ಪುತ್ತೂರು ಬ್ರಾಹ್ಮಣ ಮಹಾಸಭಾದ ವಾರ್ಷಿಕೋತ್ಸವದಲ್ಲಿ ಪ್ರಮೋದ್​ ಮಂತ್ರಿ ಮತ್ತು ಆದ್ಯತಾ ಭಟ್​ ಅವರನ್ನು ಸನ್ಮಾನಿಸಲಾಯಿತು. ರಮೇಶ್​ ವೈದ್ಯ, ಪ್ರಕಾಶ್​ ಭಟ್​, ಸಂದೀಪ್​ ಮಂಜ, ಶ್ರೀಕಾಂತ್​ ಉಪಾಧ್ಯಾಯ, ಪಿ.ಕೃಷ್ಣಮೂರ್ತಿ ಭಟ್​, ರಾಮಚಂದ್ರರಾವ್​ ಕೆ.ಜಿ. ಸುಬ್ರಹ್ಮಣ್ಯ ಜೋಶಿ, ಚಂದ್ರಶೇಖರ್​ ಅಡಿಗ, ನಿರಂಜನ್​ ಭಟ್​ ಇದ್ದರು. 
ಉಡುಪಿ

ಸೇವಾ ಮನೋಭಾವದಿಂದ ಸಂಘಟನೆಗೆ ಶಕ್ತಿ

* ಕರ್ಣಾಟಕ ಬ್ಯಾಂಕ್​ನ ಎಜಿಎಂ ರಮೇಶ್​ ವೈದ್ಯ ಅನಿಸಿಕೆ 

* ಪುತ್ತೂರು ಬ್ರಾಹ್ಮಣ ಮಹಾಸಭಾದ ವಾರ್ಷಿಕೋತ್ಸವ 

ಉಡುಪಿ: ಸೇವಾ ಮನೋಭಾವದಿಂದ ಕೆಲಸ ಮಾಡಿದಲ್ಲಿ ಸಂಘಟನೆ ಬೆಳೆಯಲು ಹಾಗೂ ಇನ್ನಷ್ಟು ಶಕ್ತಿ ಲಭಿಸಲು ಸಾಧ್ಯ. ಪಾಲಕರು ತಮ್ಮ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಬೆಳೆಸುವಲ್ಲಿ ಮುತುವರ್ಜಿ ವಹಿಸಬೇಕು. ಇಂತಹ ಮಾದರಿ ಸಂಘಟನೆಗಳ ಮೂಲಕ ಸಮಾಜ ಸೇವೆ ಮಾಡುವಂತೆ ಅವರಿಗೆ ಪ್ರೇರೇಪಿಸಬೇಕು ಎಂದು ಕರ್ಣಾಟಕ ಬ್ಯಾಂಕ್​ನ ಎಜಿಎಂ ರಮೇಶ್​ ವೈದ್ಯ ಸಲಹೆ ನೀಡಿದರು.
ಉಡುಪಿ ಪುತ್ತೂರಿನ ದುರ್ಗಾಪರಮೇಶ್ವರಿ ದೇವಳದ ಭಗವತೀ ಸಭಾಂಗಣದಲ್ಲಿ ಆಯೋಜಿಸಿದ್ದ ಪುತ್ತೂರು ಬ್ರಾಹ್ಮಣ ಮಹಾಸಭಾದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಸಾಧಕರಿಗೆ ಸನ್ಮಾನ

ಯಕ್ಷಗಾನ ಸಂಘಟಕ, ಕಲಾವಿದ ಪ್ರಮೋದ್​ ಮಂತ್ರಿ ಮತ್ತು ಬಹುಮುಖ ಪ್ರತಿಭೆ ಆದ್ಯತಾ ಭಟ್​ ಅವರನ್ನು ಸನ್ಮಾನಿಸಲಾಯಿತು. ಐವತ್ತು ಸಂವತ್ಸರಗಳ ಸಾರ್ಥಕ ದಾಂಪತ್ಯ ಜೀವನ ಪೂರೈಸಿದ ವಲಯದ ಸದಸ್ಯ ದಂಪತಿಯನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜನಾರ್ದನ್​ ಕೊಡವೂರು, ಮೋಹನ್​ ಉಡುಪ, ಸುಬ್ರಹ್ಮಣ್ಯ ಉಡುಪ ಮತ್ತು ಚೈತನ್ಯ ಎಂ.ಜಿ. ಅವರನ್ನು ಗೌರವಿಸಲಾಯಿತು.
ಪ್ರಸ್ತುತ ಸಾಲಿನ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕಗಳಿಸಿದ ವಲಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಆರ್ಥಿಕವಾಗಿ ಹಿಂದುಳಿದವರಿಗೆ ಆಪತ್ಬಾಂಧವ ಸಮಿತಿಯ ವತಿಯಿಂದ 40 ಸಾವಿರ ರೂ. ವೈದ್ಯಕೀಯ ಸಹಾಯಧನ ವಿತರಿಸಲಾಯಿತು.
ವಾರ್ಷಿಕೋತ್ಸವ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಕ್ರೀಡಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಉಪಸಮಿತಿಗಳ ಸಂಚಾಲಕರನ್ನು ಅಭಿನಂದಿಸಲಾಯಿತು.
ತೆರಿಗೆ ಸಲಹೆಗಾರ ಪ್ರಕಾಶ್​ ಭಟ್​, ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸಂದೀಪ್​ ಮಂಜ, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಶ್ರೀಕಾಂತ್​ ಉಪಾಧ್ಯಾಯ, ವಲಯದ ಗೌರವಾಧ್ಯಕ್ಷ ಪಿ.ಕೃಷ್ಣಮೂರ್ತಿ ಭಟ್​, ಕೋಶಾಧಿಕಾರಿ ರಾಮಚಂದ್ರರಾವ್​ ಕೆ.ಜಿ., ಆಪತ್ಬಾಂಧವ ಸಮಿತಿಯ ಸಂಚಾಲಕ ಸುಬ್ರಹ್ಮಣ್ಯ ಜೋಶಿ ಉಪಸ್ಥಿತರಿದ್ದರು.
ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಚಂದ್ರಶೇಖರ್​ ಅಡಿಗ ಸ್ವಾಗತಿಸಿದರು. ಕಾರ್ಯದರ್ಶಿ ನಿರಂಜನ್​ ಭಟ್​ ವರದಿ ವಾಚಿಸಿ ವಂದಿಸಿದರು. ಚೈತನ್ಯ ಎಂ.ಜಿ. ಕಾರ್ಯಕ್ರಮ ನಿರೂಪಿಸಿದರು. ಸುಬ್ರಹ್ಮಣ್ಯ ಉಡುಪ, ಸುರೇಶ್​ ಕಾರಂತ, ಸುನೀತಾ ಚೈತನ್ಯ, ಶುಭಪ್ರಸಾದ್​, ಸುರೇಖಾ ಗುರುರಾಜ್​, ಅನುಪಮಾ, ಶ್ರೀಲಕ್ಷ್ಮೀ, ಗಾಯತ್ರಿ ಭಟ್​, ವಿಜಯ್​ ಸಹಕರಿಸಿದರು. 
ಸಭಾ ಕಾರ್ಯಕ್ರಮದ ಬಳಿಕ ಭಗವತಿ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಹೂವಿನ ಪೂಜೆ ಮತ್ತು ವಲಯದ ಸದಸ್ಯರಿಂದ ಸಾಂಸತಿಕ ವೈಭವ ಕಾರ್ಯಕ್ರಮ ನಡೆಯಿತು.