ಜಿಲ್ಲೆಯ ಪ್ರಿನ್ಸಿಪಲ್ ಸೆನ್ಸಸ್ ಆಫೀಸರ್ ಆಗಿರುವ ಎಡಿಎಂ ಪಿ.ಉದಯಕುಮಾರ್ ನೇತೃತ್ವದಲ್ಲಿ ಗಣತಿದಾರರು ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.  
ಉಡುಪಿ

ಕಾಸರಗೋಡಿನಲ್ಲಿ ಗಣತಿ ಕಾರ್ಯ ಚುರುಕು

ಕಾಸರಗೋಡು: ಭಾರತ್ ಸೆನ್ಸಸ್ 2027ರ ಮೊದಲ ಹಂತದ ಗಣತಿ ಕಾರ್ಯಾಚರಣೆ ಅಂಗವಾಗಿ ಗಣತಿದಾರರ ನೇತೃತ್ವದಲ್ಲಿ ಮನೆ ಭೇಟಿ ಕಾರ್ಯ ಚುರುಕುಗೊಂಡಿದೆ. ಸ್ವಯಂ ಗಣತಿ ಅಂಗವಾಗಿ ಭರ್ತಿ ಮಾಡಲಾದ 34 ಪ್ರಶ್ನೆಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲು ಜನಗಣತಿ ಅಧಿಕಾರಿಗಳು ಜಿಲ್ಲಾದ್ಯಂತ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ.
ಮನೆಗಳ ಮತ್ತು ಕಟ್ಟಡಗಳ ದತ್ತಾಂಶ ಸಂಗ್ರಹಣೆ ಮತ್ತು ಪಟ್ಟಿ ಸಿದ್ಧಪಡಿಸುವುದು ಈ ಹಂತದಲ್ಲಿ ನಡೆಯುತ್ತದೆ. ಜನಗಣತಿ ಕಾರ್ಯ ಸುಗಮಗೊಳಿಸಲು ಜಿಲ್ಲೆಯನ್ನು 2,516 ಹೌಸ್ ಲಿಸ್ಟಿಂಗ್ ಬ್ಲಾಕ್‌ಗಳಾಗಿ ವಿಂಗಡಿಸಲಾಗಿದೆ. ಆಯಾ ಬ್ಲಾಕ್‌ಗೆ ನಿಯೋಜಿಸಲಾದ ಗಣತಿದಾರರು ಬ್ಲಾಕ್‌ಗಳ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ನಂಬರ್ ಬರೆಯುತ್ತಾರೆ.
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮತ್ತು ನಗರಸಭೆಗಳಲ್ಲಿ ಜನಗಣತಿ ಸಂಬಂಧಿತ ಕಾರ್ಯಗಳಿಗಾಗಿ ಒಟ್ಟು 2,509 ಗಣತಿದಾರರು ಮತ್ತು 366 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ತಾಂತ್ರಿಕ ನೆರವಿಗೆ ಒಂಬತ್ತು ತಾಂತ್ರಿಕ ಸಹಾಯಕರು, 40 ಫೀಲ್ಡ್ ಟ್ರೈನರ್ಸ್, 7 ಸೆನ್ಸಸ್ ಚಾರ್ಜ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಜಿಲ್ಲೆಯ ಪ್ರಿನ್ಸಿಪಲ್ ಸೆನ್ಸಸ್ ಆಫೀಸರ್‌ರಾಗಿ ಮತ್ತು ಎಡಿಎಂ ಪಿ.ಉದಯಕುಮಾರ್ ಜಿಲ್ಲಾ ಸೆನ್ಸಸ್ ಆಫೀಸರ್‌ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.