ಎಕ್ಕಾರಿನಲ್ಲಿ ಖಾಸಗಿ ಬಸ್‌ಗೆ ಬುಲೆಟ್ ಡಿಕ್ಕಿ.
ಕಿನ್ನಿಗೋಳಿ: ಖಾಸಗಿ ಬಸ್‌ಗೆ ಬುಲೆಟ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ಎಕ್ಕಾರಿನಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಮೃತಪಟ್ಟವರನ್ನು ಬಶೀರ್(55) ಎಂದು ಗುರುತಿಸಲಾಗಿದೆ.
ಕಿನ್ನಿಗೋಳಿಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ರಾಜ್ ಕುಮಾರ್ ಬಸ್‌ಗೆ ಬಜಪೆ ಕಡೆಯಿಯಿಂದ ಕಿನ್ನಿಗೋಳಿಗೆ ಸಂಚರಿಸುತ್ತಿದ್ದ ಬುಲೆಟ್ ಎಕ್ಕಾರಿನಲ್ಲಿ ಡಿಕ್ಕಿ ಹೊಡೆದಿದ್ದು, ಬುಲೆಟ್ ಸವಾರ ಬಶೀರ್ ಮೃತಪಟ್ಟಿದ್ದಾರೆ. ಹಿಂಬದಿ ಸವಾರರಾಗಿದ್ದ ಪತ್ನಿ ಗಂಭೀರ ಗಾಯಗೊಂಡಿದ್ದು ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಜ್ಪೆ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.