ಚಾರ್ಮಾಡಿ ಘಾಟಿ ತಿರುವಿನಲ್ಲಿ ಪಲ್ಟಿಯಾದ ಟಿಟಿ ವಾಹನ. 
ಉಡುಪಿ

ಟಿಟಿ ಪಲ್ಟಿಯಾಗಿ ಓರ್ವ ಸಾವು

ಇಂದಿರಾ ಎನ್ ಕೆ
ಬೆಳ್ತಂಗಡಿ: ಭದ್ರಾವತಿಯ ಶಂಕರಘಟ್ಟದಿಂದ ಉಜಿರೆ ಕಡೆಗೆ ಬರುತ್ತಿದ್ದ ಟಿಟಿ ವಾಹನ ಚಾರ್ಮಾಡಿ ಘಾಟಿಯ ಹತ್ತನೇ ತಿರುವು ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಓರ್ವ ಮೃತಪಟ್ಟು, 9 ಮಂದಿ ಗಾಯಗೊಂಡ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ.
ಪ್ರಯಾಣಿಕ ಶೇಖರಪ್ಪ (58) ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಇತರ ಪ್ರಯಾಣಿಕರಾದ ದೇವಿಕಾ(40), ಹೇಮಾವತಿ(60), ಪುಟ್ಟಪ್ಪ(63), ಆಶಾ(40), ಲೋಕ್ಷಿತ್(6), ಮೇಘನಾ(14), ಹರ್ಷ(23), ಶ್ರೇಯಸ್(13), ಕಾವ್ಯಾ (28) ಹಾಗೂ ಕಮಲಮ್ಮ(55) ಗಾಯಗೊಂಡಿದ್ದು ಕಕ್ಕಿಂಜೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಾಳುಗಳ ಪೈಕಿ ಕೆಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಬೆಳ್ತಂಗಡಿ ಸಂಚಾರ ಪೊಲೀಸರು ಸ್ಥಳಕ್ಕೆ ತರಳಿ ಪರಿಶೀಲಿಸಿದರು.