ಉಡುಪಿ ಶಿರೂರು ಮಠದ ಪರ್ಯಾಯಕ್ಕೆ ನೀಡಿದ ಹೊರೆಕಾಣಿಕೆಯ ಮೆರವಣಿಗೆಗೆ ಸಂಜೀವಕುಮಾರ್ ಚಾಲನೆ ನೀಡಿದರು. ಸುಪ್ರಸಾದ್ ಶೆಟ್ಟಿ ಬೈಕಾಡಿ, ಗಂಗಾಧರ್, ಮೇಘಾ ಶೆಟ್ಟಿ, ಮಹಾಮಾಯಾ ಪ್ರಸಾದ್ ರಾಯ್, ಪಬಿತ್ರಕುಮಾರ್ ದಾಸ್, ಡಾ. ಉದಯಕುಮಾರ್ ಸರಳತ್ತಾಯ, ಹರಿ ಕೋಟ್ಯಾನ್, ವಿಷ್ಣುಪ್ರಸಾದ್ ಪಾಡಿಗಾರ್ ಇತರರಿದ್ದರು.
* ಕೆನರಾ ಬ್ಯಾಂಕ್ನ ಎಜಿಎಂ ಸಂಜೀವಕುಮಾರ್ ಅನಿಸಿಕೆ
* ಶೀರೂರು ಮಠದ ಪರ್ಯಾಯಕ್ಕೆ ಹಸಿರು ಹೊರೆಕಾಣಿಕೆ
ಉಡುಪಿ: ಬ್ಯಾಂಕ್ಗಳು ಕೇವಲ ಸಾಲ ನೀಡಲು ಅಥವಾ ಗ್ರಾಹಕರ ಠೇವಣಿ ಇಟ್ಟುಕೊಂಡು ಬಡ್ಡಿ ನೀಡಲು ಮಾತ್ರ ಸೀಮಿತವಾಗಿಲ್ಲ. ವಿವಿಧ ಬ್ಯಾಂಕಿಂಗ್ ಸೌಲಭ್ಯದೊಂದಿಗೆ ಸಾಮಾಜಿಕ ಸೇವೆ, ಅಭಿವೃದ್ಧಿಗೆ ಸಹಕಾರ ನೀಡುವುದೂ ಸಹ ನಮ್ಮ ಬದ್ಧತೆಯಾಗಿದೆ. ಉಡುಪಿಯ ಪರ್ಯಾಯವೂ ಸಹ ಶ್ರೀಕೃಷ್ಣನ ಪೂಜಾರಾಧನೆಯೊಂದಿಗೆ ಭಕ್ತರಿಗೆ ಪ್ರಸಾದ ಭೋಜನ ನೀಡುವ ಮಹಾಭಿಯಾನವಾಗಿದೆ. ಹೀಗಾಗಿ ಕೆನರಾ ಬ್ಯಾಂಕ್ ವತಿಯಿಂದ ಶೀರೂರು ಪರ್ಯಾಯಕ್ಕೆ ಹಸಿರು ಹೊರೆಕಾಣಿಕೆ ನೀಡಲಾಗುತ್ತಿದೆ ಎಂದು ಕೆನರಾ ಬ್ಯಾಂಕ್ನ ಎಜಿಎಂ ಸಂಜೀವಕುಮಾರ್ ತಿಳಿಸಿದರು.
ಉಡುಪಿಯ ಜೋಡುಕಟ್ಟೆಯ ಪೂರ್ಣಪ್ರಜ್ಞ ಮಂಟಪದ ಬಳಿ ಕೆನರಾ ಬ್ಯಾಂಕ್ ಹಾಗೂ ವಿವಿಧ ಸಂಘಟನೆಗಳಿಂದ ಶೀರೂರು ಪರ್ಯಾಯಕ್ಕೆ ನೀಡಲ್ಪಟ್ಟ ಹಸಿರು ಹೊರೆಕಾಣಿಕೆ ಸಮರ್ಪಣೆಯ ಮೆರವಣಿಗೆಗೆ ಸೋಮವಾರ (ಜ.12) ಚಾಲನೆ ನೀಡಿ ಮಾತನಾಡಿದರು.
ಶೀರೂರು ಪರ್ಯಾಯ ಹೊರೆಕಾಣಿಕೆ ಸಮಿತಿಯ ಸಂಚಾಲಕ ಸುಪ್ರಸಾದ್ ಶೆಟ್ಟಿ ಬೈಕಾಡಿ ಮಾತನಾಡಿ, ಶಿರೂರು ಪರ್ಯಾಯಕ್ಕೆ ಹೊರೆಕಾಣಿಕೆ ಸಲ್ಲಿಸುತ್ತಿರುವ ಕೆನರಾ ಬ್ಯಾಂಕ್. ಮೀನುಗಾರರ ಸಂಘ ಹಾಗೂ ವಿವಿಧ ಸಂಘಟನೆಗಳಿಗೆ ಕೃತಜ್ಞತೆ ಸಲ್ಲಿಸಿದರು.
ಮಲ್ಪೆ ಮೀನುಗಾರರ ಸಂ ಮತ್ತು ವಿವಿಧ ಮೀನುಗಾರರ ಸಂಟನೆ, ತುಳುನಾಡು ರಕ್ಷಣಾ ವೇದಿಕೆ, ಆರ್ಎಸ್ಬಿ ಸಮಾಜ ಹಾಗೂ ಪದ್ಮಶಾಲಿ ಸಮಾಜದ ವತಿಯಿಂದಲೂ ಸಹ ಶೀರೂರು ಪರ್ಯಾಯಕ್ಕೆ ಹಸಿರು ಹೊರೆಕಾಣಿಕೆ ಸಲ್ಲಿಸಲಾಯಿತು. ವಾದ್ಯ ಹಾಗೂ ಬ್ಯಾಂಡ್ ಸೆಟ್, ಕುಣಿತ ಭಜನೆಯೊಂದಿಗೆ ನೂರಾರು ವಾಹನಗಳಲ್ಲಿ ಸುವಸ್ತುಗಳನ್ನು ಮೆರವಣಿಗೆ ಮೂಲಕ 'ಅನ್ನ ವಿಠ್ಠಲ' ಉಗ್ರಾಣಕ್ಕೆ ಸಾಗಿಸಲಾಯಿತು.
ಕೆನರಾ ಬ್ಯಾಂಕ್ನ ಚೀಫ್ ಮೆನೇಜರ್ ಗಂಗಾಧರ್, ಡಿಜಿಎಂ ಪಬಿತ್ರಕುಮಾರ್ ದಾಸ್, ಸೀನಿಯರ್ ಮೆನೇಜರ್ ಮೇಘಾ ಶೆಟ್ಟಿ, ಮಹಾಮಾಯಾ ಪ್ರಸಾದ್ ರಾಯ್, ತುಳುನಾಡು ರಕ್ಷಣಾ ವೇದಿಕೆಯ ಜಯರಾಂ ಪೂಜಾರಿ, ಸುರೇಂದ್ರ ಪೂಜಾರಿ, ಫ್ರಾಂಕ್ಲಿ ಡಿಸೋಜಾ, ಪದ್ಮಶಾಲಿ ಸಮಾಜದ ರವಿ ಶೆಟ್ಟಿಗಾರ್, ಮೀನುಗಾರ ಮುಖಂಡ ಹರಿ ಕೋಟ್ಯಾನ್, ಶೀರೂರು ಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ, ಪರ್ಯಾಯ ಸ್ವಾಗತ ಸಮಿತಿಯ ಮೋಹನ್ ಭಟ್, ನಂದನ್ ಜೈನ್, ವಿಷ್ಣುಪ್ರಸಾದ್ ಪಾಡಿಗಾರ್, ಸಂದೀಪ್ ಮಂಜ ಇತರರಿದ್ದರು.