ಬಿರುಸಿನ ಮಳೆಗೆ ಕೂಡ್ಲು ರಾಮದಾಸನಗರದಲ್ಲಿನ ಗೋಪಾಲಕೃಷ್ಣ ಆಟೋವರ್ಕ್ಸ್ ಕಟ್ಟಡ ಕುಸಿದಿರುವುದು.
ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿದಿದ್ದು, ವಿವಿಧೆಡೆ ಕಡಲ್ಕೊರೆತದಿಂದ ಅಪಾರ ಹಾನಿ ಸಂಭವಿಸಿದೆ. ಸಮುದ್ರತೀರದಲ್ಲಿ ಅಪಾಯದಲ್ಲಿರುವ ನಿವಾಸಿಗಳ್ನನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗುತ್ತಿದೆ. ಕಡಲ್ಕೊರೆತ ಪ್ರದೇಶಗಳಾದ ಕುಂಬಳೆ, ಉಪ್ಪಳ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಭೇಟಿ ನೀಡಿದರು.
ಕಾಸರಗೋಡು ಕೂಡ್ಲು ರಾಮದಾಸನಗರದಲ್ಲಿನ ಗೋಪಾಲಕೃಷ್ಣ ಆಟೋವರ್ಕ್ಸ್ ಕಟ್ಟಡ ಕುಸಿದು ಬಿದ್ದಿದ್ದು, ಅಪಾರ ಹಾನಿ ಸಂಭವಿಸಿದೆ. ಸೋಮವಾರ ಸುರಿದ ಗಾಳಿ ಮಳೆಗೆ ಕಟ್ಟಡ ಧರಾಶಾಯಿಯಾಗಿದೆ. ಕಟ್ಟಡದೊಳಗಿನ ಯಂತ್ರಗಳು ಹಾನಿಗೀಡಾಗಿವೆ ಎಂದು ಗ್ಯಾರೇಜ್ ವಾಲಿಕ ಅಶ್ವಥ್ ಕುಮಾರ್ ತಿಳಿಸಿದ್ದಾರೆ.