ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್​ನಲ್ಲಿ ಆಯೋಜಿಸಿದ್ದ ಚೆಸ್​ ಪಂದ್ಯಾವಳಿಯನ್ನು ಪ್ರೊ.ಶರಣ ಕುಮಾರ್​ ಉದ್ಘಾಟಿಸಿರು. ಯು.ಪದ್ಮರಾಜ್​ ಆಚಾರ್ಯ, ಅನಿತಾ ಪಿ. ರಾಜ್​, ಎಫ್​.ಎ. ಸಾಕ್ಷತ್​ ಇದ್ದರು. 
ಉಡುಪಿ

ಬುದ್ಧಿಯ ತೀಕ್ಷ್ಣತೆ ಹೆಚ್ಚಿಸುವ ಪಂದ್ಯ ಚೆಸ್​

ಹಟ್ಟಿಯಂಗಡಿ ಶಾಲೆಯ ಪ್ರಾಂಶುಪಾಲ ಶರಣ ಕುಮಾರ್​ ಅನಿಸಿಕೆ 

* ವಿದ್ಯೋದಯ ಪಬ್ಲಿಕ್​ ಸ್ಕೂಲ್​ನಲ್ಲಿ ಪಂದ್ಯಾಟ ಉದ್ಘಾಟನೆ

ಉಡುಪಿ: ಎಲ್ಲ ಬಗೆಯ ಕ್ರೀಡೆಗಳಿಗೂ ಅದರದ್ದೇ ಆದ ಮಹತ್ವ, ವಿಶೇಷತೆ ಇರುತ್ತದೆ. ಅಲ್ಲದೆ, ಆಟಗಾರರಲ್ಲಿ ಕಿಚ್ಚು ಹೆಚ್ಚಿಸುತ್ತದೆ. ಆದರೆ, ಚೆಸ್​ ಪಂದ್ಯ ಮಾತ್ರ ಬುದ್ಧಿಯ ತೀಕ್ಷ್ಣತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ರೆಸಿಡೆನ್ಶಿಯಲ್​ ಶಾಲೆಯ ಪ್ರಾಂಶುಪಾಲ ಶರಣ ಕುಮಾರ್​ ಹೇಳಿದರು.
ಉಡುಪಿಯ ವಿದ್ಯೋದಯ ಟ್ರಸ್ಟ್​ (ರಿ.)ನ ಅಂಗಸಂಸ್ಥೆ ವಿದ್ಯೋದಯ ಪಬ್ಲಿಕ್​ ಸ್ಕೂಲ್​ನಲ್ಲಿ ಶನಿವಾರ (ಸೆ.12) ಆಯೋಜಿಸಿದ್ದ ಎಐಸಿಎಸ್​ ಅಂತರ್​-ಶಾಲಾ ರ್ಯಾಪಿಡ್​ ಚೆಸ್​ ಪಂದ್ಯಾವಳಿ 'ಬ್ಯಾಟಲ್​ ಆಫ್​ ದಿ 64 ಸ್ಕ್ವೇರ್ಸ್​' ಉದ್ಘಾಟಿಸಿ ಮಾತನಾಡಿದರು.
ಶಾಲಾ ಆಡಳಿತ ಮಂಡಳಿಯ ಖಜಾಂಚಿ ಯು.ಪದ್ಮರಾಜ್​ ಆಚಾರ್ಯ, ಶಾಲೆಯ ಪ್ರಾಂಶುಪಾಲೆ ಅನಿತಾ ಪಿ. ರಾಜ್​ ಉಪಸ್ಥಿತರಿದ್ದರು.
ಉಡುಪಿಯ ನಾರಾಯಣಗುರು ಚೆಸ್​ ಅಕಾಡೆಮಿಯ ಸ್ಥಾಪಕ ಎಫ್​.ಎ. ಸಾಕ್ಷತ್​ ಮತ್ತು ಅವರ ತಂಡವು ಅತ್ಯಂತ ಸಮರ್ಥವಾಗಿ ಪಂದ್ಯಾವಳಿ ನಡೆಸಿಕೊಟ್ಟಿತು. 30ಕ್ಕೂ ಅಧಿಕ ಐಸಿಎಸ್​ಇ ಹಾಗೂ ಸಿಬಿಎಸ್​ಇ ಶಾಲೆಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದರು.