ಸಾಲಿಗ್ರಾಮದ ಹಳೆಕೋಟೆ ಮೈದಾನದಲ್ಲಿ 14ರ ವಯೋಮಿತಿಯ ಬಾಲಕ-ಬಾಲಕಿಯರ ಬ್ರಹ್ಮಾವರ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಜುಂ ಉದ್ಘಾಟಿಸಿದರು. 
ಉಡುಪಿ

ಯುವ ಸಮುದಾಯ ಕ್ರೀಡಾಸಕ್ತಿ ಬೆಳೆಸಿಕೊಳ್ಳಲಿ

ಕೋಟ:ಯುವಸಮುದಾಯ ಕ್ರೀಡಾ ಕ್ಷೇತ್ರದತ್ತಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು.ಆಮೂಲಕ ಸಾಧನೆಯ ಶಿಖರ ಏರಲು ಸಾಧ್ಯಎಂದು ಬ್ರಹ್ಮಾವರ ಕ್ಷೇತ್ರಶಿಕ್ಷಣಾಧಿಕಾರಿ ಶಬನಾ ಅಜುಂಹೇಳಿದರು.

ಸಾಲಿಗ್ರಾಮದ ಹಳೆಕೋಟೆ ಮೈದಾನದಲ್ಲಿಶಾಲಾ ಶಿಕ್ಷಣ ಇಲಾಖೆ,ಉಡುಪಿಜಿಲ್ಲಾ ಪಂಚಾಯಿತಿ,ಬ್ರಹ್ಮಾವರಕ್ಷೇತ್ರ ಶಿಕ್ಷಣಾಧಿಕಾರಿಗಳಕಚೇರಿ ಮತ್ತು ಕಾರ್ಕಡ ಸರ್ಕಾರಿಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತಆಶ್ರಯದಲ್ಲಿ 14ರವಯೋಮಿತಿಯ ಬಾಲಕ-ಬಾಲಕಿಯರಬ್ರಹ್ಮಾವರ ಹೋಬಳಿಮಟ್ಟದ ಕ್ರೀಡಾಕೂಟಮುಕುಟ-2025’ ಕಾರ್ಯಕ್ರಮಉದ್ಘಾಟಿಸಿ ಮಾತನಾಡಿದರು.

ಶಾಲಾಮುಖ್ಯಶಿಕ್ಷಕಿ ಜ್ಯೋತಿ ಅಧ್ಯಕ್ಷತೆವಹಿಸಿ ಸ್ವಾಗತಿಸಿದರು.ಕೋಟಆರಕ್ಷಕ ಠಾಣೆಯ ಎಎಸ್‌ಐ ಗೋಪಾಲಪೂಜಾರಿ ಕ್ರೀಡಾ ಜ್ಯೋತಿ ಬೆಳಗಿದರು.ಜಿಲ್ಲಾದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷವಿಜಯ ಕುಮಾರ್ ಶೆಟ್ಟಿ ಕ್ರೀಡಾಧ್ವಜಾರೋಹಣಗೈದರು.

ಜಿಲ್ಲಾದೈಹಿಕ ಶಿಕ್ಷಕರ ಸಂಘದ ಪರಿವೀಕ್ಷಕರಾದನಿತ್ಯಾನಂದ ಶೆಟ್ಟಿ,ಉದ್ಯಮಿಅಜಯ್ ಶ್ಯಾನುಭಾಗ್,ಗಣಪತಿಶ್ಯಾನುಭಾಗ್,ಶಾಲಾಮುಖ್ಯಶಿಕ್ಷಕರ ಸಂಘ ಅಧ್ಯಕ್ಷಸಾಧು ಸೇರಿಗಾರ್,ಪಪಂಸದಸ್ಯೆ ರತ್ನಾ ನಾಗರಾಜ್ ಗಾಣಿಗ,ಎಸ್‌ಡಿಎಂಸಿಅಧ್ಯಕ್ಷ ದಿನೇಶ್ ಕಾರ್ಕಡ,ಸಿಆರ್‌ಪಿಸವಿತಾ ಆಚಾರ್,ತಾಲೂಕುದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷಚಂದ್ರಶೇಖರ ಶೆಟ್ಟಿ,ಹಳೇವಿದ್ಯಾರ್ಥಿ ಸಂಘದ ಕಾರ್ಯದರ್ಶಿಮುರಳೀಧರ ನಾಯರಿ,ಸದಸ್ಯರಾದಕೃಷ್ಣಪ್ರಸಾದ್ ಹೇರ್ಳೆ,ಬ್ರಹ್ಮಾವರವಲಯ ಶಿಕ್ಷಣ ಇಲಾಖೆಯ ಸಂಯೋಜಕಪ್ರಕಾಶ್ ಬಿ.ಬಿ.ಉಪಸ್ಥಿತರಿದ್ದರು.

ಹಂಗಾರಕಟ್ಟೆಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಶ್ರೀಕಾಂತ್ ಸಾವಂತ್ ನಿರೂಪಿಸಿದರು.ಕಾರ್ಕಡಶಾಲೆ ಸಹ ಶಿಕ್ಷಕಿ ಬೇಬಿ ವಂದಿಸಿದರು.