ಬೊಳ್ಮಲೆ ಸೇತುವೆ ಮುಳುಗಡೆಗೊಂಡು ಸಂಚಾರ ಸ್ಥಗಿತಗೊಂಡಿತ್ತು. 
ಉಡುಪಿ

ಬೊಳ್ಮಲೆ ಸೇತುವೆ ಬ್ಲಾಕ್

ಇಂದಿರಾ ಎನ್ ಕೆ

ಸುಬ್ರಹ್ಮಣ್ಯ: ಪಂಜ ಪರಿಸರದಲ್ಲಿ ಮಂಗಳವಾರ ಭಾರೀ ಮಳೆಯಾದ ಕಾರಣ ಪಂಜ ಹೊಳೆ ತುಂಬಿ ಹರಿಯಿತು. ಇದರಿಂದಾಗಿ ಹೊಳೆಯು ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯನ್ನು ವ್ಯಾಪಿಸಿ ಸುಬ್ರಹ್ಮಣ್ಯ-ಪುತ್ತೂರು ಸಂಚಾರ ಅಲ್ಪಕಾಲ ಸ್ಥಗಿತವಾಯಿತು.

ಭಾರಿ ಪ್ರವಾಹದಿಂದ ಬೊಳ್ಮಲೆ ಸೇತುವೆ ಬಂದ್ ಆಯಿತು. ಇದರಿಂದಾಗಿ ಬೊಳ್ಮಲೆ-ಬಸ್ತಿಕಾಡು ಸಂಚಾರ ಸ್ಥಗಿತವಾಯಿತು. ಕುಮಾರಧಾರಾದಲ್ಲಿ ನೀರಿನ ಮಟ್ಟ ಅಧಿಕವಾದ ಕಾರಣ ಪಂಜ-ಕಡಬ ರಸ್ತೆಯ ಪುಳಿಕುಕ್ಕು ಎಂಬಲ್ಲಿ ನದಿ ನೀರು ರಸ್ತೆಗೆ ವ್ಯಾಪಿಸಿತ್ತು.
ಪಂಜ ಹೊಳೆಯಲ್ಲಿ ನೀರಿನ ಪ್ರವಾಹ ಅಧಿಕವಾದ ಕಾರಣ ಸಮೀಪದ ತೋಟಗಳಿಗೆ ನೀರು ನುಗ್ಗಿ ಫಲವಸ್ತುಗಳು ಕೊಚ್ಚಿ ಹೋಗಿವೆ. ಬಳ್ಪ, ಕೇನ್ಯ, ಬೀದಿಗುಡ್ಡೆ, ಎಣ್ಣೆಮಜಲು, ಸಂಪ್ಯಾಡಿ, ಅಡ್ಡಬೈಲು, ಪಂಜ, ಬೊಳ್ಮಲೆ, ಕರಿಕ್ಕಳ, ನಿಡ್ವಾಳ, ನಿಂತಿಕಲ್ಲು, ಅಲೆಕ್ಕಾಡಿ, ನಿಂತಿಕಲ್ಲು ಪ್ರದೇಶದಲ್ಲಿ ಮಂಗಳವಾರ ಭಾರಿ ಮಳೆ ಸುರಿದಿದೆ. ಇದರಿಂದಾಗಿ ಇಲ್ಲಿ ನದಿ, ತೊರೆ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ.