ಜಿಲ್ಲಾಡಳಿತದ ನಿಷೇಧಾಜ್ಞೆ ಉಲ್ಲಂಘಿಸಿ ಉಡುಪಿ ಕಂಬಳ ಕೆರೆ ನಿರ್ಮಾಣ ಶಂಕುಸ್ಥಾಪನೆಯ ಸಮಾರಂಭ ಉದ್ಘಾಟಿಸುತ್ತಿರುವ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸುನೀಲಕುಮಾರ್, ಯಶ್ಪಾಲ್ ಸುವರ್ಣ, ಗುರುರಾಜ್ ಗಂಟಿಹೊಳೆ, ಬೆಳಪು ದೇವಿಪ್ರಸಾದ್ ಶೆಟ್ಟಿ ಇತರರಿದ್ದರು.
* ಜಿಲ್ಲಾಧಿಕಾರಿಯ ನಿಷೇಧಾಜ್ಞೆ ಆದೇಶ ಉಲ್ಲಂಘನೆ
* ಉಡುಪಿ ಕಂಬಳ ಕೆರೆ ನಿರ್ಮಾಣಕ್ಕೆ ಶಂಕುಸ್ಥಾಪನೆ
ಉಡುಪಿ: ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರ ನಿಷೇಧಾಜ್ಞೆ ಉಲ್ಲಂಘಿಸಿ 80 ಬಡಗುಬೆಟ್ಟು ಗ್ರಾಮದಲ್ಲಿ ಉಡುಪಿ ಕಂಬಳದ ಕೆರೆ ನಿರ್ಮಾಣಕ್ಕೆ ಶನಿವಾರ (ಫೆ.28) ಶಂಕುಸ್ಥಾಪನೆ ನೆರವೇರಿಸಿದ ಪ್ರಮುಖ ಆರೋಪಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸೇರಿದಂತೆ ಪ್ರಮುಖ 37 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸೂಚನೆ ನೀಡಿದ್ದರೂ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿದ ಉಡುಪಿ&ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ವಿರುದ್ಧವೂ ಕೇಸ್ ದಾಖಲಾಗಿದೆ.
ಪ್ರಮುಖ ಆರೋಪಿಗಳು
ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕಾರ್ಕಳ ಶಾಸಕ ಸುನೀಲಕುಮಾರ್, ಕುಂದಾಪುರ ಶಾಸಕ ಕಿರಣಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಎಂಎಲ್ಸಿ ಡಾ. ಧನಂಜಯ್ ಸರ್ಜಿ, ಕಾಪು ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಮಟ್ಟಾರು ರತ್ನಾಕರ್ ಹೆಗ್ಡೆ, ಶಿಲ್ಪಾ ಸುವರ್ಣ ಕಾಪು, ಗೀತಾಂಜಲಿ ಸುವರ್ಣ ಕಟಪಾಡಿ, ನಂದಳಿಕೆ ಶ್ರೀಕಾಂತ್ ಭಟ್, 80 ಬಡಗಬೆಟ್ಟು ಗ್ರಾಮದ ಶುಭಕರ್ ಶೆಟ್ಟಿ, ಸಂದೀಪ್ ಶೆಟ್ಟಿ, ರವೀಂದ್ರ ನಾಯ್ಕ ಕುಕ್ಕುದಕಟ್ಟೆ, ಜಿಯಾನಂದ ಹೆಗ್ಡೆ ಬೈರಂಪಳ್ಳಿ, ವೀಣಾ ಶೆಟ್ಟಿ ಉಡುಪಿ, ಸಾಯೀಶ ಸುಧಾಕರ್ ಶೆಟ್ಟಿ ಪೆರ್ಡೂರು.
ರಾಜ್ಯ ಕಂಬಳ ಅಸೋಸಿಯೇಷನ್ನ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಶ್ರೀನಿಧಿ ಹೆಗ್ಡೆ ಉಡುಪಿ, ಹರಿಕೃಷ್ಣ ಬಂಟ್ವಾಳ, ರವೀಂದ್ರ ಮಡಿವಾಳ್ ಕಾರ್ಕಳ, ಅಂತೋನಿ ಡಿಸೋಜಾ ನಕ್ರೆ, ವಿಜಯಕುಮಾರ್ ಕಂಗಿನಮನೆ ಹೊಸ್ಮಾರ್, ಶ್ಯಾಮಲಾ ಕುಂದರ್ ಹಿರಿಯಡ್ಕ, ಲೋಕೇಶ್ ಶೆಟ್ಟಿ ಕಾರ್ಕಳ, ಮೋಹನ್ ಭಟ್ ಹಿರಿಯಡ್ಕ, ದಿಲ್ಲೇಶ್ ಶೆಟ್ಟಿ ಕುಕ್ಕೆಹಳ್ಳಿ, ಶಾಂತಾರಾಮ ಶೆಟ್ಟಿ ರಾಜೀವನಗರ, ಗೋಪಾಲಕೃಷ್ಣ ಮಟ್ಟು, ಸುಭಾಶ್ ಬಲ್ಲಾಳ್ ಕಟಪಾಡಿ, ಸ್ಥಳಿಯ ಕಾರ್ಯಕರ್ತ ಶಿವಪುನಾರ್ ಹಿರೇಬೆಟ್ಟು, ಮೋಹನ್ ಶೆಟ್ಟಿ ಕಬ್ಯಾಡಿ, ಕೃಷ್ಣ ಕುಲಾಲ್ ವರ್ವಾಡಿ. 38ನೇ ಸಂಖ್ಯೆಯಲ್ಲಿ ಇತರರು ಎಂದು ದೂರು ದಾಖಲಾಗಿದೆ.
ಉಡುಪಿ ತಹಶೀಲ್ದಾರ್ ಗುರುರಾಜ್ ಅವರ ದೂರಿನ ಆಧಾರದ ಮೇಲೆ ಸಿಆರ್ ಸಂಖ್ಯೆ 30/2026ರಲ್ಲಿ 80 ಬಡಗಬೆಟ್ಟು ಗ್ರಾಮದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿದ್ದರಿಂದ ಹಾಗೂ ಸ್ಥಳಕ್ಕೆ ಅತಿಕ್ರಮಣ ಪ್ರವೇಶ ಅಪರಾಧಕ್ಕಾಗಿ ಪ್ರಮುಖ 37 ಪರಿಚಿತ ವ್ಯಕ್ತಿಗಳು ಮತ್ತು ಇನ್ನಿತರ ಹಲವಾರು ಅಪರಿಚಿತ ವ್ಯಕ್ತಿಗಳ ವಿರುದ್ಧ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಸೆಕ್ಷನ್ 189(2), 191(2), 329(3), 190 ಬಿಎನ್ಎಸ್ ಮತ್ತು 37, 109 ಕೆಪಿ ಕಾಯಿದೆ ಅಳವಡಿಸಲಾಗಿದೆ.