ಅಚ್ಲಾಡಿ ಮೂಡುಕೆರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಯೂನಿಫಾರ್ಮ್‌ಗಳನ್ನು ಕೊಡುಗೆಯಾಗಿ ವಿತರಿಸಲಾಯಿತು. ಪ್ರಮುಖರಾದ ಸುಧಾಕರ್ ಶೆಟ್ಟಿ, ಸುರೇಶ್ ಬೇಳೂರು, ಉದಯ್ ಹೆಗ್ಡೆ, ವೆಂಕಟೇಶ್ ಆಚಾರ್ಯ ಮತ್ತಿತರರಿದ್ದರು.
ಕೋಟ: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವುದು ಸವಾಜದ ಪ್ರತಿಯೊಬ್ಬರ ಜವಾಬ್ದಾರಿ. ಶಿಕ್ಷಣ ಕ್ಷೇತ್ರಕ್ಕೆ ನೆರವು ನೀಡುವ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವುದು ಮಹತ್ವದ ಸೇವೆಯಾಗಿದ್ದು, ರೋಟರಿ ಕ್ಲಬ್ ಕೋಟ ಬ್ರಿಗೇಡ್ ಈ ನಿಟ್ಟಿನಲ್ಲಿ ವಾಡುತ್ತಿರುವ ಸೇವಾ ಕಾರ್ಯ ಶ್ಲಾಘನೀಯ ಎಂದು ರೋಟರಿ ವಲಯ 2ರ ಅಸಿಸ್ಟೆಂಟ್ ಗವರ್ನರ್ ಸುಧಾಕರ್ ಶೆಟ್ಟಿ ಹೇಳಿದರು.
ಅಚ್ಲಾಡಿ ಮೂಡುಕೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಕೋಟ ಬ್ರಿಗೇಡ್ ರೋಟರಿ ಕ್ಲಬ್ ಕೊಡುಗೆಯಾಗಿ ನೀಡಿದ ಯೂನಿಫಾರ್ಮ್‌ಗಳನ್ನು ವಿತರಿಸಿ ಮಾತನಾಡಿದರು.
ದಾನಿಗಳಾದ ದಯಾನಂದ ಆಚಾರ್ಯ ಹಾಗೂ ಸುರೇಶ್ ಆಚಾರ್ಯ ನೀಡಿದ ಯೂನಿಫಾರ್ಮ್‌ಗಳನ್ನು ಕೋಟ ಬ್ರಿಗೇಡ್ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪೂಜಾರಿ ಬನ್ನಾಡಿ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ವಲಯ 2ರ ಲರ್ನಿಂಗ್ ಫೇಸಿಲೇಟರ್ ಸುರೇಶ್ ಬೇಳೂರು, ವಾಜಿ ಸಹಾಯಕ ಗವರ್ನರ್ ಚಂದ್ರಶೇಖರ್ ಮೆಂಡನ್, ಪ್ರಮುಖರಾದ ಉದಯ್ ಹೆಗ್ಡೆ, ವೆಂಕಟೇಶ್ ಆಚಾರ್ಯ, ಪ್ರಕಾಶ್ ಹಂದಟ್ಟು, ಪ್ರಥ್ವಿನ್ ಸಿ.ಮೆಂಡನ್, ಚಂದ್ರಶೇಖರ ದೇವಾಡಿಗ, ಜಯಕರ ಹೆಗ್ಡೆ, ಭಾಸ್ಕರ್ ಶೆಟ್ಟಿ, ರಾಜೇಶ್ ಗಾಣಿಗ ಅಚ್ಲಾಡಿ, ಸಂಧ್ಯಾ ಪ್ರಕಾಶ್, ರಜನಿ ಶೆಟ್ಟಿ ಉಪಸ್ಥಿತರಿದ್ದರು.