ಚಾತುರ್ಮಾಸ್ಯ ವ್ರತಾಚರಣೆಯ ಆಮಂತ್ರಣ ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಬಿಡುಗಡೆಮಾಡಲಾಯಿತು. ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ, ಶಿರಸಿ ಶಾಸಕ ಭೀಮಣ್ಣ ಟಿ.ನಾಯ್ಕ, ಮಂಗಳೂರು ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮೊದಲಾದವರಿದ್ದರು. 
ಉಡುಪಿ

ಜನ ಕಲ್ಯಾಣ ಚಿಂತನೆಯೊಂದಿಗೆ ಚಾತುರ್ಮಾಸ್ಯ ವ್ರತಾಚರಣೆ

ಬೆಳ್ತಂಗಡಿ: ಲೋಕ ಕಲ್ಯಾಣಕ್ಕಾಗಿ ಚಾತುರ್ಮಾಸ್ಯ ವ್ರತಾಚರಣೆ ನಡೆಯುತ್ತಿದೆ. ಆ ಮೂಲಕ ಜನರಿಗೆ ಸಂಸ್ಕಾರ ಕೊಡುವ ಕಾರ್ಯವಾಗುತ್ತದೆ. ವ್ರತಾಚರಣೆಯಲ್ಲಿ ಜನ ಕಲ್ಯಾಣ ಯೋಚನೆ ಮಾಡುತ್ತಾ ಅಧ್ಯಾತ್ಮಿಕ ವಿಚಾರ ಸಾರುವ ಕಾರ್ಯವಾಗುವುದು ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ ಹೇಳಿದರು.
ಬೈಂದೂರು ಗೋಳಿಹೊಳೆ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ಜುಲೈ 29ರಿಂದ ಸೆಪ್ಟೆಂಬರ್ 14ರ ತನಕ ನಡೆಯುವ ಚಾತುರ್ಮಾಸ್ಯ ವ್ರತಾಚರಣೆಯ ಆಮಂತ್ರಣ ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಭಾನುವಾರ ಬಿಡುಗಡೆ ಮಾಡಿ ಮಾತನಾಡಿದರು.
ವ್ರತಾಚರಣೆಯಿಂದ ಆತ್ಮಶಕ್ತಿ ಬಲವರ್ಧನೆಯಾಗುವುದು. ಆಧ್ಯಾತ್ಮಿಕ ಸಿದ್ಧಾಂತವನ್ನು ಜನಮಾನಸಕ್ಕೆ ಬಿತ್ತರಿಸಿ ಹೊಸ ಚೈತನ್ಯ ಮೂಡಿಸುವ ಕಾರ್ಯವಾಗುವುದು. ನಮ್ಮ ಯುವ ಸಮುದಾಯಕ್ಕೆ ಸಂಸ್ಕಾರ ಶಿಕ್ಷಣ ಅಗತ್ಯವಿದ್ದು ಚಾತುರ್ಮಾಸ್ಯದ ಮೂಲಕ ಅದಕ್ಕೆ ಹೆಚ್ಚು ಮಹತ್ವ ನೀಡಲಾಗುವುದು ಎಂದು ಹೇಳಿದರು.
ಸೆ.3ರಂದು ಶ್ರೀಗಳ ಪಟ್ಟಾಭಿಷೇಕ ವರ್ಧಂತಿ ಮಹೋತ್ಸವವೂ ಬಿಳಿಶಿಲೆ ದೇವಸ್ಥಾನದಲ್ಲಿ ವೈಭವದಿಂದ ನಡೆಯಲಿದ್ದು, ನವೆಂಬರ್ 25ರಂದು ಹರಿದ್ವಾರ ಶಾಖಾ ಮಠದ ದಶಮಾನೋತ್ಸವ ಸಂಭ್ರಮಾಚರಣೆ ಹರಿದ್ವಾರ ಶಾಖಾ ಮಠದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.
ಶಿರಸಿ ಶಾಸಕ ಭೀಮಣ್ಣ ಟಿ.ನಾಯ್ಕ, ಮಂಗಳೂರು ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್, ಕ್ಷೇತ್ರದ ಟ್ರಸ್ಟಿಗಳಾದ ಚಿತ್ತರಂಜನ್ ಮಂಗಳೂರು, ಪೀತಾಂಬರ ಹೇರಾಜೆ ಬೆಳ್ತಂಗಡಿ, ಚಂದ್ರ ಎಸ್.ಕೆ.ಸಾಗರ, ಎಚ್.ಆರ್.ನಾಯ್ಕ ಕುಮಟಾ ಮಾತನಾಡಿ ಸಲಹೆ ನೀಡಿದರು.
ವಿಜಯ ಕುಮಾರ್ ಸೊರಕೆ ಪುತ್ತೂರು, ಚಿದಾನಂದ ಮೂರ್ತಿ ಮಂಗಳೂರು, ರವಿದಾಸ್ ಬೆಂಗಳೂರು, ಕೆ.ಎಂ.ನಾಗೇಶ್ ಕುಮಾರ್ ಬೆಳ್ತಂಗಡಿ, ಕೆ.ಸಂಜೀವ ಪೂಜಾರಿ ಬಂಟ್ವಾಳ, ರಘುನಾಥ ಮಾಬೆನ್ ಉಡುಪಿ, ಕೇಶವ ಬಂಗೇರ, ಪ್ರಶಾಂತ್ ಎಂ, ಪುರುಷೋತ್ತಮ ಡಿ.ಎ.ಧರ್ಮಸ್ಥಳ, ಪಿ.ರಾಜೇಶ್ ಮೂಡುಕೋಡಿ, ಬೇಬಿ ಕುಂದರ್ ಬಂಟ್ವಾಳ, ಯತೀಶ್ ಸುವರ್ಣ, ತುಕಾರಾಮ್ ಸಾಲಿಯಾನ್, ಬಾಲಕೃಷ್ಣ ಎ.ಶೆಟ್ಟಿ, ಪಿ.ತಿಮ್ಮಪ್ಪ ಗೌಡ, ದೇವಿಪ್ರಸಾದ್, ಜಯಪ್ರಕಾಶ್ ಬಂಟ್ವಾಳ, ವಕೀಲ ಅನಿಲ್ ಕುಮಾರ್ ಬೆಳ್ತಂಗಡಿ, ಲೋಕೇಶ್ ಶಾಂತಿ, ಮಹೇಶ್ ಶಾಂತಿ ಮುಂತಾದವರು ಇದ್ದರು.