ರೈಲ್ವೇ ಗೇಟ್ ಸಮೀಪ ಕೆಸರುಗದ್ದೆಯಂತಾಗಿರುವುದು.  
ಉಡುಪಿ

ಬಸ್, ರಿಕ್ಷಾ ನಿಲ್ದಾಣದಲ್ಲಿ ತುಂಬಿದ ಕೆಸರು

ಇಂದಿರಾ ಎನ್ ಕೆ
ಮಂಜೇಶ್ವರ: ಹೊಸಂಗಡಿ ಪೇಟೆಯ ಸರ್ವೀಸ್ ರಸ್ತೆ ಸಮೀಪ ರೈಲ್ವೇ ಗೇಟ್ ಬಳಿ ಬಸ್ ತಂಗುದಾಣ ಹಾಗೂ ರಿಕ್ಷಾ ನಿಲ್ದಾಣದಲ್ಲಿ ಕೆಸರು ತುಂಬಿ ಸಾರ್ವಜನಿಕರು ಸಮಸ್ಯೆಗೀಡಾಗಿದ್ದಾರೆ. ಈ ಪರಿಸರದಲ್ಲಿ ಬೇಸಿಗೆಯಲ್ಲಿ ಪಂಚಾಯಿತಿಯಿಂದ ಮಣ್ಣು ಹಾಕಿ ಸಮತಟ್ಟುಗೊಳಿಸಲಾಗಿತ್ತು.
ಈಗ ಮಳೆಗೆ ಈ ಪರಿಸರ ಪೂರ್ತಿ ಕೆಸರಿನಿಂದ ಆವೃತ್ತಗೊಂಡು ಸಮಸ್ಯೆ ಉಂಟಾಗಿದೆ. ನಡೆದಾಡುವ ವೇಳೆ ಚಪ್ಪಲಿ ಹೂತು ಹೋಗುವುದು, ಜಾರಿ ಬೀಳುವುದು, ಬಟ್ಟೆಯಲ್ಲಿ ಕೆಸರು ಮೆತ್ತಿರುವ ಟನೆಗಳು ನಡೆಯುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ರೈಲ್ವೆ ಗೇಟ್ ಒಳ ಪ್ರವೇಶಿಸುವ ಬಸ್‌ಗಾಗಿ ಕಾಯುವವರು ಕೆಸರಿನಲ್ಲಿ ನಿಲ್ಲುವಂತ ಅವಸ್ಥೆ ಉಂಟಾಗಿದೆ. ಸ್ಥಳೀಯಾಡಳಿತ ಈ ಪರಿಸರದಲ್ಲಿ ಜಲ್ಲಿ ಹುಡಿ ಹಾಕಿ ಕೆಸರಿನಿಂದ ಮುಕ್ತಿಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.