ಕೋಟದ ಮಣೂರು ಪಡುಕರೆ ಸರ್ಕಾರಿ ಶಾಲಾ ಮೈದಾನದಲ್ಲಿ ಕ್ರೀಡಾಹಬ್ಬಕ್ಕೆ ಗೀತಾನಂದ ಫೌಂಢೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಚಾಲನೆ ನೀಡಿದರು. ಕೆ.ವೆಂಕಟೇಶ ಪ್ರಭು, ರಮೇಶ್ ಎಚ್.ಕುಂದರ್, ದಿವ್ಯಾಲಕ್ಷ್ಮೀ ಪ್ರಶಾಂತ್ ಕುಂದರ್ ಇತರರು ಇದ್ದರು.
ಕೋಟ: ಮಣೂರು ಪಡುಕರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಣೂರು ಗೀತಾನಂದ ಫೌಂಡೇಶನ್, ಕೋಟ ಸಮುದ್ಯತಾ ಗ್ರೂಪ್ಸ್ ಆಶ್ರಯದಲ್ಲಿ ಮಣೂರು ಪಡುಕರೆ ಸರ್ಕಾರಿ ಶಾಲಾ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಕ್ರೀಡಾಹಬ್ಬ ‘ಮಕ್ಕಳಾಟ’ ಎಂಬ ವಿನೂತನ ಕಾರ್ಯಕ್ರಮದಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.
ಗೀತಾನಂದ ಫೌಂಢೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಕ್ರೀಡಾಹಬ್ಬಕ್ಕೆ ಚಾಲನೆ ನೀಡಿದರು. ಸ್ಥಳೀಯ ಅಂಗನವಾಡಿ ಪುಟಾಣಿಗಳು, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಕ್ರೀಡಾಧ್ವಜ ಹಿಡಿದು ಪಥಸಂಚಲನದಲ್ಲಿ ಭಾಗಿಯಾದರು. ಆನಂದ್ ಸಿ.ಕುಂದರ್ ಸಹಿತ ಹಲವು ಗಣ್ಯರು ಧ್ವಜವಂದನೆ ಸ್ವೀಕರಿಸಿದರು.
ಕೋಟತಟ್ಟು ಕಲ್ಮಾಡಿ, ಕಾಸನಗುಂದು, ಮಣೂರು ಅಂಗನವಾಡಿ, ಮಣೂರು ಶಾಲೆಯ ಎಲ್‌ಕೆಜಿ, ಯುಕೆಜಿ ಮಕ್ಕಳು, ಕೋಟತಟ್ಟು ಪಡುಕರೆ ಗುಡ್ಡಿಶಾಲೆ, ಕೋಟತಟ್ಟು ಅರಮದೇವಸ್ಥಾನ ಸಮೀಪ, ಹಂದಟ್ಟು ಚೆಚ್ಕೆಕೆರೆ ಸೇರಿದಂತೆ ಹಲವು ಅಂಗನವಾಡಿಯ ಮಕ್ಕಳು ಭಾಗಿಯಾದರು.
ಉದ್ಯಮಿ ಕೆ.ವೆಂಕಟೇಶ ಪ್ರಭು, ವಾಹಿನಿ ಯುವಕ ಮಂಡಲ ಅಧ್ಯಕ್ಷ ರಮೇಶ್ ಎಚ್.ಕುಂದರ್, ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ಎಸ್.ನಾಯಕ, ಗೀತಾನಂದ ಟ್ರಸ್ಟ್‌ನ ನಿರ್ದೇಶಕಿ ದಿವ್ಯಾಲಕ್ಷ್ಮೀ ಪ್ರಶಾಂತ್ ಕುಂದರ್, ಮುಖ್ಯಶಿಕ್ಷಕರಾದ ವಿವೇಕಾನಂದ ಗಾವಂಕರ್, ಮಂಜುನಾಥ್ ಹೊಳ್ಳ, ಕೋಟ ಪಂಚಾಯಿತಿ ಸದಸ್ಯ ಎಂ.ಜಯರಾಮ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್, ಶಿಕ್ಷಕ ವೃಂದ ಉಪಸ್ಥಿತರಿದ್ದರು. ರವಿಕಿರಣ್ ಕೋಟ ಸಹಕರಿಸಿದರು. ವೈಷ್ಣವಿ ರಕ್ಷಿತ್ ಕುಂದರ್ ಸಂಯೋಜಿಸಿದರು.
ಮಕ್ಕಳಿಗೆ ಸಂಗೀತ ಕುರ್ಚಿ, ಬಾಲ್ ಎಸೆಯುವುದು, 50 ಮಿಟರ್ ಓಟ, ಅಂಗನಾಡಿ ಶಿಕ್ಷಕಿಯರಿಗೆ ಸಂಗೀತ ಕುರ್ಚಿ, ಫೈಯರ್ ಇನ್ ದಿ ಸಿಟಿ ಸೇರಿದಂತೆ ಅನೇಕ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು.