ಪಳ್ಳತ್ತಡ್ಕ ಭಾಗದಲ್ಲಿ ರಸ್ತೆ ಸಂಪೂರ್ಣ ಧೂಳುಮಯವಾಗಿರುವುದು. 
ಉಡುಪಿ

ಚೆರ್ಕಳ-ಕಲ್ಲಡ್ಕ ರಸ್ತೆ ಧೂಳುಮಯ


ಪುರುಷೋತ್ತಮಪೆರ್ಲ

ಚೆರ್ಕಳ-ಕಲ್ಲಡ್ಕರಾಜ್ಯ ಹೆದ್ದಾರಿಯ ಚೆರ್ಕಳದಿಂದಉಕ್ಕಿನಡ್ಕವರೆಗಿನ ರಸ್ತೆಅಭಿವೃದ್ಧಿ ಕಾಮಗಾರಿ ಈ ವರ್ಷನಡೆಯುವುದೂ ಅನುಮಾನವಾಗಿ ಉಳಿದಿದೆ.ನಾಗರಿಕರನಿರಂತರ ಹೋರಾಟ,ಜನಪ್ರತಿನಿಧಿ,ಅಧಿಕಾರಿಗಳಿಗೆಮನವಿ ಸಲ್ಲಿಸಿದ ಪರಿಣಾಮ 30.36ಕೋಟಿರೂ.ಮೊತ್ತದಅಭಿವೃದ್ಧಿ ಯೋಜನೆಗೆ ಸರ್ಕಾರದಅಂಗೀಕಾರ ಲಭಿಸಿದರೂ,ಅಭಿವೃದ್ಧಿಭಾಗ್ಯ ಲಭಿಸಲೇ ಇಲ್ಲ.ಇದರಿಂದಹೊಂಡ-ಗುಂಡಿಗಳಲ್ಲಿಧೂಳಿನ ಸಿಂಚನದೊಂದಿಗೆ ಪ್ರಯಾಣಿಕರುಸಂಚರಿಸಬೇಕಾದ ಅನಿವಾರ್ಯತೆಯಿದೆ.

ಹಲವುವರ್ಷಗಳಿಂದ ಶಿಥಿಲಾವಸ್ಥೆಯಲ್ಲಿರುವರಸ್ತೆ ಬಗ್ಗೆ ಜನಪ್ರತಿನಿಧಿಗಳಿಗಿರುವಇಚ್ಛಾಶಕ್ತಿಯ ಕೊರತೆ ಎದ್ದುಕಾಣುತ್ತಿದೆ.ಒಂದೆಡೆನಾಗರಿಕರ ಪ್ರತಿಭಟನೆ,ಇನ್ನೊಂದೆಡೆಖಾಸಗಿ ಬಸ್ ಮಾಲೀಕರ ಸಂಘದಿಂದಬಸ್ ನಿಲುಗಡೆಗೊಳಿಸಿ ಹರತಾಳನಡೆಸಿದರೂ ಸರ್ಕಾರ ಕಿವಿಗೊಡಲಿಲ್ಲ.2026 ಜನವರಿಯಲ್ಲೇರಸ್ತೆ ಅಭಿವೃದ್ಧಿಗೆ ಅನುದಾನಬಿಡುಗಡೆಯಾಗಿದ್ದರೂವ ಕಾಮಗಾರಿಆರಂಭಿಸಲು ಎದುರಾಗಿರುವ ತೊಡಕುಗಳಬಗ್ಗೆ ಅಧಿಕಾರಿಗಳಲ್ಲೂ ಉತ್ತರವಿಲ್ಲದಸ್ಥಿತಿಯಿದೆ.

ಭಾರಿವಾಹನಗಳ ಸಂಚಾರ

ದಿನವೊಂದಕ್ಕೆನೂರಾರು ಭಾರಿ ವಾಹನಗಳು ಅತಿಯಾದಭಾರ ಹೇರಿಕೊಂಡು ಈ ಹಾದಿಯಾಗಿಸಂಚರಿಸುತ್ತಿದೆ.ಕಾನೂನುಉಲ್ಲಂಘಿಸಿ ಸಂಚರಿಸುತ್ತಿದ್ದರೂ,ಅಧಿಕಾರಿಗಳುತಪಾಸಣೆಗೂ ಮುಂದಾಗುತ್ತಿಲ್ಲ.ಇನ್ನುಪೆರ್ಲ ಆರ್‌ಟಿಒ ಚೆಕ್‌ಪೋಸ್ಟ್ಅಧಿಕಾರಿಗಳು ಸಂಜೆ 5ರವರೆಗೆಮಾತ್ರ ಕರ್ತವ್ಯದಲ್ಲಿದ್ದು,ನಂತರಕಚೇರಿ ಮುಚ್ಚುವುದರಿಂದ ಸಂಜೆ5ರನಂತರ ಭಾರಿ ವಾಹನಗಳು ಅತಿಯಾದಭಾರ ಹೇರಿಕೊಂಡು ಸಂಚರಿಸಿದರೂಕೇಳುವವರಿಲ್ಲ.ಇದರಿಂದರಸ್ತೆ ಮತ್ತಷ್ಟು ಹದಗೆಡುತ್ತಿದೆ.

ಹದಗೆಟ್ಟರಸ್ತೆಯಲ್ಲೇ ಪ್ರಯಾಣ

ಉಕ್ಕಿನಡ್ಕಕಾಸರಗೋಡು ವೈದ್ಯಕೀಯ ಕಾಲೇಜುಆಸ್ಪತ್ರೆಗೆ ಸಂಚರಿಸುವ ಪ್ರಮುಖರಸ್ತೆ ಇದಾಗಿದ್ದು,ತೀರಾನಾದುರಸ್ತಿಯಲ್ಲಿರುವ ರಸ್ತೆಯಲ್ಲಿಸಂಚರಿಸಲು ವಾಹನ ಸವಾರರು ಹರಸಾಹಸಪಡುವಂತಾಗಿದೆ.

ಈಹಿಂದೆ 40ಲಕ್ಷರೂ.ವೆಚ್ಚದಲ್ಲಿತಾತ್ಕಾಲಿಕವಾಗಿ ದುರಸ್ತಿ ನಡೆಸಲುಸರ್ಕಾರ ಮುಂದಾಗುತ್ತಿದ್ದಂತೆನಾಗರಿಕರು ಎಚ್ಚೆತ್ತು ಇದಕ್ಕೆಆಕ್ಷೇಪಿಸಿದ ಹಿನ್ನೆಲೆಯಲ್ಲಿಸಮಗ್ರ ಅಭಿವೃದ್ಧಿಗಾಗಿ 30.36ಕೋಟಿರೂ.ಮೀಸಲಿರಿಸಿದ್ದರೂ,ಎರಡುವರೆತಿಂಗಳು ಕಳೆದರೂ ಕಾಮಗಾರಿಆರಂಭವಾಗಿಲ್ಲ.ಪ್ರಸ್ತುತಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು,ಅದಾದಬಳಿಕ ಮಳೆಗಾಲ ಆರಂಭವಾಗುವುದರಿಂದರಸ್ತೆ ಅಭಿವೃದ್ಧಿ ಇನ್ನಷ್ಟುವಿಳಂಬವಾಗುವ ಸಾಧ್ಯತೆ ಇದೆ.

ದುರ್ಬಲಸೇತುವೆ

ಈಮಧ್ಯೆ ಪಳ್ಳತ್ತಡ್ಕ ಸೇತುವೆದುರ್ಬಲಗೊಂಡಿದ್ದು,ತಳಭಾಗದಕಾಂಕ್ರೀಟ್ ಚಪ್ಪಡಿ ಕಿತ್ತುಬೀಳುತ್ತಿದೆ.ಸೇತುವೆಶಿಥಿಲವಾಗಿರುವ ಬಗ್ಗೆ ಸಂಬಂಧಪಟ್ಟಅಧಿಕಾರಿಗಳು ಸೂಚನಾಫಲಕ ಅಳವಡಿಸಿದ್ದು,ಭಾರಿವಾಹನ ಸಂಚರಿಸಲದಂತೆ ಎಚ್ಚರಿಕೆಯನ್ನೂನೀಡಿದ್ದಾರೆ.ಆದರೆತಡೆ ನೀಡಲು ಅಧಿಕಾರಿಗಳಿಗೆಸಾಧ್ಯವಾಗುತ್ತಿಲ್ಲ.ಕಾಮಗಾರಿಆರಂಭಕ್ಕೆ ಚುನಾವಣಾ ಪ್ರಕ್ರಿಯೆಅಡ್ಡಿಯಾಗಿದ್ದರೆ,ಚುನಾವಣೆಕಳೆದು ಹೊಸ ಸರ್ಕಾರ ಅಸ್ತಿತ್ವಕ್ಕೆಬರುವ ವೇಳೆಗೆ ಮಳೆಗಾಲ ಆರಂಭಗೊಳ್ಳುವಹಿನ್ನೆಲೆ ಮತ್ತೆ ನನೆಗುದಿಗೆಬೀಳುವ ಸಾಧ್ಯತೆಯೇ ಹೆಚ್ಚು.ಈಮೂಲಕ ಶೋಚನೀಯಾವಸ್ಥೆಯಲ್ಲೇಚೆರ್ಕಳ-ಕಲ್ಲಡ್ಕಅಂತಾರಾಜ್ಯ ಸಂಪರ್ಕದ ರಸ್ತೆಯಲ್ಲಿಪ್ರಯಾಣಿಸಬೇಕಾದ ದುಸ್ಥಿತಿಎದುರಾಗಲಿದೆ.

ಚೆರ್ಕಳ-ಕಲ್ಲಡ್ಕ ರಸ್ತೆ ಚೆರ್ಕಳದಿಂದ ಉಕ್ಕಿನಡ್ಕವರೆಗೆ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ 30.36 ಕೋಟಿ ರೂ. ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮತಿಯೊಂದಿಗೆ ತಾಂತ್ರಿಕ ಅನುಮತಿ ಲಭ್ಯವಾಗಿದ್ದರೂ, ಚುನಾವಣೆ ಘೋಷಣೆ ಹಿನ್ನೆಲೆ ಕೆಲಸ ಆರಂಭಿಸಲಾಗಿಲ್ಲ.