stray dog 
ಉಡುಪಿ

ಬೀದಿನಾಯಿಗಳಿಂದ ಪಾರಾಗಲು ಓಡಿದ ಬಾಲಕ ಬಿದ್ದು ಗಾಯ

ಕಾಸರಗೋಡು: ಬಂದ್ಯೋಡು ಸನಿಹದ ಅಡ್ಕ ಎಂಬಲ್ಲಿ ಬೀದಿ ನಾಯಿಗಳ ದಾಳಿಯಿಂದ ಪಾರಾಗಲು ಓಡಿದ ಮದ್ರಸಾ ವಿದ್ಯಾರ್ಥಿ, ಅಡ್ಕ ನಿವಾಸಿ ಝಯಾನ್ ಗಾಯಗೊಂಡಿದ್ದಾನೆ.

ಗುರುವಾರ ಬೆಳಗ್ಗೆ ಮದ್ರಸಾಗೆ ತೆರಳಲು ಮನೆಯಿಂದ ಹೊರಟಿದ್ದ ಈತನ ಮೇಲೆ ಬೀದಿನಾಯಿ ದಾಳಿಗೆ ಮುಂದಾಗಿದ್ದು, ಈ ಸಂದರ್ಭ ಬಾಲಕ ಬೊಬ್ಬಿಡುತ್ತಿದ್ದಂತೆ ಸಮೀಪದ ಮನೆಯವರು ಆಗಮಿಸಿ ರಕ್ಷಿಸಿದ್ದರು. ನಾಯಿಗಳಿಂದ ಪಾರಾಗಲು ಓಡುತ್ತಿದ್ದಾಗ ಬಿದ್ದು ಗಾಯಗೊಂಡಿದ್ದಾನೆ.