ಫಸಲು ಬಿಟ್ಟಿರುವ ಗೇರು 
ಉಡುಪಿ

ಲಾಭದ ನಿರೀಕ್ಷೆಯಲ್ಲಿ ಗೇರು ಬೆಳೆಗಾರರು

ಅನಂತ್ನಾಯಕ್ ಮುದ್ದೂರು

ಕರಾವಳಿಯಲ್ಲಿಕಾಳುಮೆಣಸು,ಅಡಕೆಜತೆ ರೈತರಿಗೆ ವರದಾನವಾಗಿರುವುದುಗೇರು ಬೆಳೆ.ಈಬಾರಿ ಅಧಿಕ ಚಳಿ ವಾತವರಣವಿರುವಕಾರಣ ಗೇರು ಬೆಳೆ ಫಸಲು ಹೆಚ್ಚಳದನೀರಿಕ್ಷೆ ರೈತರಲ್ಲಿದೆ.ಗ್ರಾಮೀಣಭಾಗದಲ್ಲಿನ ಹೆಚ್ಚಿನ ಮರಗಳಲ್ಲಿಹೂವು ಕಾಣಿಸಿಕೊಂಡಿದ್ದು,ಇನ್ನೇನುಎಳೆ ಕಾಯಿ ಬಿಡುವ ಹಂತದಲ್ಲಿವೆ.

ಕಳೆದವರ್ಷ ಇದೇ ಅವಧಿಗೆ ಕೆಜಿಗೆ 105-110ರೂ.ಧಾರಣೆಇತ್ತು.ಆದರೆಪ್ರಸಕ್ತ ಅವಧಿಯಲ್ಲಿ ಕೆಜಿಗೆ115ರಿಂದ125ರೂ.ಏರಿಕೆಯಾಗುವಸಾಧ್ಯತೆ ಇದೆ.

ಸಾಮಾನ್ಯವಾಗಿಗೇರುಬೀಜ ಬೆಳೆ ಮೂರು ಹಂತದಲ್ಲಿರುತ್ತದೆ.ಜನವರಿಯಲ್ಲಿಪ್ರಥಮ,ವಾಚ್-ಏಪ್ರಿಲ್‌ನಲ್ಲಿದ್ವಿತೀಯ ಹಾಗೂ ಮೇ ಅಥವಾ ಮಳೆಗಾಲಕ್ಕೂಮುನ್ನ ಮೂರನೇ ಹಂತದ ಬೆಳೆ ಕೃಷಿಕರಕೈಗೆ ಸಿಗುತ್ತದೆ.ಕಳೆದವರ್ಷ ಗೇರು ಬೆಳೆಗೆ ಹುಳ ರೋಗಅಧಿಕವಾಗಿತ್ತು.ಈಬಾರಿ ಚಳಿ ಇರುವುದರಿಂದ ರೋಗಕಡಿಮೆಯಾಗಿ ಉತ್ತಮ ಫಸಲಿನ ನಿರೀಕ್ಷೆಮೂಡಿದೆ.

ಕರೋನಾ ನಂತರ ದಿನಗಳಲ್ಲಿ ಗೇರುಬೀಜದ ಮಾರುಕಟ್ಟೆ ಅಸ್ತವ್ಯಸ್ತಗೊಂಡಿದೆ. ಗೇರುಬೀಜ ಕರ್ನಲ್‌ಗಳಿಗೆ ಬೇಡಿಕೆ ಇಲ್ಲ. ಶೇ.60ರಷ್ಟು ಗೇರುಬೀಜ ಕಾರ್ಖಾನೆಗಳು ಮುಚ್ಚಲ್ಪಟ್ಟಿವೆ. ಕೆಲವೇ ವರ್ಷಗಳಲ್ಲಿ ದೊಡ್ಡ ದೊಡ್ಡ ಯಾಂತ್ರೀಕೃತ ಕಾರ್ಖಾನೆಗಳನ್ನು ಮಾತ್ರ ಕಾಣಬಹುದಾಗಿದ್ದು, ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ವಿಯೆಟ್ನಾಂನಿಂದ ಗೇರುಬೀಜ ಆಮದು ಆಗುತ್ತಿದ್ದು ಇಲ್ಲಿನ ಕಾರ್ಖಾನೆ ಮಾಲೀಕರಿಗೆ ಸೆಡ್ಡು ಹೊಡೆದಿದೆ.

ಮೋಡ ಇಲ್ಲದಿದ್ದರೆ ಉತ್ತಮ ಬೆಳೆ ಬರಬಹುದು. ಮುಂದಿನ 15 ದಿನಗಳ ನಂತರ ಬೆಳೆ ಮತ್ತು ದರವನ್ನು ನಿಗದಿ ಮಾಡಬಹುದು.