್, ನಾಗೇಂದ್ರ ಆಚಾರ್, ಉದಯ್ ಗಾಣಿಗ ಮತ್ತಿತರರಿದ್ದರು.  
ಉಡುಪಿ

ಚಿತ್ರಪಾಡಿ ಮಾರಿಯಮ್ಮ ದೇಗುಲ ವರ್ಧಂತ್ಯುತ್ಸವ

ಕೋಟ: ಸಾಲಿಗ್ರಾಮ ಚಿತ್ರಪಾಡಿ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ದೇವಿಯ ಪ್ರತಿಷ್ಠಾಪನೆ ವರ್ಧಂತ್ಯುತ್ಸವ ಬುಧವಾರ ಮತ್ತು ಗುರುವಾರ ಸಂಪನ್ನಗೊಂಡಿತು.
ಬುಧವಾರ ದೇವತಾ ಪ್ರಾರ್ಥನೆ, ಪುಣ್ಯಾಹ, ಬ್ರಹ್ಮಕಲಶ ಸ್ಥಾಪನೆ, ಕಲಾಹೋಮ, ಕಲಶಾಭಿಷೇಕ, ಮಹಾಪೂಜೆ, ವಸಂತ ಪೂಜೆ, ಪ್ರಸಾದ ವಿತರಣೆ ಹಾಗೂ ಗುರುವಾರ ಮಹಾಪೂಜೆ, ಮಹಾ ಅನ್ನಸಂತರ್ಪಣೆ ನೆರವೇರಿತು.
ಧಾರ್ಮಿಕ ವಿಧಿವಿಧಾನಗಳು ದೇಗುಲದ ತಂತ್ರಿ ಕೃಷ್ಣ ಸೋಮಯಾಜಿ ನೇತೃತ್ವದಲ್ಲಿ ದೇಗುಲ ಪ್ರದಾನ ಅರ್ಚಕ ಸುಧೀರ್ ಐತಾಳ್ ಸಮ್ಮುಖದಲ್ಲಿ ನಡೆಯಿತು. ದೇಗುಲ ಅಧ್ಯಕ್ಷ ಆನಂದ್ ಗಾಣಿಗ ದಂಪತಿ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದರು. ಚಿತ್ರಪಾಡಿ ಶ್ರೀ ಮಾರಿಯಮ್ಮ ಮಹಿಳಾ ಭಜನಾ ಮಂಡಳಿ, ಸಾಲಿಗ್ರಾಮ ಶ್ರೀರಾಮ ಮಹಿಳಾ ಭಜನಾ ಸಂ, ಚಿತ್ರಪಾಡಿ ಶ್ರೀ ನಂದಿಕೇಶ್ವರ ಭಜನಾ ಮಂಡಳಿಯಿಂದ ಕುಣಿತ ಭಜನೆ ನಡೆಯಿತು.
ಮಧ್ಯಾಹ್ನ ವಿಪ್ರ ಮಹಿಳಾ ಸಾಲಿಗ್ರಾಮ ವಲಯದಿಂದ ಲಲಿತಾ ಸಹಸ್ರನಾಮ ಪಠಣ, ಕೋಟ ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಬಳಗದಿಂದ ಚೆಂಡೆವಾದನ, ನೃತ್ಯ ಸಿಂಚನ, ಶ್ರೀ ಕಳವಾಡಿ ವಾರಿಕಾಂಬಾ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಂಡಿತು. ದೇಗುಲ ಗೌರವಾಧ್ಯಕ್ಷ ಕೃಷ್ಣಮೂರ್ತಿ ಭಟ್, ಕಾರ್ಯದರ್ಶಿ ನಾಗೇಂದ್ರ ಆಚಾರ್, ಕೋಶಾಧಿಕಾರಿ ಉದಯ್ ಗಾಣಿಗ ಮತ್ತಿತರರಿದ್ದರು.