ಶಿವಪುರದಲ್ಲಿ ಹಡಿಲು ಭೂಮಿ ಕೃಷಿ ಮಾಡಿರುವುದು. 
ಉಡುಪಿ

ಹಡಿಲು ಭೂಮಿಗೆ ಮರುಜೀವ!

ನರೇಂದ್ರ ಎಸ್.ಮರಸಣಿಗೆ ಹೆಬ್ರಿ

ಕರೋನಾ ಲಾಕ್‌ಡೌನ್ ಸಮಯದಲ್ಲಿ ಕೆಲಸವಿಲ್ಲದಿರುವುದರಿಂದ ಕುಟುಂಬದ ಸದಸ್ಯರೆಲ್ಲ ಸೇರಿಕೊಂಡು ಆರಂಭ ವಾಡಿದ ಹಡಿಲು ಭೂಮಿ ಕೃಷಿ ಇಂದಿಗೂ ಜೀವಂತವಾಗಿದೆ. ಸುವಾರು ಆರು ವರ್ಷಗಳಿಂದ ಶಿವಪುರ ಭಾಗದಲ್ಲಿ ಶ್ರೀನಿವಾಸ್ ನಾಯ್ಕ ಹಾಗೂ ಸುಗಂಧಿ ದಂಪತಿ ಹಡಿಲು ಭೂಮಿ ಕೃಷಿಯಲ್ಲಿ ತೊಡಗಿದ್ದಾರೆ.
ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಶ್ರೀನಿವಾಸ್ ನಾಯ್ಕ, ಪತ್ನಿ ಸುಗಂಧಿ ಶಿವಪುರ ಕೃಷಿ ಸಖಿ ಹಾಗೂ ಶಿವಪುರ ಗ್ರಾ.ಪಂ. ನಿಕಟಪೂರ್ವ ಸದಸ್ಯರಾಗಿದ್ದರು. ಒತ್ತಡದ ನಡುವೆಯೂ ಇವರಿಬ್ಬರು ಭತ್ತ ಬೆಳೆಯುತ್ತಿದ್ದಾರೆ. ವರ್ಷಕ್ಕೆ ಎರಡು ಬೆಳೆಯನ್ನು ಬೆಳೆಯುತ್ತಾರೆ. ಟ್ರಾಕ್ಟರ್, ನೇಜಿ ನೆಡುವ ಯಂತ್ರ ಎಲ್ಲವೂ ಇರುವುದರಿಂದ ಕಷಿ ಕೈ ಹಿಡಿದಿದೆ. ಸುವಾರು 25 ಎಕರೆ ಭೂಪ್ರದೇಶದಲ್ಲಿ ವಿಸ್ತಾರವಾದ ಗದ್ದೆಗಳನ್ನು ನಾಟಿ ವಾಡಿದ್ದಾರೆ. ಈ ವರ್ಷ ಮಳೆ ವಿಳಂಬವಾಗಿದ್ದರಿಂದ ಅನೇಕ ಗದ್ದೆಗಳ ನಾಟಿ ಸಾಧ್ಯವಾಗಿಲ್ಲ. ಶಿವಪುರ ಸಂಜೀವಿನಿ ಒಕ್ಕೂಟದ ಸುಮಿತ್ರಾ ರಾವೇಂದ್ರ ನಾಯ್ಕ, ಜಯಲಕ್ಷ್ಮೀ, ಪ್ರಕಾಶ್ ನಾಯ್ಕ ಬೆನ್ನೆಲುಬಾಗಿ ನಿಂತಿದ್ದಾರೆ.

ಕಳೆದ ವರ್ಷ 25 ಕ್ವಿಂಟಾಲ್ ಭತ್ತ ನಷ್ಟ

ಜಿಂಕೆ, ಹಂದಿ, ನವಿಲು, ಕಾಡುಕೋಣ, ಮಂಗ, ದನಗಳ ಹಾವಳಿಯಿಂದ ಕಳೆದ ವರ್ಷ ಸುವಾರು 25 ಕ್ವಿಂಟಾಲ್ ಭತ್ತ ನಷ್ಟವಾಗಿದೆ. ಸರಿಯಾದ ಪರಿಹಾರ ದೊರಕುವುದಿಲ್ಲ. ಹಡಿಲು ಬಿಟ್ಟ ಗದ್ದೆಗಳ ನಾಟಿ ಗಮನಿಸಿ ಅನೇಕ ಭೂ ಮಾಲೀಕರು ಕೃಷಿಯತ್ತ ಆಕರ್ಷಿತರಾಗಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ಮುಗಿಸಿರುವ ಮಗಳು ಅಕ್ಷತಾ ಕೃಷಿಗೆ ಸಹಕಾರ ನೀಡುತ್ತಾರೆ ಎಂದು ಸುಗಂಧಿ ನಾಯ್ಕ ಹೇಳುತ್ತಾರೆ.

ರಾಷ್ಟ್ರಮಟ್ಟದ ಗೌರವ

ಶಿವಪುರದ ಕೃಷಿ ಸಖಿ ಆಗಿರುವ ಸುಗಂಧಿ ನಾಯ್ಕ ಅವರಿಗೆ ಹಡಿಲು ಭೂಮಿ ಕೃಷಿಯನ್ನು ಗಮನಿಸಿ ಭಾರತ ಸರ್ಕಾರ ಕಳೆದ ವರ್ಷ ಗಣರಾಜ್ಯೋತ್ಸವ ದಿನದಂದು ವಿಶೇಷ ಆಹ್ವಾನಿತರಾಗಿ ದೆಹಲಿಗೆ ಬುಲಾವ್ ಬಂದಿತ್ತು. ಸ್ಥಳೀಯ ಆಡಳಿತಗಳು, ಜಿಲ್ಲಾಮಟ್ಟದ ಗೌರವಗಳು ಸಂದಿವೆ.

ಶಿವಪುರದಲ್ಲಿ ಸಂಜೀವಿನಿ ತಂಡದ ಸಹಕಾರದೊಂದಿಗೆ ಹಡಿಲು ಭೂಮಿ ಕೃಷಿಯನ್ನು ಕಳೆದ ಕೆಲವು ವರ್ಷಗಳಿಂದ ವಾಡುತ್ತಿದ್ದಾರೆ. ಇದು ಅನೇಕರಿಗೆ ವಾರ್ಗದರ್ಶನ ಆಗಬೇಕು. ಕೃಷಿಯಿಂದಲೂ ನೆಮ್ಮದಿ ಸಾಧ್ಯವಿದೆ.

— ಪ್ರತೀಕ್ ಬಾಯಲ್ ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ

ಕೋವಿಡ್ ಸಮಯದಲ್ಲಿ ಆರಂಭವಾದ ಹಡಿಲು ಭೂಮಿ ಕೃಷಿ ಚಟುವಟಿಕೆಯಿಂದ ಇಂದಿಗೂ ವಿರಮಿಸಿಲ್ಲ. ಅನೇಕರು ಇದಕ್ಕೆ ನೀಡಿದ ಸಹಕಾರದಿಂದಾಗಿ ಕೃಷಿಯನ್ನು ಬೆಳೆಸುವ ಸಣ್ಣ ಪ್ರಯತ್ನ ವಾಡಿದ್ದೇವೆ. ಸರ್ಕಾರ ಭತ್ತದ ಬೆಳೆಗೆ ಉತ್ತಮಮಟ್ಟದ ಬೆಂಬಲ ಬೆಲೆ ನಿಗದಿ ವಾಡಿದರೆ ರೈತರಿಗೆ ಒಳಿತಾಗುತ್ತದೆ.

— ಶ್ರೀನಿವಾಸ್ ನಾಯ್ಕ ಹಡಿಲು ಭೂಮಿ ಕೃಷಿಕ

ಹಡಿಲು ಭೂಮಿ ಬೇಸಾಯ ಗಮನಿಸಿ ರಾಷ್ಟ್ರಮಟ್ಟದಲ್ಲಿ ಗೌರವ ಸಿಕ್ಕಿದೆ. ಈ ವರ್ಷ ಮಳೆ ಅಭಾವದಿಂದ ಕಡಿಮೆ ಪ್ರಮಾಣದಲ್ಲಿ ಕೃಷಿ ವಾಡಿದ್ದೇವೆ. ಕೃಷಿ ಯಜ್ಞದಲ್ಲಿ ನಮಗೆ ಬೇಕಾದ ವ್ಯವಸ್ಥೆಯನ್ನು ನಾವೇ ವಾಡಿಕೊಂಡಿದ್ದರಿಂದ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದೇವೆ.

— ಸುಗಂಧಿ ಸಾಧಕ ಕೃಷಿಕೆ