ಉಡುಪಿಯ ಕಾಮಾಕ್ಷಿ ದೇವಿ ದೇಗುಲದಲ್ಲಿ ಪ್ರಧಾನಿ ಮೋದಿ ಅವರ ಆರೋಗ್ಯ, ಆಯುಷ್ಯ ವರ್ಧನೆಗೆ ಚಂಡಿಕಾ ಯಾಗ ನಡೆಸಲಾಯಿತು. ಪುತ್ತೂರು ಶ್ರೀನಿವಾಸ ತಂತ್ರಿ, ರತ್ನಾಕರ ಇಂದ್ರಾಳಿ, ದಿನೇಶ್​ ಅಮೀನ್​, ಶ್ರೀಕಾಂತ ನಾಯಕ್​ ಇತರರಿದ್ದರು. 
ಉಡುಪಿ

ಪ್ರಧಾನಿ ಮೋದಿ ಆರೋಗ್ಯ, ಆಯುಷ್ಯ ವರ್ಧನೆಗೆ ಚಂಡಿಕಾ ಯಾಗ

* ಲಕ್ಷ್ಮೀಂದ್ರನಗರ ಕಾಮಾಕ್ಷಿ ದೇವಿ ದೇಗುಲದಲ್ಲಿ ಹೋಮ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಜೀವನದ 25 ವರ್ಷಗಳ ಸೇವೆಯ ಹಿನ್ನೆಲೆಯಲ್ಲಿ ಹಾಗೂ ದೇಶದ ಆಡಳಿತವನ್ನು ಇನ್ನಷ್ಟು ಸಮರ್ಥವಾಗಿ ಮುನ್ನಡೆಸಲು ಹೆಚ್ಚಿನ ಆರೋಗ್ಯ, ಆಯುಷ್ಯ ವರ್ಧನೆಗಾಗಿ ಉಡುಪಿ ಲಕ್ಷ್ಮೀಂದ್ರನಗರದಲ್ಲಿರುವ ಕಾಮಾಕ್ಷಿ ದೇವಿ ದೇವಸ್ಥಾನದಲ್ಲಿ ಚಂಡಿಕಾ ಯಾಗ ನೆರವೇರಿಸಲಾಯಿತು.

ಶರನ್ನವರಾತ್ರಿ ಆರಂಭದ ಹಿನ್ನೆಲೆಯಲ್ಲಿ ದೇಗುಲದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮ ನಡೆದವು. ಯೋಗ ಮತ್ತು ಧ್ಯಾನ ಶಿಬಿರ, ಉಚಿತ ವೈದ್ಯಕಿಯ ತಪಾಸಣಾ ಶಿಬಿರ, ಚಿತ್ರಕಲಾ ಸ್ಪರ್ಧೆ ಹಾಗೂ ರಂಗೋಲಿ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಧ್ಯಾಹ್ನ ಅನ್ನಪ್ರಸಾದ ವಿತರಣೆ ನಡೆಯಿತು.

ಉಡುಪಿ ಲಕ್ಷ್ಮೀಂದ್ರನಗರದಲ್ಲಿರುವ ಕಾಮಾಕ್ಷಿ ದೇವಿ.

ಮಧ್ಯಾಹ್ನ ಚಂಡಿಕಾ ಯಾಗದ ಪೂರ್ಣಾಹುತಿ ಹಾಗೂ ಸಾಮೂಹಿಕ ಪ್ರಾರ್ಥನೆಯ ಸಂದರ್ಭದಲ್ಲಿ ದೇಶಕ್ಕೆ ಹಾಗೂ ಪ್ರಧಾನಿಗೆ ಶಕ್ತಿ ನೀಡುವಂತೆ ಕೋರಲಾಯಿತು. ನೂರಾರು ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ, ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ ಶೆಟ್ಟಿ, ದೇವಸ್ಥಾನದ ತಂತ್ರಿಗಳಾದ ಪುತ್ತೂರು ಶ್ರೀನಿವಾಸ ತಂತ್ರಿ, ಆಡಳಿತ ಮೊಕ್ತೇಸರ ರತ್ನಾಕರ ಇಂದ್ರಾಳಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಶ್ರೀಕಾಂತ ನಾಯಕ್​, ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್​ ಅಮೀನ್​, ಪ್ರಧಾನ ಕಾರ್ಯದರ್ಶಿ ಜಗದೀಶ್​ ಆಚಾರ್ಯ, ನಗರಸಭಾ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಒಬಿಸಿ ಮೋರ್ಚಾ ಅಧ್ಯಕ್ಷ ಪ್ರವೀಣ ಗುರ್ಮೆ, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಪಂದುಬೆಟ್ಟು, ಉಪಾಧ್ಯಕ್ಷ ಧೀರಜ್​ ಕೆ. ಎಸ್​, ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಪ್ರಭು ಹಾಗೂ ನಗರಸಭೆಯ ಮಾಜಿ ಸದಸ್ಯರು ಪಾಲ್ಗೊಂಡಿದ್ದರು.