ಅಫಘಾತದಲ್ಲಿ ವಾಹನ ನಜ್ಜುಗುಜ್ಜಾಗಿದೆ. 
ಉಡುಪಿ

ಲಾರಿಗೆ ಕಾರುಗಳು ಡಿಕ್ಕಿ, ಮೂವರಿಗೆ ಗಾಯ

ಇಂದಿರಾ ಎನ್ ಕೆ
ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ಯಪ್ಪಾಡಿ ತಿರುವಿನಲ್ಲಿ ಅತಿಯಾದ ವೇಗದಿಂದ ಸಂಚರಿಸಿದ ಎರಡು ಕಾರುಗಳು ಲಾರಿಯ ಡೀಸೆಲ್ ಟ್ಯಾಂಕ್‌ಗೆ ಡಿಕ್ಕಿಯಾಗಿದ್ದು, ಲಾರಿ ಚಾಲಕ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಭಾನುವಾರ ನಸುಕಿನ 1.45ರ ವೇಳೆಗೆ ಲಾರಿ ಚಾಲಕ ಜಬ್ಬಾರ್, ಕಾರು ಚಲಾಯಿಸುತ್ತಿದ್ದ ಅಫ್ಸಲ್ ಹಾಗೂ ಅಜ್ಸಲ್ ಗಾಯಾಳುಗಳು. ಗಾಯಾಳುಗಳನ್ನು ಚೆಂಗಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಿಕ್ಕಿಯ ಆಘಾತಕ್ಕೆ ಲಾರಿಯ ಇಂಧನ ಟ್ಯಾಂಕ್ ಹಾಗೂ ತೈಲದ ಟ್ಯಾಂಕ್ ಹಾನಿಗೀಡಾಗಿದ್ದು,ರಸ್ತೆಯಲ್ಲಿ ತೈಲ ಮತ್ತು ಡೀಸೆಲ್ ಹರಡಿಕೊಂಡಿತ್ತು. ನಜ್ಜುಗುಜ್ಜಾಗಿದ್ದ ಕಾರುಗಳನ್ನು ರಸ್ತೆ ಅಂಚಿಗೆ ಸರಿಸಲಾಗಿದೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ರಸ್ತೆಗೆ ಚೆಲ್ಲಿದ್ದ ತೈಲ ಮತ್ತು ಡೀಸೆಲನ್ನು ನೀರು ಬಳಸಿ ಸ್ವಚ್ಛಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.