ಎಸ್‌ಡಿಎಂ ಕಾಲೇಜಿನಲ್ಲಿ ರಾಜ್ಯಮಟ್ಟದ ಕಾರ್ಯಾಗಾರವನ್ನು ಬೆಂಗಳೂರಿನ ಅರ್ಥಶಾಸ್ತ್ರಜ್ಞ ಎಸ್.ವಿಶ್ವನಾಥ ಭಟ್ ಉದ್ಘಾಟಿಸಿದರು. ಡಾ.ಸತೀಶ್ಚಂದ್ರ ಎಸ್., ವೈ.ವಿ.ಗುಂಡುರಾವ್, ಎನ್.ಶಶಿಶೇಖರ್ ಕಾಕತ್ಕಾರ್, ಪ್ರೊ.ಜಯಶೀಲಾ ಮತ್ತಿತರರು ಇದ್ದರು. 
ಉಡುಪಿ

ಸಂಘಟನೆಯಿಂದ ಸದೃಢ ಭಾರತ ನಿರ್ಮಾಣ

ಇಂದಿರಾ ಎನ್ ಕೆ
ಬೆಳ್ತಂಗಡಿ: ಭಾರತ ತನ್ನ ಆರಂಭ ಕಾಲದಿಂದಲೂ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಅತ್ಯಂತ ಪ್ರಬುದ್ಧತೆ ಹೊಂದಿದ ದೇಶ. ಕಾಲ ಕ್ರಮೇಣ ಪರಕೀಯರ ನಿರಂತರ ದಾಳಿಗೆ ಒಳಗಾಗಿ ಅಭಿವೃದ್ಧಿಗೆ ಹೊಡೆತ ಎದುರಿಸಿತು. ಬದಲಾದ ಕಾಲಘಟ್ಟದಲ್ಲಿ ದೇಶದ ಸ್ವದೇಶಿ ಚಿಂತನೆ, ಶೈಕ್ಷಣಿಕ ಬೆಳವಣಿಗೆ, ಸಾಮಾಜಿಕ ಬಲವರ್ಧನೆ, ರಾಜತಾಂತ್ರಿಕತೆ ಮೂಲಕ ಭಾರತ ಅಂತಾರಾಷ್ಟ್ರಮಟ್ಟದಲ್ಲಿ ತೆರೆದುಕೊಂಡಿದೆ. ಭವಿಷ್ಯದ ಪೀಳಿಗೆಗೆ ಭಾರತವನ್ನು ಪರಿಚಯಿಸಲು ಮತ್ತಷ್ಟು ಅಭಿವೃದ್ಧಿಯ ಅವಶ್ಯಕತೆ ಇದೆ. ಸಂಘಟನೆ ಮೂಲಕ ಸದೃಢ ಭಾರತ ನಿರ್ಮಿಸಬೇಕು ಎಂದು ಬೆಂಗಳೂರಿನ ಅರ್ಥಶಾಸ್ತ್ರಜ್ಞ ಎಸ್.ವಿಶ್ವನಾಥ ಭಟ್ ಹೇಳಿದರು.
ಉಜಿರೆ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ರೋಟರಿ ಕೆರಿಯರ್ ಗೈಡನ್ಸ್ ಮತ್ತು ಪ್ಲೇಸ್ಮೆಂಟ್ ಸೆಂಟರ್ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ‘ಗ್ರಾಮೀಣ ಯುವಕರ ಪ್ರತಿಭೆಗಳ ಅನಾವರಣ ವಿಕಸಿತ ಭಾರತ 2047ಗೆ ಮಾರ್ಗಸೂಚಿ’ ಎಂಬ ವಿಷಯದ ಕುರಿತು ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲ ಪ್ರೊ.ವಿಶ್ವನಾಥ್ ಪಿ.ಅಧ್ಯಕ್ಷತೆ ವಹಿಸಿದ್ದರು. ಗ್ರಾಮೀಣ ಯುವಕರ ಪ್ರತಿಭೆಗಳ ಅನಾವರಣ ವಿಕಸಿತ ಭಾರತ 2047ಗೆ ಮಾರ್ಗಸೂಚಿ ವಿಷಯದ ಕುರಿತಾಗಿ ದೇಶದ ಪ್ರಮುಖ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ತಜ್ಞರ ಲೇಖನಗಳನ್ನು ಹೊಂದಿರುವ ಪುಸ್ತಕವನ್ನು ತುಮಕೂರು ವಿವಿ ನಿವೃತ್ತ ಕುಲಪತಿ ಪ್ರೊ.ಜಯಶೀಲಾ ಬಿಡುಗಡೆಗೊಳಿಸಿದರು.
ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್., ನಬಾರ್ಡ್‌ನ ನಿವೃತ್ತ ಸಹಾಯಕ ಮಹಾಪ್ರಬಂಧಕ ವೈ.ವಿ.ಗುಂಡುರಾವ್, ಸಂಸ್ಥೆಯ ಶೈಕ್ಷಣಿಕ ಸಂಯೋಜಕ ಎನ್.ಶಶಿಶೇಖರ್ ಕಾಕತ್ಕಾರ್, ರೋಟರಿ ಕೆರಿಯರ್ ಗೈಡನ್ಸ್ ಮತ್ತು ಪ್ಲೇಸ್ಮೆಂಟ್ ಸೆಂಟರ್‌ನ ನಾಗರಾಜ್ ಪೂಜಾರಿ, ಸಂಯೋಜಕ ಜಿ.ಆರ್.ಭಟ್, ಉಪ ಪ್ರಾಂಶುಪಾಲೆ ನಂದ ಕುಮಾರಿ, ಸ್ನಾತಕೋತ್ತರ ಕೇಂದ್ರದ ಡೀನ್ ಸೌಮ್ಯಾ ಕುಮಾರಿ, ಆಡಳಿತ ಕುಲಸಚಿವ ಡಾ.ಶ್ರೀಧರ್ ಭಟ್, ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯಕ್ ಉಪಸ್ಥಿತರಿದ್ದರು.
ಉಪನ್ಯಾಸಕ ದೀಕ್ಷಿತ್ ರೈ ನಿರೂಪಿಸಿದರು. ರಾಜ್ಯದ ಬೆಂಗಳೂರು, ಮಂಗಳೂರು, ಹಾಸನ, ತುಮಕೂರು ಸೇರಿದಂತೆ ವಿವಿಧ ಭಾಗದ ವಿವಿಗಳಿಂದ 100ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದರು.
"

ದೇಶದ ಭವಿಷ್ಯ ಯುವಸಮುದಾಯ ಬೆಳವಣಿಗೆ ಮೇಲೆ ನಿಂತಿದೆ. ಗ್ರಾಮೀಣ ಭಾಗಗಳ ವಿಕಸನ ಸಾಧ್ಯವಾಗಬೇಕೆಂದರೆ ಯುವಕರು ಶೈಕ್ಷಣಿಕ ಬೆಳವಣಿಗೆ ಜತೆಗೆ ಕೌಶಲಾಧರಿತ ಉದ್ಯಮಶೀಲರಾಗಬೇಕು. ತಂತ್ರಜ್ಞಾನದ ಬಳಕೆ ಜತೆಗೆ ಸಾಮಾಜಿಕ ಕಾಳಜಿ ಮತ್ತು ಜವಾಬ್ದಾರಿಯಿಂದ ದೇಶ ಕಟ್ಟಲು ಶ್ರವಿಸಬೇಕು.

ದೇಶದ ಭವಿಷ್ಯ ಯುವಸಮುದಾಯ ಬೆಳವಣಿಗೆ ಮೇಲೆ ನಿಂತಿದೆ. ಗ್ರಾಮೀಣ ಭಾಗಗಳ ವಿಕಸನ ಸಾಧ್ಯವಾಗಬೇಕೆಂದರೆ ಯುವಕರು ಶೈಕ್ಷಣಿಕ ಬೆಳವಣಿಗೆ ಜತೆಗೆ ಕೌಶಲಾಧರಿತ ಉದ್ಯಮಶೀಲರಾಗಬೇಕು. ತಂತ್ರಜ್ಞಾನದ ಬಳಕೆ ಜತೆಗೆ ಸಾಮಾಜಿಕ ಕಾಳಜಿ ಮತ್ತು ಜವಾಬ್ದಾರಿಯಿಂದ ದೇಶ ಕಟ್ಟಲು ಶ್ರವಿಸಬೇಕು.