ಉಪ್ಪಿನಂಗಡಿ ಸರ್ಕಾರಿ ಪಪೂ ಕಾಲೇಜಿನಲ್ಲಿ ಅಭಿನಂದನಾ ಕಾರ್ಯಕ್ರಮದಲ್ಲಿ ವಿಲಾಸ್ ಕುಮಾರ್ ಮಾತನಾಡಿದರು. ಪ್ರಮುಖರಾದ ಡಾ.ರಾಜಾರಾಮ್ ಕೆ.ಬಿ., ರತ್ನಾಕರ ಪೈ, ಲಕ್ಷ್ಮೀನಾರಾಯಣ ನಾಯಕ್ ಮೊದಲಾದವರಿದ್ದರು.  
ಉಡುಪಿ

ಮೌಲ್ಯಧಾರಿತ ಶಿಕ್ಷಣದಿಂದ ಬಾಂಧವ್ಯ ಬೆಸುಗೆ

ಇಂದಿರಾ ಎನ್ ಕೆ
ಉಪ್ಪಿನಂಗಡಿ: ನೂರಕ್ಕೆ ನೂರು ಅಂಕ ಗಳಿಸುವುದು ಶಿಕ್ಷಣವಲ್ಲ. ಬದುಕು ಕಟ್ಟಿಕೊಳ್ಳುವುದನ್ನು ಕಲಿಸುವುದೇ ನಿಜವಾದ ಶಿಕ್ಷಣ. ಮೌಲ್ಯಧಾರಿತ ಶಿಕ್ಷಣದಿಂದ ಮಾತ್ರ ಬಾಂಧವ್ಯದ ಬೆಸುಗೆ ಸಾಧ್ಯ ಎಂದು ಹಿರಿಯ ದಂತ ವೈದ್ಯ ಡಾ.ರಾಜಾರಾಮ್ ಕೆ.ಬಿ. ಹೇಳಿದರು.
ಉಪ್ಪಿನಂಗಡಿ ಸರ್ಕಾರಿ ಪಪೂ ಕಾಲೇಜಿನಲ್ಲಿ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಳ ವತಿಯಿಂದ ನೀಡಲಾದ ಸಿಸಿ ಕ್ಯಾಮರಾ, ಕಾಲೇಜಿನಲ್ಲಿ ಆರಂಭಿಸಲಾದ ಜಿಮ್ ಕೇಂದ್ರ ಮತ್ತು ದ.ಕ. ಜಿಲ್ಲಾ ಅಟೋಮೊಬೈಲ್ಸ್ ಮತ್ತು ಟಯರ್ ಅಸೋಸಿಯೇಷನ್ ವತಿಯಿಂದ ನೀಡಲಾದ ಶುದ್ಧ ಕುಡಿಯುವ ನೀರಿನ ಘಟಕಗಳ ಉದ್ಘಾಟನೆ, ಉಪನ್ಯಾಸಕರು ಹಾಗೂ ದಾನಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಅಜೀಝ್ ಬಸ್ತಿಕ್ಕಾರ್ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಅಟೋಮೊಬೈಲ್ಸ್ ಮತ್ತು ಟಯರ್ ಅಸೋಸಿಯೇಷನ್ ಅಧ್ಯಕ್ಷ ವಿಲಾಸ್ ಕುಮಾರ್, ಸಲಹೆಗಾರ ರತ್ನಾಕರ ಪೈ, ಖಜಾಂಚಿ ಲಕ್ಷ್ಮೀನಾರಾಯಣ ನಾಯಕ್, ವ್ಯವಸ್ಥಾಪಕ ರಾಮದಾಸ್, ಸದಸ್ಯ ಕೇಶವ, ಎಸ್‌ಡಿಎಂಸಿ ಅಧ್ಯಕ್ಷೆ ಗುಣವತಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ವೆಂಕಪ್ಪ ಪೂಜಾರಿ, ಪ್ರಾಂಶುಪಾಲ ಇಬ್ರಾಹಿಂ, ಉಪ್ಪಿನಂಗಡಿ ಗ್ರಾಪಂ ಮಾಜಿ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯ ತೌಸೀಫ್ ಯು.ಟಿ., ಪ್ರೌಢಶಾಲೆ ಮುಖ್ಯಶಿಕ್ಷಕಿ ದೇವಕಿ, ನಿವೃತ ಯೋಧ ಜಯಕುಮಾರ್ ಪೂಜಾರಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಅನಿ ಮಿನೇಜಸ್, ನಾಗೇಶ್ ಪ್ರಭು, ಆದಂ ಕೊಪ್ಪಳ, ಮಜೀದ್ ಮಠ, ಡಾ.ನಿರಂಜನ್ ರೈ, ಜಾನ್ ಕೆನ್ಯೂಟ್, ಪ್ರಮುಖರಾದ ಯೂಸುಫ್ ಹಾಜಿ ಉಪಸ್ಥಿತರಿದ್ದರು.