ಬ್ರಹ್ಮಾವರ ವ್ಯವಸಾಯಸೇವಾ ಸಹಕಾರಿ ಸಂಘದ 110 ನೇವರ್ಷ ಆಚರಣೆ ಕಾರ್ಯಕ್ರಮವನ್ನು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಉದ್ಘಾಟಿಸಿದರು.  
ಉಡುಪಿ

ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ ಮಾದರಿ

ವಿಜಯವಾಣಿಸುದ್ದಿಜಾಲ ಬ್ರಹ್ಮಾವರ

ಸಹಕಾರಿಸಂಘಗಳು ಠೇವಣಿದಾರರ ಮತ್ತುಸಾಲಗಾರರ ನಂಬಿಕೆಗೆಗಳ ಮೇಲೆನಡೆಯುವ ವ್ಯವಸ್ಥೆಯಾಗಿದ್ದು110ವರ್ಷಗಳಕಾಲ ನಿರಂತರವಾಗಿ ಜನರ ವಿಶ್ವಾಸದೊಂದಿಗೆಲಾಭದಾಯಕವಾಗಿ ಕಾರ್ಯನಿರ್ವಹಿಸುತ್ತಿರುವಬ್ರಹ್ಮಾವರ ಸಹಕಾರಿ ಮಾದರಿಯಾಗಿದೆಎಂದು ಉಡುಪಿ ಶಾಸಕ ಯಶ್‌ಪಾಲ್ಸುವರ್ಣ ಹೇಳಿದರು.

ಭಾನುವಾರಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿಸಂಘದ 110ನೇವರ್ಷ ಆಚರಣೆ ಮತ್ತು ಸುದೀರ್ಘಕಾಲ ಅಧ್ಯಕ್ಷರಾಗಿ ಕಳೆದ ವರ್ಷನಿಧನರಾದ ಇರ್ಮಾಡಿ ತಿಮ್ಮಪ್ಪಹೆಗ್ಡೆ ಅವರ ಸ್ಮರಣಾರ್ಥ ಜರುಗಿದಉನ್ನತಿ ವೈಭವ-2025ರಪ್ರಯುಕ್ತ ವಿದ್ಯಾರ್ಥಿಗಳಿಗೆದೇಶಪ್ರೇಮ,ಜನಪದಕಲಾ ಸ್ಪರ್ಧೆ ಹಾಗೂ ಸಮಾರೋಪಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಭಾಕಾರ್ಯಕ್ರಮಕ್ಕೂ ಮುನ್ನ ರಾಷ್ಟ್ರಮಟ್ಟದವ್ಯಕ್ತಿತ್ವ ವಿಕಸನ ತರಬೇತುದಾರರಾಜೇಂದ್ರ ಭಟ್ ದಿಕ್ಸೂಚಿ ಭಾಷಣಮಾಡಿದರು.

ಸಂಘದಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿಪ್ರಾಸ್ತಾವಿಕ ಮಾತನಾಡಿ,110 ವರ್ಷದಸಹಕಾರಿಯೊಂದು ಉನ್ನತ ಮಟ್ಟದಲ್ಲಿಇರಲು ಹಿಂದಿನ ಎಲ್ಲ ಅಧ್ಯಕ್ಷರು,ನಿರ್ದೇಶಕರುಹಾಗೂ ಸಿಬ್ಬಂದಿ ಕಾರಣರಾಗಿದ್ದಾರೆಎಂದರು.

ಸಂಘದಮಾಜಿ ಅಧ್ಯಕ್ಷ ಸುಂಕೇರಿ ವೆಂಕಟ್ರಾಯನಾಯಕ್,ಉಡುಪಿನಗರಾಭಿವೃದ್ಧಿ ಪ್ರಾಧಿಕಾರಅಧ್ಯಕ್ಷ ದಿನಕರ ಹೇರೂರು,ಜಿಲ್ಲಾಸಹಕಾರಿ ಯೂನಿಯನ್ ಅಧ್ಯಕ್ಷಇಂದ್ರಾಳಿ ಜಯಕರ ಶೆಟ್ಟಿ,ಕಾರ್ಯನಿರ್ವಹಣಾಧಿಕಾರಿಸುಭಾಶ್ಚಂದ್ರ ಶೆಟ್ಟಿ ಮತ್ತುನಿರ್ದೇಶಕರು ಉಪಸ್ಥಿತರಿದ್ದರು.

ನಿರ್ದೇಶಕರಾದಜ್ಞಾನ ವಸಂತ ಶೆಟ್ಟಿ ಅವರು ಇರ್ಮಾಡಿತಿಮ್ಮಪ್ಪ ಹೆಗ್ಡೆ ಸಂಸ್ಮರಣಾಭಾಷಣ ಮಾಡಿದರು.ಉಪಾಧ್ಯಕ್ಷಗಣೇಶ್ ಪ್ರಸಾದ್ ಶೆಟ್ಟಿ,ನಿರ್ದೇಶಕರಾದಉಲ್ಲಾಸ ನಾಯಕ್,ರಾಜೇಶ್ಮರಕಾಲ,ನಾಗವೇಣಿಪಂಡರಿನಾಥ್,ನಳಿನಿಪ್ರದೀಪ್ ರಾವ್,ಎಸ್.ದಯಾನಂದನಾಯಕ್,ಶ್ರೀನಿವಾಸಶೆಟ್ಟಿ,ಸಂತೋಷ್ಜತ್ತನ್ನ,ಎಸ್.ನಾರಾಯಣ,ನಿತ್ಯಾನಂದನಾಯ್ಕ ಸನ್ಮಾನಿತರನ್ನು ಪರಿಚಯಿಸಿದರು.ಸಾಂಸ್ಕೃತಿಕವೈಭವ ಸ್ಪರ್ಧೆಯಲ್ಲಿ ಜಿ.ಎಂ.ವಿದ್ಯಾನಿಕೇತನ್ಪಬ್ಲಿಕ್ ಸ್ಕೂಲ್ ಪ್ರಥಮ,ಎಸ್.ಎಂ.ಎಸ್ಆಂಗ್ಲಮಾಧ್ಯಮ ಶಾಲೆ ದ್ವೀತೀಯ,ಬ್ರಹ್ಮಾವರಕೆಪಿಎಸ್‌ಸಿ ಶಾಲೆ ತೃತೀಯ ಬಹುಮಾನಪಡೆಯಿತು.

ಸನ್ಮಾನ,ಬಹುಮಾನವಿತರಣೆ

ಸಂಘದವ್ಯಾಪ್ತಿಯ ಹೈನುಗಾರರನ್ನು,ಕೃಷಿಕರನ್ನು,ಪಿಗ್ಮಿಸಂಗ್ರಾಹಕರನ್ನು,ಭದ್ರತಾಸಿಬ್ಬಂದಿ,ಚಿನಿವಾರರನ್ನುಸನ್ಮಾನಿಸಲಾಯಿತು.ಪ್ರತಿಭಾವಂತವಿದ್ಯಾರ್ಥಿಗಳಿಗೆ ಪುರಸ್ಕಾರ,ಶಾಲಾವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯವಿಜೇತ ತಂಡಕ್ಕೆ ಬಹುಮಾನವಿತರಿಸಲಾಯಿತು.