cheating 
ಉಡುಪಿ

ಟ್ಯಾಬ್ ಖರೀದಿಸಿ ಹಣ ನೀಡದೆ ವಂಚನೆ, ಆರೋಪಿ ಸೆರೆ

ಕಾಸರಗೋಡು: ಟ್ಯಾಬ್ ಖರೀದಿಸಿದ ಬಳಿಕ ಅದರ ಹಣ ನೀಡದೆ ಪರಾರಿಯಾಗಿದ್ದ ಆರೋಪಿ, ಕೊಚ್ಚಿ ಇಡಪಳ್ಳಿ ನಿವಾಸಿ ಕಿಶೋರ್ ಶಂಕರ್ (41) ಎಂಬಾತನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಜು.20ರಂದು ಕಾಸರಗೋಡು ಹೊಸ ಬಸ್ ನಿಲ್ದಾಣ ಬಳಿಯ ಮೊಬೈಲ್ ಅಂಗಡಿಯೊಂದಕ್ಕೆ ಬಂದು ಸ್ಯಾಮ್‌ಸಂಗ್ ಎಸ್-9 ಮಾಡೆಲ್‌ನ ಟ್ಯಾಬ್ ಖರೀದಿಸಿದ್ದ. 32,492 ರೂ. ಬ್ಯಾಂಕ್ ಆ್ಯಪ್‌ನ ಮೂಲಕ ಕಳುಹಿಸಿಕೊಡುವುದಾಗಿ ಅಂಗಡಿ ಮಾಲೀಕನಿಗೆ ತಿಳಿಸಿ ಟ್ಯಾಬ್ ಪಡೆದು ಪರಾರಿಯಾಗಿದ್ದನು. ಈ ಬಗ್ಗೆ ಅಂಗಡಿ ಮಾಲೀಕ ದೂರು ನೀಡಿದ್ದರು.

ಪೊಲೀಸರು ಪ್ರಕರಣ ದಾಖಲಿಸಿ ಎಸ್‌ಐ ಎಂ.ಟಿ.ಪಿ.ಸೈಫುದ್ದೀನ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.