ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜಸೇವಕ ಮಾವಿನಕಟ್ಟೆ ಶಂಕರ ಶೆಟ್ಟಿ ಪಂಚವಟಿ ಮುನಿಯಾಲು ಅವರನ್ನು ಸನ್ಮಾನಿಸಲಾಯಿತು. ಕಡ್ತಲ ಗ್ರಾಪಂ ಅಧ್ಯಕ್ಷ ಸುಕೇಶ ಹೆಗ್ಡೆ, ಅಜೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ನಿರ್ದೇಶಕ ಸತೀಶ ಪೂಜಾರಿ ಮುಳ್ಕಾಡು ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಹೆಬ್ರಿ
ಯುವಕರು ನಿಸ್ವಾರ್ಥವಾಗಿ ಸಮಾಜಮುಖಿ ಸೇವೆ ಮಾಡುತ್ತಾ ಬಂದಾಗ ಸದೃಢ ಸಮಾಜ ನಿರ್ಮಾಣವಾಗುತ್ತದೆ. ಆರೋಗ್ಯ ಸೇವೆಯ ಜೊತೆ ಜನಸೇವೆಗೆ ಕುಕ್ಕುದಕಟ್ಟೆ ಜನನಿ ್ರೆಂಡ್ಸ್ ಮಾದರಿಯಾಗಿದೆ. ಯುವ ಮನಸ್ಸು ಒಂದಾಗಾಗ ಸಮಾಜದಲ್ಲಿ ಪರಿವರ್ತನೆ ಸಾಧ್ಯ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದರು.
ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಕ್ಕುದಕಟ್ಟೆ ಜನನಿ ್ರೆಂಡ್ಸ್ ವತಿಯಿಂದ ಮಣಿಪಾಲ ಕೆಎಂಸಿ ಆಸ್ಪತ್ರೆ ತಜ್ಞ ವೈದ್ಯರಿಂದ ನಡೆದ ಆರೋಗ್ಯ ತಪಾಸಣೆ ಉಚಿತ ಶಿಬಿರದಲ್ಲಿ ಮಾತನಾಡಿದರು.
ಕುಕ್ಕುದಕಟ್ಟೆ ಜನನಿ ್ರೆಂಡ್ಸ್ ಅಧ್ಯಕ್ಷ ಚೇತನ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವರಂಗ ಗ್ರಾಪಂ ಅಧ್ಯಕ್ಷ ಸಂತೋಷ ಅಮೀನ್ ಶಿಬಿರ ಉದ್ಘಾಟಿಸಿದರು. ಕುಕ್ಕುದಕಟ್ಟೆ ಜನನಿ ್ರೆಂಡ್ಸ್ ಗೌರವ ಸಲಹೆಗಾರ, ಪ್ರಸ್ತುತ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜಸೇವಕ ಮಾವಿನಕಟ್ಟೆ ಶಂಕರ ಶೆಟ್ಟಿ ಪಂಚವಟಿ ಮುನಿಯಾಲು ಅವರನ್ನು ಸನ್ಮಾನಿಸಲಾಯಿತು.
ಹೃದಯ ತಪಾಸಣೆ, ಸ್ತನ, ಗರ್ಭಕೋಶ ತಪಾಸಣೆ, ಸಿಪಿಆರ್ ತರಬೇತಿ, ಮಧುಮೇಹ, ಸಾಮಾನ್ಯ ಪರೀಕ್ಷೆಗಳು ನಡೆಯಿತು. ನೂರಾರು ಮಂದಿ ಶಿಬಿರದ ಪ್ರಯೋಜನ ಪಡೆದಕೊಂಡರು. ಕುಕ್ಕುದಕಟ್ಟೆ ಜನನಿ ್ರೆಂಡ್ಸ್ ನೂತನ ಲೋಗೋ ಬಿಡುಗಡೆಗೊಳಿಸಲಾಯಿತು. ಸ್ವಾತಂತ್ರೃ ಹೋರಾಟಗಾರ ಪಡುಕುಡೂರು ಬೀಡು ಎಂಡಿ ಅಧಿಕಾರಿ ಅವರ ಪುತ್ಥಳಿಗೆ ನಿವೃತ್ತ ಪೋಸ್ಟ್ ಮಾಸ್ಟರ್ ಎಳ್ಳಾರೆ ಕೆಂಜರಜಡ್ಡು ವಿಶ್ವನಾಥ ನಾಯಕ್ ಮಾಲಾರ್ಪಣೆ ಮಾಡಿದರು.
ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮಾತನಾಡಿದರು. ಕಡ್ತಲ ಗ್ರಾಪಂ ಅಧ್ಯಕ್ಷ ಸುಕೇಶ ಹೆಗ್ಡೆ, ಅಜೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ನಿರ್ದೇಶಕ ಸತೀಶ ಪೂಜಾರಿ ಮುಳ್ಕಾಡು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುದ್ರಾಡಿ ವಲಯದ ಮೇಲ್ವಿಚಾರಕಿ ಸುಮಲತಾ, ಮುನಿಯಾಲು ಪ್ರಾಥಮಿಕ ಆರೋಗ್ಯ ಕೇಂದ್ರ ಮುಖ್ಯಸ್ಥೆ ಡಾ.ಸೌಮ್ಯ, ಮಣಿಪಾಲ ಕೆಎಂಸಿ ತಜ್ಞ ವೈದ್ಯರಾದ ಡಾ.ವೃಂದಾಲತ್, ಡಾ.ವಿಧಿ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮಂಗಳೂರಿನ ಸ್ವಾತಿ ಮೊದಲಾದವರು ಭಾಗವಹಿಸಿದ್ದರು.
ಮುನಿಯಾಲು ಕೆಪಿಎಸ್ ಶಿಕ್ಷಕ ಮಾತಿಬೆಟ್ಟು ಪ್ರಕಾಶ ಪೂಜಾರಿ ನಿರೂಪಿಸಿದರು. ಕುಕ್ಕುದಕಟ್ಟೆ ಜನನಿ ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಸನ್ನ ಶೆಟ್ಟಿ ವಂದಿಸಿದರು.