ಕಾಸರಗೋಡು: ಕುಂಬ್ಡಾಜೆಯ ಮಾರ್ಪನಡ್ಕ ಹೌಸ್‌ನ ಮುಹಮ್ಮದ್ ಅಜೀಫ್(22) ನಾಪತ್ತೆಯಾಗಿರುವ ಬಗ್ಗೆ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆ.15ರಂದು ಬೆಳಗ್ಗೆ 11ಕ್ಕೆ ಮನೆಯಿಂದ ಹೊರಟವರು ನಂತರ ಹಿಂತಿರುಗಿಲ್ಲ ಎಂದು ಅವರ ತಾಯಿ ಸುಬೈದಾ ಬದಿಯಡ್ಕ ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮಹಮ್ಮದ್ ಅಜೀಫ್ ಈ ಹಿಂದೆ ನಾಯಮರ್‌ಮೂಲೆಯಲ್ಲಿ ಅಂಗಡಿ ನಡೆಸುತ್ತಿದ್ದು ಭಾರಿ ಸಾಲ ಹೊಂದಿದ್ದರು ಎನ್ನಲಾಗಿದೆ.