ಪಡುಬಿದ್ರಿ ದೇವಳ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆಯನ್ನು ಕೆ.ಪ್ರಕಾಶ್ ಶೆಟ್ಟಿ ಬಿಡುಗಡೆಗೊಳಿಸಿದರು. ಪ್ರಮುಖರಾದ ಪದ್ಮನಾಭ ಭಟ್, ಗಣಪತಿ ಭಟ್, ಪಿ.ಭವಾನಿಶಂಕರ ಹೆಗ್ಡೆ, ರವೀಂದ್ರನಾಥ ಜಿ.ಹೆಗ್ಡೆ, ಮುರಳಿನಾಥ ಶೆಟ್ಟಿ, ವೈ.ಎನ್.ರಾಮಚಂದ್ರ ರಾವ್ ಮತ್ತಿತರರಿದ್ದರು. 
ಉಡುಪಿ

ಒಗ್ಗಟ್ಟಿನಿಂದ ಬ್ರಹ್ಮಕಲಶೋತ್ಸವ ಯಶಸ್ವಿ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಭಕ್ತರೆಲ್ಲರ ಸಹಾಯ, ಸಹಕಾರಗಳೊಂದಿಗೆ ದೇಗುಲ ಸಿದ್ಧವಾಗುತ್ತಿದೆ. ದೇಶ, ವಿದೇಶಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ಪುನಃಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ ಕಣ್ತುಂಬಿಸಿಕೊಳ್ಳುವ ಧಾವಂತದಲ್ಲಿದ್ದಾರೆ. ಲಕ್ಷಾಂತರ ಭಕ್ತರು ಕ್ಷೇತ್ರವನ್ನು ಸಂದರ್ಶಿಸಲಿದ್ದು, ಎಲ್ಲ ಕಾರ್ಯಕ್ರಮಗಳನ್ನು ನಾವೆಲ್ಲರೂ ಜತೆಯಾಗಿ ಯಶಸ್ವಿಗೊಳಿಸೋಣ ಎಂದು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ಹೇಳಿದರು.
ಪುನಃ ನಿರ್ಮಾಣಗೊಳ್ಳುತ್ತಿರುವ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಏ.23ರಿಂದ ಮೇ 4ರವರೆಗೆ ನಡೆಯುವ ಶ್ರೀ ದೇವರ ಪುನಃಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ದೇವರ ಬಾಲಾಲಯದಲ್ಲಿ ಶನಿವಾರ ಬಿಡುಗಡೆಗೊಳಿಸಿ ಮಾತನಾಡಿದರು.
ದೇವಸ್ಥಾನದ ಅರ್ಚಕ ಎಚ್.ಪದ್ಮನಾಭ ಭಟ್ ದೇವತಾ ಪ್ರಾರ್ಥನೆ ನೆರವೇರಿಸಿದರು. ವೈ.ಗಣಪತಿ ಭಟ್, ದೇಗುಲದ ಆನುವಂಶಿಕ ಮೊಕ್ತೇಸರ ಪಡುಬಿದ್ರಿ ಪೇಟೆಮನೆ ಭವಾನಿ ಶಂಕರ ಹೆಗ್ಡೆ, ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿಗಳ ಪದಾಧಿಕಾರಿಗಳಾಗಿರುವ ಪಿ.ರವೀಂದ್ರನಾಥ ಜಿ.ಹೆಗ್ಡೆ, ಪಿ.ರಾಘವೇಂದ್ರ ನಾವಡ, ಸುರೇಶ್ ರಾವ್, ಶ್ರೀನಾಥ್ ಹೆಗ್ಡೆ, ವೈ.ಸುಕುಮಾರ್, ಮುರಳೀನಾಥ ಶೆಟ್ಟಿ, ವೈ.ಎನ್.ರಾಮಚಂದ್ರ ರಾವ್, ನವೀನ್‌ಚಂದ್ರ ಜೆ.ಶೆಟ್ಟಿ, ನವೀನ್ ಎನ್.ಶೆಟ್ಟಿ, ಪ್ರೇಮನಾಥ್ ಶೆಟ್ಟಿ, ಪಿ.ಸದಾಶಿವ ಆಚಾರ್, ಹರಿಕೃಷ್ಣ ರಾವ್ ಮುರುಡಿ, ವಿಶುಕುಮಾರ್ ಶೆಟ್ಟಿವಾಲ್, ಮಾಧವ ಶೆಟ್ಟಿ, ರವಿ ಶೆಟ್ಟಿ, ಅನಿಲ್ ಕುಮಾರ್ ಶೆಟ್ಟಿ, ಪ್ರಶಾಂತ್ ಶೆಣೈ, ನಾರಾಯಣ ರಾವ್ ಕಿನ್ನಿಶಂಕರ, ಗಣೇಶ್ ಗುಜರಾನ್, ಸದಾಶಿವ ಪಡುಬಿದ್ರಿ, ಶಶಿಕಾಂತ್ ಪಡುಬಿದ್ರಿ, ಸುರೇಶ್ ಪಡುಬಿದ್ರಿ, ಸುರೇಶ್, ರಮಾಕಾಂತ ರಾವ್, ಪಿ.ಕೆ.ರಾಮಚಂದ್ರ ರಾವ್ ಮತ್ತಿತರರಿದ್ದರು. ಶ್ರೀಧರ ಆಚಾರ್ ಕಾರ್ಯಕ್ರಮ ನಿರ್ವಹಿಸಿದರು.