ಪಡುಬಿದ್ರಿ ಯುವವಾಹಿನಿ ಸಂಸ್ಥೆಯಿಂದ ಕಲಾಶ್ರೀ ಮತ್ತು ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.  
ಉಡುಪಿ

ಕುತ್ಯಾರು ವಿದ್ಯಾದಾಯಿನಿ ಶಾಲೆಯಲ್ಲಿ ಮಕ್ಕಳ ಹಬ್ಬ

ಶಿರ್ವ: ಪಡುಬಿದ್ರಿ ಯುವವಾಹಿನಿ ಘಟಕ ಸಂಘಟಿಸಿದ 15ನೇ ವರ್ಷದ ಮಕ್ಕಳ ಹಬ್ಬ, ಕಲಾಶ್ರೀ ಮತ್ತು ಕಲಾರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕುತ್ಯಾರು ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಶಾಲಾ ವಿದ್ಯಾರ್ಥಿ ನಾಯಕ ಸಾತ್ವಿಕ್ ಉದ್ಘಾಟಿಸಿದರು.
ವಿಭಾಗ 1 ಮತ್ತು 2ರಲ್ಲಿ ವಿವಿಧ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಪೂರಕ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುವಾನ ವಿತರಿಸಲಾಯಿತು. ಜತೆಗೆ ಸಂಸ್ಥೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಕಲಿಕಾ ಪರಿಕರ ವಿತರಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ವಾಡಿದ ಪ್ರೇಕ್ಷಾ ಅಮೀನ್, ರಂಜಿತ್ ಅವರಾಲು ಹಾಗೂ ಸುಮಿಶ್ ಸುಕೇಶ್ ಕುವಾರ್ ಅವರನ್ನು ಸನ್ಮಾನಿಸಲಾಯಿತು.
ವಿಭಾಗ 1ರಲ್ಲಿ ಅತಿ ಹೆಚ್ಚು ಬಹುವಾನ ಗಳಿಸಿದ ಸಾಕ್ಷಿಗೆ ಕಲಾಶ್ರೀ ಮತ್ತು ವಿಭಾಗ 2ರಲ್ಲಿ ಅತಿ ಹೆಚ್ಚು ಬಹುವಾನ ಪಡೆದ ಅನ್ವಿತಾ ಮೂಲ್ಯ ಅವರಿಗೆ ಕಲಾರತ್ನ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಯುವವಾಹಿನಿ ಟಕ ಅಧ್ಯಕ್ಷ ವಿಧಿತ್ ಪೂಜಾರಿ ಕರ್ನಿರೆ ಸವಾರೋಪ ಸವಾರಂಭದ ಅಧ್ಯಕ್ಷತೆ ವಹಿಸಿದ್ದರು. ದಿನೇಶ್ ಕುಲಾಲ್, ಕೃಷ್ಣ ಪೂಜಾರಿ, ಮುಖ್ಯಶಿಕ್ಷಕಿ ಶರ್ಮಿಳಾ, ಪೂರ್ಣಿಮಾ ವಿಧಿತ್, ವಿದ್ಯಾ ರಾಕೇಶ್, ರಾವೇಂದ್ರ ಆಚಾರ್ಯ, ಪ್ರೊ.ವೈ.ಭಾಸ್ಕರ ಶೆಟ್ಟಿ, ವೈ.ಸುಧೀರ್ ಕುವಾರ್ ಉಪಸ್ಥಿತರಿದ್ದರು.
ಚೈತ್ರಾ ಗಣೇಶ್, ಸುಷ್ಮಾ ಸುನಿಲ್, ಯಶೋದಾ ಪಡುಬಿದ್ರಿ, ಹರೀಶ್ ಕೋಟ್ಯಾನ್ ನಿರೂಪಿಸಿದರು. ಭಾಸ್ಕರ ಎನ್.ಅಂಚನ್ ವಂದಿಸಿದರು.