ಮಣಿಪಾಲದ ಶಿವಪಾಡಿಯಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಚಪ್ಪರ ಮುಹೂರ್ತ ನೆರವೇರಿಸಲಾಯಿತು. ಬಾಲಕೃಷ್ಣ ಪ್ರಭು, ದಿನೇಶ್ ಪ್ರಭು, ಮಹೇಶ್ ಠಾಕೂರ್, ಶ್ರೀಕಾಂತ್ ಪ್ರಭು, ಸತೀಶ್ ಪಾಟೀಲ್, ಪ್ರಕಾಶ್ ಪ್ರಭು, ಪ್ರಕಾಶ್ ಕುಕ್ಕೆಹಳ್ಳಿ, ಗಣೇಶ್, ಸಂದೇಶ್ ಪ್ರಭು ಇದ್ದರು.
* ಫೆ.14, 15ರಂದು ಕಾರ್ಯಕ್ರಮ
ಉಡುಪಿ: ಮಣಿಪಾಲದ ಶಿವಪಾಡಿಯಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ಫೆ.14, 15ರಂದು ನಡೆಯಲಿರುವ ಐತಿಹಾಸಿಕ 'ಶಿವಪಾಡಿ ವೈಭವ. ಕಾರ್ಯಕ್ರಮದ ನಿಮಿತ್ತ ದೇವಸ್ಥಾನದ ವಠಾರದಲ್ಲಿ ಗುರುವಾರ (ಜ.29) ಚಪ್ಪರ ಮಹೂರ್ತ ನೆರವೇರಿತು. ಮಾಹೆಯ ಎಸ್ಟೇಟ್ ಅಫೀಸರ್ ಬಾಲಕೃಷ್ಣ ಪ್ರಭು ಚಪ್ಪರ ಮುಹೂರ್ತಕ್ಕೆ ಚಾಲನೆ ನೀಡಿದರು.
ಧಾರ್ಮಿಕ, ಸಾಹಿತ್ಯಿಕ ಕಾರ್ಯಕ್ರಮ, ಯಕ್ಷಗಾನ ಮೇಳ, ಆಹಾರ ಮೇಳ, ನೃತ್ಯ ಮತ್ತು ಚಿತ್ರಕಲಾ ಸ್ಪರ್ಧೆ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ. 2 ಸಾವಿರಕ್ಕೂ ಅಧಿಕ ಜನರು ಕುಳಿತುಕೊಳ್ಳಲು ಬೃಹತ್ ಸಭಾಂಗಣ, ಬೃಹತ್ ವೇದಿಕೆ, ಕೃಷಿ, ಆಹಾರ, ವಸ್ತು ಪ್ರದರ್ಶನ, ಪುಸ್ತಕ ಭಂಡಾರ ಸೇರಿದಂತೆ 250ಕ್ಕೂ ಅಧಿಕ ಮಳಿಗೆ, ಅನ್ನ ಪ್ರಸಾದ ವಿತರಣೆಯ ಸ್ಥಳ ಸಹಿತ ವಿಶಾಲ ಜಾಗಕ್ಕೆ ಚಪ್ಪರ ಮುಹೂರ್ತ ನೆರವೇರಿಸಲಾಯಿತು.
ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ನ ಅಧ್ಯಕ್ಷ ದಿನೇಶ್ ಪ್ರಭು, ಆಡಳಿತದ ಮೊಕ್ತೇಸರ ಮಹೇಶ್ ಠಾಕೂರ್, ಪ್ರಮುಖರಾದ ಶ್ರೀಕಾಂತ್ ಪ್ರಭು, ಸತೀಶ್ ಪಾಟೀಲ್, ಪ್ರಕಾಶ್ ಪ್ರಭು, ಪ್ರಕಾಶ್ ಕುಕ್ಕೆಹಳ್ಳಿ, ಮಂಜು ಶಾಮಿಯಾನದ ಮುಖ್ಯಸ್ಥ ಗಣೇಶ್, ಸಂದೇಶ್ ಪ್ರಭು ಇತರರಿದ್ದರು.