ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಕಲಾಮಂದಿರದಲ್ಲಿ ಆಯೋಜಿಸಲಾದ ನಾಲ್ಕು ದಿನಗಳ ಖಾಕಿಗೊಂದು ಕಾರ್ಟೂನ್ ಸೆಲ್ಯೂಟ್ ‘ಖಾಕಿ ಕಾರ್ಟೂನು ಹಬ್ಬ’ದಲ್ಲಿ ಸಾಧಕ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯನ್ನು ಗೌರವಿಸಲಾಯಿತು.
ಕುಂದಾಪುರ: ಕಲಾವಿದರು ಮತ್ತು ಕಲಾಕಾರರು ಸವಾಜದ ಎಲ್ಲ ಏರುಪೇರುಗಳನ್ನು ಬೇರೆ ಬೇರೆ ರೀತಿಯಲ್ಲಿ ಪ್ರದರ್ಶಿಸುತ್ತಾರೆ. ಕಾರ್ಟೂನಿಸ್ಟ್‌ಗಳ ದೃಷ್ಟಿಕೋನ ಭಿನ್ನವಾಗಿರುತ್ತದೆ. ಸವಾಜವನ್ನು ಬಹಳ ಹತ್ತಿರದಿಂದ ನೋಡುವ ಕಾರ್ಟೂನಿಸ್ಟ್‌ಗಳು ತಮ್ಮ ಕಾರ್ಟೂನ್‌ಗಳಲ್ಲಿ ವಿಡಂಬನೆ, ಹಾಸ್ಯದೊಂದಿಗೆ ಸಂದೇಶವನ್ನು ಸವಾಜಕ್ಕೆ ನೀಡಬೇಕಾಗುತ್ತದೆ. ಕೆಲವೊಂದು ಸಂದರ್ಭದಲ್ಲಿ ಕಾರ್ಟೂನ್‌ಗಳ ಮೂಲಕ ನೀಡುವ ಕಠಿಣ ಸಂದೇಶ ಟೀಕೆಗೆ ಒಳಗಾಗುತ್ತವೆ ಎಂದು ರಾಜ್ಯ ಕಾರಾಗೃಹ ಮತ್ತು ಸುಧಾರಣೆ ಎಡಿಜಿಪಿ ಬಿ.ದಯಾನಂದ ಹೇಳಿದರು.
ಕಾರ್ಟೂನ್ ಕುಂದಾಪ್ರ ಆಶ್ರಯದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಸಹಭಾಗಿತ್ವದೊಂದಿಗೆ ಕುಂದಾಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಲಾಮಂದಿರದಲ್ಲಿ ಆಯೋಜಿಸಲಾದ ನಾಲ್ಕು ದಿನಗಳ ಖಾಕಿಗೊಂದು ಕಾರ್ಟೂನ್ ಸೆಲ್ಯೂಟ್ ‘ಖಾಕಿ ಕಾರ್ಟೂನು ಹಬ್ಬ’ ಉದ್ಘಾಟಿಸಿ ವಾತನಾಡಿದರು.
ಎಸ್‌ಪಿ ಹರಿರಾಂ ಶಂಕರ್ ಮಾತನಾಡಿ, ಸರ್ಕಾರದ ಸಮಸ್ಯೆಗಳನ್ನು, ಆಗುಹೋಗುಗಳನ್ನು ಸವಾಜದ ಮುಂದಿಡುವ ಜವಾಬ್ದಾರಿ ಕಾರ್ಟೂನಿಸ್ಟ್‌ಗಳಿಗಿದೆ. ಕಾರ್ಟೂನ್ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಟೀಕೆ ಟಿಪ್ಪಣಿ ವಾಡುವ ಜನರೂ ಇದ್ದಾರೆ ಎಂದರು.
ಹಿರಿಯ ವಕೀಲ ಎ.ಎಸ್.ಎನ್.ಹೆಬ್ಬಾರ್ ವಾತನಾಡಿದರು. ನಿವೃತ್ತ ಡೆಪ್ಯೂಟಿ ಪೊಲೀಸ್ ಕಮೀಷನರ್‌ಗಳಾದ ಜಿ.ಎ.ಬಾವ ಮತ್ತು ವಿನಯ ಗಾಂವ್ಕರ್, ಪತ್ರಕರ್ತ ರಾಜೇಶ ಕೆ.ಸಿ. ಮಾತನಾಡಿದರು.
ಕಾರ್ಟೂನ್ ಕುಂದಾಪ್ರದ ಸತೀಶ್ ಆಚಾರ್ಯ, ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪ್ತಿಯ ವಿವಿಧ ಠಾಣೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ರೋಹಿಣಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಸನ್ಮಾನ
ಸಾಧನೆಗೈದ ಕಾರ್ಕಳ ಗ್ರಾವಾಂತರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪ್ರಸನ್ನ, ಡಿಸಿಆರ್‌ಬಿ ಎಎಸ್‌ಐ ಪ್ರಕಾಶ್, ಸಶಸ್ತ್ರ ಮೀಸಲು ಸಬ್ ಇನ್ಸ್‌ಪೆಕ್ಟರ್ ಜೋಸ್, ಸಶಸ್ತ್ರ ಹೆಡ್ ಕಾನ್‌ಸ್ಟೆಬಲ್ ವಿಜಯ ಮೊಗವೀರ ಮತ್ತು ಸಿವಿಲ್ ಹೆಡ್ ಕಾನ್‌ಸ್ಟೆಬಲ್ ಶಿವಾನಂದ ಬಿ. ಅವರನ್ನು ಸನ್ಮಾನಿಸಲಾಯಿತು.