ವಿಜಯ್ ಕುಮಾರ್, ರಮೇಶ್, ಹರೀಶ್ ಬಿ.ಹೆಗ್ಡೆ, ಅಭಿಷೇಕ್ 
ಉಡುಪಿ

ಬಸ್ ಟೈಮಿಂಗ್ ವಿಚಾರಕ್ಕೆ ಗಲಾಟೆ

ಇಂದಿರಾ ಎನ್ ಕೆ
ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಕಾಪು ಶ್ರೀ ಹೊಸ ಮಾರಿಗುಡಿಯ ಅಂಡರ್ ಪಾಸ್ ಬಳಿ ಸೋಮವಾರ ಬೆಳಗ್ಗೆ ಟೈಮಿಂಗ್ ವಿಚಾರಕ್ಕೆ ಎರಡು ಖಾಸಗಿ ಬಸ್‌ಗಳ ಚಾಲಕರು ಹಾಗೂ ನಿರ್ವಾಹಕರ ನಡುವೆ ಗಲಾಟೆ ನಡೆದಿದೆ.

ಟೈಮಿಂಗ್ಸ್ ವಿಚಾರದಲ್ಲಿ ಉದ್ಯಾವರದಿಂದಲೇ ಆರೋಪ ಪ್ರತ್ಯಾರೋಪಗಳು ಕಂಡುಬಂದಿದ್ದು, ಕಾಪು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ, ಹತ್ತಿಸಲು ನಿಲ್ಲಿಸಿದ್ದ ವೇಳೆ ಆಕ್ರೋಶ ಸ್ಫೋಟಗೊಂಡಿದೆ. ಪರಸ್ಪರ ಬಸ್‌ಗಳನ್ನು ಡಿಕ್ಕಿ ಹೊಡೆದು ಕೈಕೈ ಮಿಲಾಯಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿ ಭಂಗವುಂಟು ಮಾಡಿದ್ದಾರೆ.
ಚಾಲಕರ ರಂಪಾಟದಿಮದ ಕಾಪು ಸರ್ವೀಸ್ ರಸ್ತೆಯಲ್ಲಿ ಹದಿನೈದು ನಿಮಿಷಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಸಾರ್ವಜನಿಕರು ಮತ್ತು ರಿಕ್ಷಾ ಚಾಲಕರು ಎಷ್ಟು ಮನವೊಲಿಸಿದರೂ ಸ್ಥಳದಿಂದ ತೆರಳಲು ಹಿಂಜರಿದ ಬಸ್ ಚಾಲಕರು ಬಸ್‌ಗಳನ್ನು ಅಡ್ಡ ಇಟ್ಟು ಇತರ ವಾಹನಗಳ ಸಂಚಾರಕ್ಕೂ ತೊಂದರೆ ಉಂಟು ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಎರಡು ಬಸ್‌ಗಳ ಚಾಲಕರಾದ ರಮೇಶ್, ಅಭಿಷೇಕ್, ನಿರ್ವಾಹಕರಾದ ವಿಜಯ ಕುಮಾರ್, ಹರೀಶ್ ಬಿ.ಹೆಗ್ಡೆ ಅವರನ್ನು ಬಸ್ ಸಹಿತ ಕಾಪು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.