ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ಯಪ್ಪಾಡಿಯಲ್ಲಿ ಅಂಗಡಿಯ ಮುಂದೆ ಮಲಗಿದ್ದ ಎರಡು ದನಗಳನ್ನು ಕಳವುಗೈದು ಕಾರಿನಲ್ಲಿ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಜೋಕಟ್ಟೆ ನಿವಾಸಿ ಮುಹಮ್ಮದ್ ಅಶ್ರಫ್(30) ಬಂಧಿತ. ಪ್ರಕರಣಕ್ಕೆ ಸಂಬಂಧಿಸಿ ಇತರ ಆರೋಪಿಗಳಾದ ಜೋಕಟ್ಟೆಯ ರಾಸಿಕ್ (26) ಹಾಗೂ ಉಳ್ಳಾಲ ಅಳಕೆ ನಿವಾಸಿ ಮುಹಮ್ಮದ್ ಇರ್ಫಾನ್(25) ಎಂಬುವರನ್ನು ಜುಲೈ 4ರಂದು ಬಂಧಿಸಲಾಗಿತ್ತು. ಕಳವು ಮಾಡಿದ ದನಗಳನ್ನು ಉಳ್ಳಾಲದ ಕೆ.ಸಿ.ಎಂ.ಎ. ಗ್ರೌಂಡ್‌ನಲ್ಲಿ ಮಾರಾಟ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದಾರೆ.