ಹವ್ಯಕ ಸಭಾ (ರಿ.) ಉಡುಪಿಯ ಅಧ್ಯಕ್ಷರಾಗಿ ನೇಮಕಗೊಂಡ ಸಿ.ಎಚ್​. ಸುಬ್ರಹ್ಮಣ್ಯ ಭಟ್​ ಹಾಗೂ ಕಾರ್ಯದರ್ಶಿಯಾಗಿ ಆಯ್ಕೆಯಾದ ನಟೇಶ್​ ವೈ.ಆರ್​. 
ಉಡುಪಿ

ಹವ್ಯಕ ಸಭಾ ಉಡುಪಿ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಭಟ್​ ನೇಮಕ

* ವಾರ್ಷಿಕ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ 

* ಕಾರ್ಯದರ್ಶಿಯಾಗಿ ನಟೇಶ್​ ವೈ.ಆರ್​. ನೇಮಕ

ಉಡುಪಿ: ಹವ್ಯಕ ಸಭಾ (ರಿ.) ಉಡುಪಿಯ 2026-27ನೇ ಸಾಲಿನ ಅಧ್ಯಕ್ಷರಾಗಿ ಶಿಕ್ಷಣತಜ್ಞ ಸಿ.ಎಚ್​. ಸುಬ್ರಹ್ಮಣ್ಯ ಭಟ್​ ಸರ್ವಾನುಮತದಿಂದ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಡಾ. ಮಹಾದೇವ  ಭಟ್​ ಹಾಗೂ ಶ್ವೇತಾ ಹೆಗಡೆ, ಕಾರ್ಯದರ್ಶಿಯಾಗಿ ನಟೇಶ್​ ವೈ.ಆರ್​. ನೇಮಕಗೊಂಡಿದ್ದಾರೆ.
ಉಡುಪಿ ಪೆರಂಪಳ್ಳಿಯ ಹವ್ಯಕ ಧಾಮದಲ್ಲಿ ಸಭಾದ ಅಧ್ಯಕ್ಷ ಪ್ರೊಫೆಸರ್​ ಶಂಕರ್​ ಅಧ್ಯಕ್ಷತೆಯಲ್ಲಿ ನಡೆದ ಉಡುಪಿ ಸಭಾದ 30ನೇ ವಾರ್ಷಿಕ ಮಹಾಸಭೆಯಲ್ಲಿ ಒಟ್ಟು  23 ಸದಸ್ಯರನ್ನೊಳಗೊಂಡ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು.
ಸಹ -ಕಾರ್ಯದರ್ಶಿಗಳಾಗಿ ಡಾ. ಜಯಶಂಕರ್​ ಕಂಗಣ್ಣಾರು, ಲಕ್ಷ್ಮೀ ಹೆಗಡೆ, ಕೋಶಾಧಿಕಾರಿಯಾಗಿ ಅರವಿಂದಕುಮಾರ್​ ಹಾಗೂ ಆಂತರಿಕ ಲೆಕ್ಕ ಪರಿಶೋಧಕರಾಗಿ ಪ್ರೊ. ಕೆ.ಸದಾಶಿವ್​ ರಾವ್​  ಆಯ್ಕೆಯಾದರು. 
ನಿಕಟಪೂರ್ವ ಕಾರ್ಯದರ್ಶಿ ಪ್ರಸನ್ನ ಅಡಿಗ ಅವರು ಈವರಗೆ ಕೈಗೊಂಡ ಕಾರ್ಯಚಟುವಟಿಕೆಗಳ ವರದಿ ವಾಚಿಸಿದರು. ಕೋಶಾಧಿಕಾರಿ ಗಿರೀಶ್​ ಕೆ.ಎನ್​. ಪರಿಶೋಧಿತ ಲೆಕ್ಕಪತ್ರ ಮಂಡಿಸಿದರು. ಉಡುಪಿ ಜಿಲ್ಲೆಯಲ್ಲಿರುವ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಹವ್ಯಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಮಂಜುನಾಥ್​ ಭಟ್​ ಬೈಲಾರ ಮತ್ತು ಬಳಗದವರಿಂದ ವೇದಘೋಷ ನಡೆಯಿತು. ಆದ್ಯಾ ಹಾಗೂ ಆರಾಧ್ಯ ಪ್ರಾರ್ಥಿಸಿದರು. ಎಚ್​.ಎನ್​. ವೆಂಕಟೇಶ್​ ಸ್ವಾಗತಿಸಿದರು. ಧಾರ್ಮಿಕ ಕಾರ್ಯಕ್ರಮಗಳ ನಿಮಿತ್ತ ರುದ್ರ ಪಠಣ, ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು.