ಬೂಡು-ಕೇರ್ಪಳದ ಶ್ರೀ ಭಗವತಿ ಯುವ ಸೇವಾ ಸಂಘದ ಬೆಳ್ಳಿ ಹಬ್ಬ ಸಮಾರಂಭವನ್ನು ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ಸುನೀಲ್ ಕುಮಾರ್, ಎನ್.ಜಯಪ್ರಕಾಶ್ ರೈ, ನಾರಾಯಣ ಮತ್ತಿತರರಿದ್ದರು.
ಸುಳ್ಯ: ಸುಳ್ಯದ ಬೂಡು-ಕೇರ್ಪಳದ ಶ್ರೀ ಭಗವತಿ ಯುವ ಸೇವಾ ಸಂಘದ ಬೆಳ್ಳಿ ಹಬ್ಬ ಸಮಾರಂಭ ‘ಶ್ರೀಭಗವತಿ ರಜತೋತ್ಸವ’ ಕಾರ್ಯಕ್ರಮ ಬಂಟರ ಯಾನೆ ನಾಡವರ ಸಂಘದ ಸಭಾಭವನದಲ್ಲಿ ನಡೆಯಿತು.
ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ಬೆಳ್ಳಿಹಬ್ಬ ಆಚರಣೆ ಪ್ರಯುಕ್ತ ‘ಶ್ರೀ ಭಗವತಿ ರತ್ನ ಭೂಷಣ’ ಪ್ರಶಸ್ತಿಯನ್ನು ಎನ್.ಎ.ರಾಮಚಂದ್ರ ಹಾಗೂ ಎನ್.ಜಯಪ್ರಕಾಶ್ ರೈ ಅವರಿಗೆ, ಸಂಘಟನೆ ನೆಲೆಯಲ್ಲಿ ಪಯಸ್ವಿನಿ ಯುವಕ ಮಂಡಲ ಕೇರ್ಪಳ, ಸ್ಪಂದನ ಗೆಳೆಯರ ಬಳಗ ಅಡ್ತಲೆ, ಅರಂತೋಡು, ಮಿತ್ರ ಬಳಗ ಕಾಯರ್ತೋಡಿ ಸಂಘಟನೆಗಳಿಗೆ ನೀಡಿ ಗೌರವಿಸಲಾಯಿತು.
ಸುಳ್ಯ ಸಾರ್ವಜನಿಕ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಿತಿನ್ ಪ್ರಭು, ಶ್ರೀ ಚೆನ್ನಕೇಶವ ದೇವಳ ಪ್ರಧಾನ ಅರ್ಚಕ ಹರಿಕೃಷ್ಣ ವರಂಬಳಿತ್ತಾಯ, ರಕ್ತದಾನಿ ಶರತ್ ಪರಿವಾರಕಾನ, ಹಿರಿಯ ದೈವ ನರ್ತಕ ಮಾಯಿಲ ಅಜಿಲ, ಪ್ರಗತಿ ಆಂಬುಲೆನ್ಸ್ ಚಾಲಕ ಅಬ್ದುಲ್ ರಜಾಕ್, ಹಿರಿಯ ಯಕ್ಷಗಾನ ಪೋಷಕರು ಮತ್ತು ಕಲಾವಿದ ಬಾಲಣ್ಣ ಗೌಡ, ನಿವೃತ್ತ ಅಂಗನವಾಡಿ ಸಹಾಯಕಿ ಕುಸುಮಾವತಿ, ವಾಲಿಬಾಲ್ ಆಟಗಾರ ವಿಪುಲ್ ರೈ ಅವರನ್ನು ಸನ್ಮಾನಿಸಲಾಯಿತು.
ಶ್ರೀ ಭಗವತಿ ಯುವ ಸೇವಾ ಸಂಘ ಅಧ್ಯಕ್ಷ ಸುನೀಲ್ ಕುಮಾರ್ ಕೇರ್ಪಳ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಸಂಘ ಗೌರವಾಧ್ಯಕ್ಷ ಎನ್.ಜಯಪ್ರಕಾಶ್ ರೈ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಅಧ್ಯಕ್ಷ ನಾರಾಯಣ, ಪ್ರಮುಖರಾದ ಅಶೋಕ್ ಪ್ರಭು, ಸಂತೋಷ್ ಕುತ್ತಮೊಟ್ಟೆ, ವಿಕ್ರಮ್ ಅಡ್ಡಂಗಾಯ, ಹರೀಶ್ ಕಂಜಿಪಿಲಿ, ಸುಭಾಶ್ಚಂದ್ರ ರೈ ತೋಟ, ಹೇಮಂತ್ ಕಾಮತ್, ಎನ್.ಎ.ರಾಮಚಂದ್ರ, ಬೂಡು ರಾಧಾಕೃಷ್ಣ ರೈ ಮೊದಲಾದವರು ಉಪಸ್ಥಿತರಿದ್ದರು. ರಾಜೇಶ್ ಕುರುಂಜಿಗುಡ್ಡೆ ವಂದಿಸಿದರು. ವಾಸುದೇವ ನಾಯಕ್ ನಿರೂಪಿಸಿದರು.