ಬಿಜೆಪಿ ತ್ರಾಸಿ ಮಹಾಶಕ್ತಿ ಕೇಂದ್ರದ ಬಿಜೆಪಿ ಕಾರ್ಯಕರ್ತರಿಂದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಜನ್ಮ ದಿನ ಆಚರಿಸಲಾಯಿತು. ಪ್ರಮುಖರಾದ ಮಿಥುನ್ ದೇವಾಡಿಗ, ರವೀಂದ್ರ ಖಾರ್ವಿ ಹೊಸಪೇಟೆ, ಅಂತೋನಿ ಡಿಸೋಜ, ರಾಜು ಪೂಜಾರಿ, ರಾಜೇಂದ್ರ ಶೇರುಗಾರ್ ಗಂಗೊಳ್ಳಿ, ಚಂದ್ರ ಖಾರ್ವಿ ಲೈಟ್‌ಹೌಸ್ ಉಪಸ್ಥಿತರಿದ್ದರು.
- ಬಿಜೆಪಿ ಕಾರ್ಯಕರ್ತರಿಂದ ತ್ರಾಸಿ ಸರ್ಕಲ್‌ನಲ್ಲಿ ಗಿಡ ವಿತರಣೆ
- ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಜನ್ಮದಿನ
ಕುಂದಾಪುರ: ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರ ಜನ್ಮದಿನ ಪ್ರಯುಕ್ತ ಬಿಜೆಪಿ ತ್ರಾಸಿ ಮಹಾಶಕ್ತಿ ಕೇಂದ್ರದ ಬಿಜೆಪಿ ಕಾರ್ಯಕರ್ತರು ತ್ರಾಸಿ ಸರ್ಕಲ್‌ನಲ್ಲಿ ಸಿಹಿ ಹಂಚಿ, ಗಿಡ ವಿತರಿಸಿ ಜನ್ಮ ದಿನ ಆಚರಿಸಿದರು.
ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಗಿಡಗಳನ್ನು ವಿತರಿಸಿದರು. ಬೈಂದೂರು ಮಂಡಲ ಬಿಜೆಪಿ ಉಪಾಧ್ಯಕ್ಷ ಮಿಥುನ್ ದೇವಾಡಿಗ, ಬಿಜೆಪಿ ತ್ರಾಸಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವೀಂದ್ರ ಖಾರ್ವಿ ಹೊಸಪೇಟೆ, ಅಲ್ಪಸಂಖ್ಯಾತ ಮೋರ್ಚಾದ ಅಂತೋನಿ ಡಿಸೋಜ, ಪಾಂಡುರಂಗ ತ್ರಾಸಿ, ಬಿಜೆಪಿ ಮುಖಂಡರಾದ ರಾಜು ಪೂಜಾರಿ, ರಾಜೇಂದ್ರ ಶೇರುಗಾರ್ ಗಂಗೊಳ್ಳಿ, ಚಂದ್ರ ಖಾರ್ವಿ ಲೈಟ್‌ಹೌಸ್, ಗಂಗೊಳ್ಳಿ ಗ್ರಾಪಂ ಸದಸ್ಯರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.