Theft 
ಉಡುಪಿ

ಅಂಗಡಿಗೆ ನುಗ್ಗಿ ನಗದು ಕಳವು

ಇಂದಿರಾ ಎನ್ ಕೆ
ಕುಂದಾಪುರ: ನಂದಿನಿ ಹಾಲಿನ ಅಂಗಡಿಯ ಮೇಲಿನ ಸೂರಿನ ಶೀಟನ್ನು ಒಡೆದು ನುಗ್ಗಿ ನಗದು ದೋಚಿದ ಟನೆ ವಡೇರಹೋಬಳಿ ಗ್ರಾಮದ ಬಸ್ರೂರು ಮೂರ್ಕೈ ಎಂಬಲ್ಲಿ ನಡೆದಿದೆ.
ವಡೇರಹೋಬಳಿ ಗ್ರಾಮದ ಸುರೇಂದ್ರ ಎಂಬುವರು ವಡೇರಹೋಬಳಿ ಗ್ರಾಮದ ಬಸ್ರೂರು ಮೂರ್ಕೈಯಲ್ಲಿ ನಂದಿನಿ ಹಾಲಿನ ಅಂಗಡಿ ಇಟ್ಟು ವ್ಯವಹಾರ ವಾಡಿಕೊಂಡಿದ್ದು, ಸೆ.6ರಂದು ರಾತ್ರಿ ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿದ್ದಾರೆ.
7ರಂದು ಬೆಳಗ್ಗೆ ಅಂಗಡಿ ತೆಗೆದು ಒಳಗೆ ಹೋಗಿ ನೋಡುವಾಗ ಅಂಗಡಿಯ ಸೂರಿನ ತಗಡು ಒಡೆದಿರುವುದು ಹಾಗೂ ಅಂಗಡಿಯ ಡ್ರಾವರ್‌ನಲ್ಲಿ ಇದ್ದ ಸುವಾರು 1.10 ಲಕ್ಷ ರೂ. ಹಣವನ್ನು ಕಳವು ವಾಡಿರುವುದು ಬೆಳಕಿಗೆ ಬಂದಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯ ಕಪಾಟಿನಲ್ಲಿದ್ದ ಚಿನ್ನಾಭರಣ ಕಳವು

ಕುಂದಾಪುರ: ಕರ್ಕುಂಜೆ ಗ್ರಾಮದಲ್ಲಿ ಮನೆಯ ಕಪಾಟಿನಲ್ಲಿ ಇಟ್ಟಿದ್ದ ಚಿನ್ನಾಭರಣಗಳನ್ನು ಕಳವಾಗಿದೆ. ಕರ್ಕುಂಜೆ ಗ್ರಾಮದ ಗಂಗಾಧರ ಮಂಜರು ಮನೆಯ ಬೆಡ್‌ರೂಮ್‌ನ ಕಪಾಟಿನ ಒಳಗೆ 4 ಗ್ರಾಂ ತೂಕದ ಚಿನ್ನದ ಹರಳಿನ ಉಂಗುರ, 4 ಗ್ರಾಂ ತೂಕದ ಚಿನ್ನದ ಹರಳಿನ ಉಂಗುರ, 8 ಗ್ರಾಂ ತೂಕದ ಚಿನ್ನದ ಬ್ರಾಸ್ ಲೇಟ್, ಲಕ್ಷ್ಮೀ ಪೆಂಡೆಂಟ್ ಇರುವ 40 ಗ್ರಾಂ ತೂಕದ ಚಿನ್ನದ ಚೈನನ್ನು ಇಟ್ಟಿದ್ದು ಕಪಾಟಿಗೆ ಬೀಗ ಹಾಕಿರಲಿಲ್ಲ. ಸೆ.6ರಂದು ರಾತ್ರಿ ಗೋದ್ರೇಜ್‌ನಲ್ಲಿ ಇಟ್ಟಿದ್ದ ಚಿನ್ನದ ಒಡವೆ ತೆಗೆಯಲು ಹೋದಾಗ ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿದೆ. ಕಳವಾದ ಚಿನ್ನಾಭರಣಗಳ ಮೌಲ್ಯ 8 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಕುಂದಾಪುರ ಗ್ರಾವಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ
ಕುಂದಾಪುರ: ಥೈರಾಯ್ಡ ಕಾಯಿಲೆಯಿಂದ ಬಳಲುತ್ತಿದ್ದ ದೇವಲ್ಕುಂದ ಗ್ರಾಮದ ಸಂಗೀತ(40) ಎಂಬುವರು ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆಗೈದಿದ್ದಾರೆ. ಥೈರಾಯ್ಡ ಕಾಯಿಲೆ ಚಿಕಿತ್ಸೆ ಪಡೆದರೂ ಗುಣಮುಖರಾಗದೆ ಜಿಗುಪ್ಸೆಗೊಂಡು ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಕುಂದಾಪುರ ಗ್ರಾವಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.