ಉಬ್ರಂಗಳದಲ್ಲಿ ನವಜೀವನೋತ್ಸವ ಸಮಾರಂಭವನ್ನು ಶ್ರೀಕೃಷ್ಣ ಕುಂಜತ್ತೂರು ಉದ್ಘಾಟಿಸಿದರು. ಬಾಬು ನಾಯ್ಕ, ಕಿರಣ್ ಕುವಾರ್ ಕುಣಿಕುಳ್ಳಾಯ, ಡಾ.ಶ್ರೀನಿಧಿ ಸರಳಾಯ ಇತರರು ಇದ್ದರು. 
ಉಡುಪಿ

ನವಜೀವನ ಸಮಿತಿಯಿಂದ ಸ್ವಸ್ಥ ಸಮಾಜ ನಿರ್ಮಾಣ

ವಿಜಯವಾಣಿ ಸುದ್ದಿಜಾಲ ಬದಿಯಡ್ಕ
ವ್ಯಸನಮುಕ್ತ ಮಾತ್ರವಲ್ಲದೆ ಬಡತನದಲ್ಲಿರುವ ಕುಟುಂಬಗಳಿಗೆ ಆರ್ಥಿಕ ನೆರವು, ಮಹಿಳಾ ಸಬಲೀಕರಣ ಮತ್ತು ವಾನವೀಯ ಮೌಲ್ಯಗಳನ್ನು ಬಿತ್ತುವ ಮೂಲಕ ಕುಟುಂಬಗಳನ್ನು ಸರಿಪಡಿಸುವ ಕಾರ್ಯ ಮಾಡುತ್ತಿರುವ ನವಜೀವನ ಸಮಿತಿಯ ಚಟುವಟಿಕೆ ಶ್ಲಾನೀಯ ಎಂದು ಶ್ರೀಕೃಷ್ಣ ಕುಂಜತ್ತೂರು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ, ಕಾಸರಗೋಡು ತಾಲೂಕು ಜನಜಾಗೃತಿ ವೇದಿಕೆ ವತಿಯಿಂದ ಉಬ್ರಂಗಳ ಮಹಾದೇವ ಪಾರ್ವತಿ ಶಾಸ್ತರ ದೇವಸ್ಥಾನದಲ್ಲಿ ನವಜೀವನೋತ್ಸವ ಮತ್ತು ಕೆಸರುಗದ್ದೆ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಯೋಜನೆಯ ನಿರ್ದೇಶಕ ಬಾಬು ನಾಯ್ಕ, ಉಬ್ರಂಗಳ ಕ್ಷೇತ್ರದ ವ್ಯಾನೇಜಿಂಗ್ ಟ್ರಸ್ಟಿ ಕಿರಣ್ ಕುವಾರ್ ಕುಣಿಕುಳ್ಳಾಯ, ಕುಬ್ಡಾಜೆ ಗ್ರಾಪಂ ಸದಸ್ಯೆ ಐಶಾತ್, ಡಾ.ವೇಣುಗೋಪಾಲ್ ಕಳೆಯತ್ತೋಡಿ, ಡಾ.ಶ್ರೀನಿಧಿ ಸರಳಾಯ, ಚಂದ್ರಹಾಸ ವಾಸ್ತರ್ ಮುನಿಯೂರು, ಮಧುಸೂದನ ಆಯರ್, ಜಯರಾಜ ಕುಣಿಕುಳ್ಳಾಯ, ಹರೀಶ್ ಕುಣಿಕುಳ್ಳಾಯ, ಮಂಜುನಾಥ ಆಳ್ವ, ಸುಶೀಲಾ ಬಾಲಗೋಪಾಲನ್ ವಾತನಾಡಿದರು.
ಜನಜಾಗೃತಿ ಕರಾವಳಿ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಜನಜಾಗೃತಿ ವೇದಿಕೆ ನಿಕಟ ಪೂರ್ವ ಅಧ್ಯಕ್ಷ ಅಖಿಲೇಶ್ ನಗುಮುಗಂ, ಯೋಜನಾಧಿಕಾರಿ ದಿನೇಶ್, ನವಜೀವನ ಉತ್ಸವ ಸಮಿತಿಯ ಕಾರ್ಯದರ್ಶಿ ತಾರನಾಥ ರೈ, ಚಂದ್ರಶೇಖರ ಕುರುಪ್, ಜನಜಾಗೃತಿ ತಾಲೂಕು ಅಧ್ಯಕ್ಷ ಜಯರಾಮ ಪಾಟಾಳಿ ಪಡುಮಲೆ, ಉತ್ಸವ ಸಮಿತಿ ಅಧ್ಯಕ್ಷ ಹರೀಶ್ ಗೋಸಡ, ಕೋಶಾಧಿಕಾರಿ ರಮೇಶ್ ವಾವಿನಕಟ್ಟೆ, ಉದಯ ಕಲ್ಲಕಟ್ಟ, ಅಮೃತರಾಜ್ ಇತರರು ಇದ್ದರು. ಶಂಭಾವಿ ಚಂದ್ರಹಾಸ ಶೆಟ್ಟಿ ಎಡಪಾಡಿ ಅವರ ಜನ್ನ ಮತ್ತು ಖಾಜಾ ಹೆಸರಿನ ಕಂಬಳದ ಕೋಣಗಳನ್ನು ಗದ್ದೆಯಲ್ಲಿ ಓಡಿಸಲಾಯಿತು.